ಟೀಂ ಇಂಡಿಯಾ ವಿಕೆಟ್‌ ಕೀಪರ್‌ Dinesh Karthik ಬರ್ತ್‌ಡೇ ಸ್ಪೆಷಲ್‌: ಇಲ್ಲಿದೆ ಡಿಕೆ ಸಾಧನಾಹಾದಿ

2007 ರಲ್ಲಿ ಫಾರ್ಮ್ ಕುಸಿತದ ನಂತರ, ಕಾರ್ತಿಕ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಆದರೆ ಅವರು 2018 ಮತ್ತು 2020 ರ ನಡುವೆ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಇನ್ನು 2021-22ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಬ್ರಿಟಿಷ್ ಚಾನೆಲ್ ಸ್ಕೈ ಸ್ಪೋರ್ಟ್ಸ್‌ಗೆ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. 

Written by - Bhavishya Shetty | Last Updated : Jun 1, 2022, 01:45 PM IST
  • ದಿನೇಶ್ ಕಾರ್ತಿಕ್‌ಗೆ ಇಂದು 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
  • ಭಾರತೀಯ ಕ್ರಿಕೆಟ್‌ ಲೋಕದ ದಿಗ್ಗಜ ಡಿಕೆ
  • ಐಪಿಎಲ್‌ನಲ್ಲಿ ದಿನೇಶ್‌ ಸಾಧನೆ ಹೀಗಿದೆ
ಟೀಂ ಇಂಡಿಯಾ ವಿಕೆಟ್‌ ಕೀಪರ್‌ Dinesh Karthik ಬರ್ತ್‌ಡೇ ಸ್ಪೆಷಲ್‌: ಇಲ್ಲಿದೆ ಡಿಕೆ ಸಾಧನಾಹಾದಿ title=
Dinesh Karthik

ಟೀಂ ಇಂಡಿಯಾದ ವಿಕೆಟ್‌ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ಗೆ ಇಂದು 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಜೂನ್‌ 1, 1985ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ದಿನೇಶ್ ಕಾರ್ತಿಕ್‌ ಭಾರತೀಯ ಕ್ರಿಕೆಟ್‌ ಲೋಕದ ದಿಗ್ಗಜ ಎಂದೇ ಹೇಳಬಹುದು. ಮುಂಬರುವ ಭಾರತ-ದಕ್ಷಿಣ ಆಫ್ರಿಕಾ ಐದು ದಿನಗಳ ಟಿ20 ಸರಣಿಯಲ್ಲಿ ದಿನೇಶ್‌ ಕಾರ್ತಿಕ್‌ ತಮ್ಮ ಅದ್ಭುತ ಆಟ ಪ್ರದರ್ಶಿಸಲಿದ್ದಾರೆ. 

ಇದನ್ನು ಓದಿ: India-South Africa T20: ದ.ಆಫ್ರಿಕಾಗೆ ಮಾರಕವಾಗುತ್ತಾರಾ ಭಾರತದ ಈ ಕ್ರಿಕೆಟ್‌ ಆಟಗಾರ?

ತಮಿಳುನಾಡು ಕ್ರಿಕೆಟ್ ತಂಡದ ನಾಯಕರಾಗಿದ್ದ ಕಾರ್ತಿಕ್ ಅವರು 2004ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರು 300 ಟಿ20 ಪಂದ್ಯಗಳನ್ನು ಆಡಿದ 4 ನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ದಿನೇಶ್‌ ಕಾರ್ತಿಕ್‌ ಬಾಂಗ್ಲಾದೇಶದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದ್ದಾರೆ. ಇನ್ನು ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪ್ರವಾಸದಲ್ಲಿ ಭಾರತದ ಪ್ರಮುಖ ಸ್ಕೋರರ್ ಆಗಿ ಹೊರ ಹೊಮ್ಮಿದ ಅವರು  21 ವರ್ಷಗಳಲ್ಲಿ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಸರಣಿಯನ್ನು ಗೆಲ್ಲಲು ಭಾರತಕ್ಕೆ ಸಹಾಯ ಮಾಡಿದ್ದರು. 

2007 ರಲ್ಲಿ ಫಾರ್ಮ್ ಕುಸಿತದ ನಂತರ, ಕಾರ್ತಿಕ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಆದರೆ ಅವರು 2018 ಮತ್ತು 2020 ರ ನಡುವೆ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಇನ್ನು 2021-22ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಬ್ರಿಟಿಷ್ ಚಾನೆಲ್ ಸ್ಕೈ ಸ್ಪೋರ್ಟ್ಸ್‌ಗೆ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. 

