ನಪೋಲಿ: ಇಟಲಿಯ ನಾಪೋಲಿಯಲ್ಲಿ ನಡೆದ 30ನೇ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಭಾರತದ ನಂ.1 ವೇಗದ ಓಟಗಾರ್ತಿ ದ್ಯುತಿ ಚಾಂದ್ ಮಹಿಳೆಯರ 100 ಮೀಟರ್ ವೇಗದ ಓಟದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
23 ರ ಹರೆಯದ ದ್ಯುತಿ ಚಾಂದ್ ಸೆಮಿಫೈನಲ್ ಓಟದಲ್ಲಿ 11.41 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸುವ ಮೂಲಕ ಫೈನಲ್ಗೆ ಅರ್ಹತೆ ಪಡೆದಿದ್ದರು. ಅಂತೆಯೇ ಅಂತಿಮ ಸುತ್ತಿನ ಓಟದಲ್ಲಿ 11.32 ಸೆಕೆಂಡುಗಳಲ್ಲಿ 100 ಮೀ. ಅಂತರವನ್ನು ಕ್ರಮಿಸುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.
ಪ್ರಸಕ್ತ ಪಂದ್ಯಗಳ ಆವೃತ್ತಿಯಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ. ಯೂನಿವರ್ಸಿಟಿ ಕ್ರೀಡಾಕೂಟದ ಇತಿಹಾಸದಲ್ಲೇ 100 ಮೀ. ವಿಭಾಗದ ಫೈನಲ್ಗೆ ಇದುವರೆಗೂ ಯಾವ ಭಾರತೀಯರೂ ಅರ್ಹತೆ ಪಡೆದಿರಲಿಲ್ಲ.
"ವರ್ಷಗಳ ಕಠಿಣ ಪರಿಶ್ರಮ ಮತ್ತು ನಿಮ್ಮ ಆಶೀರ್ವಾದದಿಂದ, ನಪೋಲಿಯ ದಿ ವರ್ಲ್ಡ್ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ 11.32 ಸೆಕೆಂಡುಗಳಲ್ಲಿ 100 ಮೀ ಡ್ಯಾಶ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದಿದ್ದೇನೆ" ಎಂದು ಚಾಂದ್ ಬುಧವಾರ ಟ್ವೀಟ್ ಮಾಡಿದ್ದಾರೆ.
ವಿಶ್ವಮಟ್ಟದಲ್ಲಿ ದಾಖಲೆ ಬರೆದ ದುತಿ ಚಾಂದ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
Respected @narendramodi Sir, thank you for your wishes. This is a huge honour for me. Will continue to do my best to bring more accolades for our great country. 🇮🇳 https://t.co/GijWHqU9Hr
— Dutee Chand (@DuteeChand) July 10, 2019
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಹ ದುತಿ ಚಾಂದ್ ಗೆ ಅಭಿನಂದಿಸಿದ್ದು, ಇದು ಭಾರತಕ್ಕೆ ಮೊದಲ ಚಿನ್ನದ ಪದಕವಾಗಿದ್ದು, ದೇಶದ ಹೆಮ್ಮೆಯಾಗಿದೆ. ಮತ್ತಷ್ಟು ಪ್ರಿಶ್ರಮದೊಂದಿಗೆ ಒಲಂಪಿಕ್ ಕ್ರೀಡಾಕೂಟದತ್ತ ಗಮನಹರಿಸುವಂತೆ ಟ್ವೀಟ್ ಮಾಡಿದ್ದಾರೆ.
Thank you, sir. I will try my best to bring Olympics Gold Medal home. Once again, many thanks for your blessings. https://t.co/GuNzuhu6Yd
— Dutee Chand (@DuteeChand) July 10, 2019