68ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಈ ನ್ಯೂಜಿಲೆಂಡ್ ಆಟಗಾರನ ಬಗ್ಗೆ ಗೊತ್ತೇ?

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ವರ್ಷಕ್ಕೆ  ನಿವೃತ್ತಿ  ಘೋಷಿಸಿವುದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ಒಳಗಡೆ, ಆದರೆ ನ್ಯೂಜಿಲೆಂಡ್ ತಂಡದ ಈ ಆಟಗಾರನೊಬ್ಬ ಬರೋಬ್ಬರಿ 68 ನೇ ವಯಸ್ಸಿಗೆ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾನೆ. 

Last Updated : Jan 27, 2019, 01:39 PM IST
68ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಈ ನ್ಯೂಜಿಲೆಂಡ್ ಆಟಗಾರನ ಬಗ್ಗೆ ಗೊತ್ತೇ? title=
file photo

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ವರ್ಷಕ್ಕೆ  ನಿವೃತ್ತಿ  ಘೋಷಿಸಿವುದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ಒಳಗಡೆ, ಆದರೆ ನ್ಯೂಜಿಲೆಂಡ್ ತಂಡದ ಈ ಆಟಗಾರನೊಬ್ಬ ಬರೋಬ್ಬರಿ 68 ನೇ ವಯಸ್ಸಿಗೆ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾನೆ. 

ಹೌದು, ನ್ಯೂಜಿಲೆಂಡ್ ತಂಡದ ಮಾಜಿ ವೇಗದ ಬೌಲರ್ ಇವೆನ್ ಚಾಟ್ಫಿಲ್ಡ್ ಈಗ 68ನೇ ವಯಸ್ಸಿನಲ್ಲಿ ಸ್ಥಳೀಯ ಕ್ಲಬ್ ನಯೆನೆ ಓಲ್ಡ್ ಬಾಯ್ಸ್ ನಲ್ಲಿ ಆಡುವ ಮೂಲಕ ತಮ್ಮ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದರು.

ಇದಾದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಚಾಟ್ಫಿಲ್ಡ್  "ನಾನು 68 ವಯಸ್ಸಿನಲ್ಲಿಯೂ ಕೂಡ ಗುಣಮಟ್ಟವನ್ನು ಹೊಂದಿದ್ದೆನೆಂದರೆ ಅದು ಸಿಲ್ಲಿ ಅನಿಸುತ್ತದೆ. ನನಗೆ ಆ ಗುಣಮಟ್ಟದಲ್ಲಿ ಆಡಲು ಸಾಧ್ಯವಾಗದಿದ್ದಲ್ಲಿ ಆಗ ಅದು ಆಟಕ್ಕೆ ನಿವೃತ್ತಿ ಹೊಂದುವ ಸಮಯ ಎಂದು ಅವರು ತಿಳಿಸಿದರು.

ಚಾಟ್ಫಿಲ್ಡ್ ಅವರು 80 ರ ದಶಕದಲ್ಲಿ ನಾಯಿನೆ ಎಕ್ಸ್ಪ್ರೆಸ್ ಎಂದೇ ಅವರು ಖ್ಯಾತಿ ಪಡೆದಿದ್ದರು. 1975 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪನೆಗೊಂಡಿದ್ದರು

Trending News