ಇನ್ನು ವೈವಾಹಿಕ ಜೀವನದ ಬಗ್ಗೆ ನೋಡೋದಾದ್ರೆ ದಿನೇಶ್‌ ಕಾರ್ತಿಕ್ 2007ರಲ್ಲಿ ನಿಕಿತಾ ವಂಜಾರಾ ಎಂಬವರನ್ನು ವಿವಾಹವಾದರು. ಆದರೆ ಅವರ ಸಂಬಂಧದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ 2012 ರಲ್ಲಿ ವಿಚ್ಛೇದನ ಪಡೆದರು. ಬಳಿಕ 2008ರಲ್ಲಿ ನಿಗಾರ್ ಖಾನ್ ಅವರೊಂದಿಗೆ ಏಕ್ ಕಿಲಾಡಿ ಏಕ್ ಹಸೀನಾ ಡ್ಯಾನ್ಸ್‌-ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.

2013ರಲ್ಲಿ, ದಿನೇಶ್‌ ಕಾರ್ತಿಕ್ ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. 2015 ರಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಾಂಪ್ರದಾಯದ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ದಂಪತಿಗೆ ಇಬ್ಬರು ಮುದ್ದಾದ ಅವಳಿ ಮಕ್ಕಳಿದ್ದು, ಅವರಿಗೆ ಕಬೀರ್ ಮತ್ತು ಜಿಯಾನ್ ಎಂದು ನಾಮಕರಣ ಮಾಡಲಾಗಿದೆ.

ಇದನ್ನು ಓದಿ: Tilak Varma IPL 2022: ವಿರಾಟ್ ಕೊಹ್ಲಿಗೆ ಮಾರಕವಾಗಬಹುದು 19ರ ಹರೆಯದ ಈ ಆಟಗಾರ ..! ಶೀಘ್ರದಲ್ಲೇ ಸಿಗಲಿದೆ ಅವಕಾಶ

ಐಪಿಎಲ್‌ನಲ್ಲಿ ದಿನೇಶ್‌ ಸಾಧನೆ: 
1. ದಿನೇಶ್ ಕಾರ್ತಿಕ್ ಈ ವರ್ಷದ ಐಪಿಎಲ್ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್‌ ವಿರುದ್ಧದ 13ನೇ ಪಂದ್ಯದಲ್ಲಿ ಕಾರ್ತಿಕ್ 23 ಎಸೆತಗಳಲ್ಲಿ 44 ರನ್ ಗಳಿಸಿದ್ದರು. ಈ ಮೂಲಕ ತಮ್ಮ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದ್ದರು.  

2.ಈ ಬಾರಿಯ ಐಪಿಎಲ್‌ನ ಮತ್ತೊಂದು ಪಂದ್ಯದಲ್ಲಿ ಕಾರ್ತಿಕ್ 34 ಎಸೆತಗಳಲ್ಲಿ 66 ರನ್ ಗಳಿಸಿದ ಆರ್‌ಸಿಬಿ ಗೆಲುವಿಗೆ ಕಾರಣರಾಗಿದ್ದರು. ಈ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದಿತ್ತು. ಕಾರ್ತಿಕ್ ತಮ್ಮ ಅಬ್ಬರದ ಇನ್ನಿಂಗ್ಸ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

3.ಇನ್ನು 2008ರಲ್ಲಿ ನಡೆದ ಐಪಿಎಲ್‌ನ ಉದ್ಘಾಟನಾ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ದಿನೇಶ್ ಕಾರ್ತಿಕ್ 32 ಎಸೆತಗಳಲ್ಲಿ 56 ರನ್ ಗಳಿಸಿದರು. ಈ ಪಂದ್ಯದಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 

4. ದಿನೇಶ್ ಕಾರ್ತಿಕ್ 2018ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ 48 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡ 86 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಅಷ್ಟೆ ಅಲ್ಲದೆ ಈ ಸೀಸನ್‌ ಮುಗಿಯುವುದರೊಳಗೆ 500 ರನ್‌ ಗಳಿಸಿದ್ದರು. 

5. ಇನ್ನು 2018ರಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ನಾಯಕತ್ವ ವಹಿಸಿದ್ದರು. ಈ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ಧ 57 ಬಾಲ್‌ಗೆ 84 ರನ್‌ ಬಾರಿಸಿ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲದೆ, ಇವರ ಈ ನಾಯಕತ್ವವು 2 ನೇ ಪ್ಲೇಆಫ್‌ಗೆ ಅರ್ಹತೆ ಪಡೆಯುವಂತೆ ಮಾಡಿತ್ತು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News