ಕೆ ಎಲ್ ರಾಹುಲ್ ಮದುವೆಗೆ ವಿರಾಟ್ ಮತ್ತು ಧೋನಿ ನೀಡಿದ ಗಿಫ್ಟ್ ಮೌಲ್ಯ ಎಷ್ಟು ಗೊತ್ತಾ ?

KL Rahul And Athiya shetty Marriage Gift:ಕೆ ಎಲ್  ರಾಹುಲ್ ಮತ್ತು ಆಥಿಯಾ ಶೆಟ್ಟಿಗೆ  ಉಡುಗೊರೆಗಳ ಮಹಾಪೂರವೇ ಬಂದಿದೆ. ಈ ಪೈಕಿ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನೀಡಿರುವ ಉಡುಗೊರೆಗಳು  ಭಾರೀ ಸದ್ದು ಮಾಡುತ್ತಿವೆ.  

Written by - Ranjitha R K | Last Updated : Jan 26, 2023, 02:32 PM IST
  • ವಿವಾಹ ಬಂಧನದಲ್ಲಿ ರಾಹುಲ್ ಆಥಿಯಾ
  • ಹರಿದು ಬಂದಿದೆ ಭಾರೀ ಉಡುಗೊರೆ
  • ಗಮನ ಸೆಳೆಯುತ್ತಿದೆ ಕೋಟಿಗಟ್ಟಲೆ ಮೌಲ್ಯದ ಉಡುಗೊರೆ
ಕೆ ಎಲ್ ರಾಹುಲ್ ಮದುವೆಗೆ ವಿರಾಟ್ ಮತ್ತು ಧೋನಿ ನೀಡಿದ ಗಿಫ್ಟ್ ಮೌಲ್ಯ ಎಷ್ಟು ಗೊತ್ತಾ ?  title=

KL Rahul And Athiya shetty Marriage Gift : ಟೀಂ ಇಂಡಿಯಾದ ಸ್ಟಾರ್ ಓಪನರ್ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹಳ ವರ್ಷಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ, ಜನವರಿ 23 ರಂದು  ವೋವಹಾ ಬಂಧನದಲ್ಲಿ ಒಂದಾಗಿದ್ದಾರೆ. ಭಾರತ-ನ್ಯೂಜಿಲೆಂಡ್ ಸರಣಿಯಿಂದಾಗಿ ಕೆಎಲ್ ರಾಹುಲ್ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದು ಟೀಂ ಇಂಡಿಯಾ ಆಟಗಾರರಿಗೆ ಸಾಧ್ಯವಾಗಲಿಲ್ಲ. ಆದರೆ ಇವರಿಂದ ಉಡುಗೊರೆಗಳ ಮಹಾಪೂರವೇ ಬಂದಿದೆ. ಈ ಪೈಕಿ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನೀಡಿರುವ ಉಡುಗೊರೆಗಳು ಭಾರೀ ಸದ್ದು ಮಾಡುತ್ತಿವೆ. 

ಕೋಟಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ ವಿರಾಟ್ ಕೊಹ್ಲಿ :
ವರದಿಗಳ ಪ್ರಕಾರ  ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿಗೆ ವಿರಾಟ್ ಕೊಹ್ಲಿ ಬಿಎಂಡಬ್ಲ್ಯು ಕಾರನ್ನು ಮದುವೆಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ 2.17 ಕೋಟಿ ಎಂದು ಹೇಳಲಾಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಬಹಳ ಕಾಲದಿಂದ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದಾರೆ. 

ಇದನ್ನೂ ಓದಿ : IND vs NZ: ಪಾಂಡ್ಯರಿಂದ ಸಿಗುತ್ತಾ ಈ ಆಟಗಾರನಿಗೆ ಅವಕಾಶ: ಒಂದೇ ಒಂದು ಚಾನ್ಸ್ ಗಾಗಿ ಹಾತೊರೆಯುತ್ತಿದ್ದಾರೆ ಈ ಕ್ರಿಕೆಟರ್!

ಧೋನಿಯಿಂದಲೂ ದುಬಾರಿ ಉಡುಗೊರೆ :   
ಭಾರತದ ಮಾಜಿ ನಾಯಕ ಎಂಎಸ್ ಧೋನಿ ಕೆಎಲ್ ರಾಹುಲ್ ಮದುವೆಗೆ ಆಗಮಿಸಿದ್ದರು. ಎಂಎಸ್ ಧೋನಿ ಬೈಕ್ ಇಷ್ಟಪಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಧೋನಿ ಕೆಎಲ್ ರಾಹುಲ್ ಗೆ ಬೈಕನ್ನೇ  ಗಿಫ್ಟ್ ನೀಡಿದ್ದಾರೆ. ಕೆಎಲ್ ರಾಹುಲ್ ಗೆ ಕವಾಸಕಿ ನಿಂಜಾ ಬೈಕ್ ಉಡುಗೊರೆಯಾಗಿ ನೀಡಿದ್ದು, ಇದರ ಬೆಲೆ 80 ಲಕ್ಷ ರೂ. 

ಈ ಸೆಲೆಬ್ರಿಟಿಗಳಿಂದಲೂ  ಉಡುಗೊರೆ :  
ಭಾರತೀಯ ಕ್ರಿಕೆಟಿಗರಲ್ಲದೆ, ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಈ ಜೋಡಿಗೆ 1.64 ಕೋಟಿ ರೂಪಾಯಿ ಮೌಲ್ಯದ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದರೆ, ಸುನೀಲ್ ಶೆಟ್ಟಿ ಮುಂಬೈನಲ್ಲಿ 50 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅರ್ಜುನ್ ಕಪೂರ್ ಆಥಿಯಾ ಶೆಟ್ಟಿಗೆ ವಜ್ರದ ಬ್ರೇಸ್ ಲೈಟ್ ಅನ್ನು ಗಿಫ್ಟ್ ಮಾಡಿದ್ದು, ಇದರ ಬೆಲೆ 1.5 ಕೋಟಿ ಎಂದು ಹೇಳಲಾಗಿದೆ. ಇದಲ್ಲದೇ ಜಾಕಿ ಶ್ರಾಫ್ ಅಥಿಯಾಗೆ 30 ಲಕ್ಷ ಮೌಲ್ಯದ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ : Virat Kohli : ನಾನು ನಂಬರ್-1, ನನ್ನ ನಂತರ ವಿರಾಟ್.. ಪಾಕ್ ಕ್ರಿಕೆಟಿಗನ ವಿವಾದಿತ ಹೇಳಿಕೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News