ʼಹ್ಯಾಪಿ ಬರ್ತ್‌ಡೇ ಕೊಹ್ಲಿ ಸಾಬ್‌ʼ : ವೈರಲ್‌ ಆಗ್ತಿದೆ ಡೊನಾಲ್ಡ್‌ ಟ್ರಂಪ್‌ ಪೋಸ್ಟ್‌...!

ಇಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕಿಂಗ್‌ ವಿರಾಟ್‌ ಕೊಹ್ಲಿಯ ಹುಟ್ಟು ಹಬ್ಬ. ಸ್ಟಾರ್‌ ನಟರು ಸೇರಿದಂತೆ ವಿಶ್ವದ ಗಣ್ಯ ವ್ಯಕ್ತಿಗಳು ಸಹ ಕೊಹ್ಲಿಗೆ ಬರ್ತ್‌ಡೇ ವಿಶ್‌ ಮಾಡುತ್ತಿದ್ದಾರೆ. ಸದ್ಯ ಡೊನಾಲ್ಡ್‌ ಟ್ರಂಪ್‌ ವಿರಾಟ್‌ ಬರ್ತ್‌ಡೇಗೆ ವಿಶ್‌ ಮಾಡಿರುವ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಬಿದ್ದು ಬಿದ್ದು ನಗುತ್ತಿದ್ದಾರೆ.

Written by - Krishna N K | Last Updated : Nov 5, 2022, 02:13 PM IST
  • ವೈರಲ್‌ ಆಗ್ತಿದೆ ಡೊನಾಲ್ಡ್‌ ಟ್ರಂಪ್‌ ಪೋಸ್ಟ್‌
  • ಹ್ಯಾಪಿ ಬರ್ತ್‌ಡೇ ಕೊಹ್ಲಿ ಸಾಬ್‌ ಎಂದು ವಿರಾಟ್‌ ಬರ್ತ್‌ಡೇ ವಿಶ್‌ ಮಾಡಿದ ಟ್ರಂಪ್‌
  • ಪೋಸ್ಟ್‌ ನೋಡಿ ಕಂಗಾಲಾದ ವಿರಾಟ್‌ ಫ್ಯಾನ್ಸ್‌
ʼಹ್ಯಾಪಿ ಬರ್ತ್‌ಡೇ ಕೊಹ್ಲಿ ಸಾಬ್‌ʼ : ವೈರಲ್‌ ಆಗ್ತಿದೆ ಡೊನಾಲ್ಡ್‌ ಟ್ರಂಪ್‌ ಪೋಸ್ಟ್‌...! title=

ಬೆಂಗಳೂರು : ಇಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕಿಂಗ್‌ ವಿರಾಟ್‌ ಕೊಹ್ಲಿಯ ಹುಟ್ಟು ಹಬ್ಬ. ಸ್ಟಾರ್‌ ನಟರು ಸೇರಿದಂತೆ ವಿಶ್ವದ ಗಣ್ಯ ವ್ಯಕ್ತಿಗಳು ಸಹ ಕೊಹ್ಲಿಗೆ ಬರ್ತ್‌ಡೇ ವಿಶ್‌ ಮಾಡುತ್ತಿದ್ದಾರೆ. ಸದ್ಯ ಡೊನಾಲ್ಡ್‌ ಟ್ರಂಪ್‌ ವಿರಾಟ್‌ ಬರ್ತ್‌ಡೇಗೆ ವಿಶ್‌ ಮಾಡಿರುವ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಬಿದ್ದು ಬಿದ್ದು ನಗುತ್ತಿದ್ದಾರೆ.

ಹೌದು, ಡೊನಾಲ್ಡ್‌ ಟ್ರಂಪ್‌ ಎಂಬ ಫೇಕ್‌ ಟ್ಟಿಟರ್‌ ಖ್ಯಾತೆಯಲ್ಲಿ ಈ ಪೋಸ್ಟ್‌ ಮಾಡಲಾಗಿದೆ. ಕೊಹ್ಲಿ ಬಾಲಕನಾಗಿದ್ದಾಗಿನ ಫೋಟೋ ಜೊತೆಗೆ ʼಹ್ಯಾಪಿ ಬರ್ತ್‌ಡೇ ಕೊಹ್ಲಿ ಸಾಬ್‌ʼ ಎಂದು ಶೀರ್ಷಿಕೆ ಬರೆಯಲಾಗಿದೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ, ವೈರಲ್‌ ಆಗುತ್ತಿರುವ ಪೋಸ್ಟ್‌ಗೆ ನೆಟ್ಟಿಗರು ಫೇಕ್‌, ಸೂಪರ್‌, ಮಸ್ಕ್‌ ಪಾಗಲ್‌ ಹೋ ಗಯಾ.. ಸೇರಿದಂತೆ ಹಲವು ಫನ್ನಿ ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Virat Kohli Birthday Special: ಅಪ್ಪನ ಕನಸು-ಅಣ್ಣನಿಗೆ ಕೊಟ್ಟ ಮಾತು…ವಿರಾಟ್ ಕೊಹ್ಲಿ ಜೀವನದ ಈ ಕಣ್ಣೀರ ಕಥೆ ಕೇಳಿ

ಭಾರತದ ಸ್ಟಾರ್ ಬ್ಯಾಟರ್ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು 34 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು 1988 ರ ನವೆಂಬರ್ 5 ರಂದು ದೆಹಲಿಯಲ್ಲಿ ಜನಿಸಿದರು. ಇವರ ಸಾಧನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಸೆಲೆಬ್ರಿಟಿ ಲೋಕದಲ್ಲಿ ಮಾದರಿ ಜೋಡಿ ಎಂಬಂತೆ ಬದುಕುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News