ಬೆಂಗಳೂರು ಟೆಸ್ಟ್: ಭಾರತ 474 ಕ್ಕೆ ಆಲೌಟ್, ಕುಸಿತ ಕಂಡ ಅಫ್ಘಾನಿಸ್ತಾನ್

     

Last Updated : Jun 15, 2018, 02:16 PM IST
ಬೆಂಗಳೂರು ಟೆಸ್ಟ್: ಭಾರತ 474 ಕ್ಕೆ ಆಲೌಟ್, ಕುಸಿತ ಕಂಡ ಅಫ್ಘಾನಿಸ್ತಾನ್  title=

ಬೆಂಗಳೂರು: ಇಂದು ಆಫ್ಘಾನಿಸ್ತಾನದ ವಿರುದ್ಧ ಎರಡನೇ ದಿನದಾಟ ಮುಂದುವರೆಸಿದ ಭಾರತ ತಂಡವು ಹಾರ್ದಿಕ್ ಪಾಂಡ್ಯ ಅವರ (71) ಅರ್ಧಶತಕದ ನೆರವಿಂದ 400 ಗಡಿ ದಾಟಿದ ಭಾರತ ಅಂತಿಮವಾಗಿ 474 ರನ್ ಗೆ ಆಲೌಟ್ ಆಯಿತು. 

ಇದನ್ನು ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಭೀತಿಯನ್ನು ಎದುರಿಸುತ್ತಿದೆ. ಭಾರತದ ಪರ ಇಶಾಂತ್ ಶರ್ಮಾ ಮತ್ತು ಆರ್ ಅಶ್ವಿನ್ ಅವರ ಕರಾರುವಾಕ್ಕಾದ ಬೌಲಿಂಗ್ ದಾಳಿಯಿಂದಾಗಿ ಈಗಾಗಲೇ 88 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ. 

ಇದೇ ಮೊದಲ ಬಾರಿಗೆ ಟೆಸ್ಟ್ ಆಡುವ 12 ನೇ ದೇಶವಾಗಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅಫ್ಘಾನಿಸ್ತಾನ್ ತಂಡವು ಈಗ ತನ್ನ ಮೊದಲ ಇನ್ನಿಂಗ್ಸ್ ನ ಆರಂಭದಲ್ಲೇ ಆಘಾತವನ್ನು ಅನುಭವಿಸಿದೆ ಎಂದು ಹೇಳಬಹುದು. 

Trending News