ಐಪಿಎಲ್ 2025 ರಲ್ಲಿ ಆಡುವುದಿಲ್ಲವೇ ಧೋನಿ? ಬಹುದಿನಗಳ ಪ್ರಶ್ನೆಗೆ ಕೊನೆಗೂ ಸಿಎಸ್‌ಕೆ ಫ್ರಾಂಚೈಸಿಯಿಂದಲೇ ಬಂತು ಅಧಿಕೃತ ಉತ್ತರ.. CSK CEO ಹೇಳಿದ್ದೇನು?

CSK MS Dhoni: BCCI IPL 2025 ಗಾಗಿ ರಿಟೈನ್‌ ನಿಯಮಗಳನ್ನು ಪ್ರಕಟಿಸಿದೆ. ಎಲ್ಲಾ ತಂಡಗಳು ಅಕ್ಟೋಬರ್ 31 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು.

Written by - Bhavishya Shetty | Last Updated : Oct 2, 2024, 07:08 PM IST
    • BCCI IPL 2025 ಗಾಗಿ ರಿಟೈನ್‌ ನಿಯಮಗಳನ್ನು ಪ್ರಕಟಿಸಿದೆ
    • ಅಕ್ಟೋಬರ್ 31 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು
    • ಹಳೆಯ ನಿಯಮವನ್ನು ಮತ್ತೆ ಜಾರಿಗೆ ತಂದಿದ್ದು ಇದರಿಂದ ಚೆನ್ನೈ ತಂಡ ಲಾಭ ಪಡೆಯುವ ಸಾಧ್ಯತೆ
ಐಪಿಎಲ್ 2025 ರಲ್ಲಿ ಆಡುವುದಿಲ್ಲವೇ ಧೋನಿ? ಬಹುದಿನಗಳ ಪ್ರಶ್ನೆಗೆ ಕೊನೆಗೂ ಸಿಎಸ್‌ಕೆ ಫ್ರಾಂಚೈಸಿಯಿಂದಲೇ ಬಂತು ಅಧಿಕೃತ ಉತ್ತರ.. CSK CEO ಹೇಳಿದ್ದೇನು? title=
MS Dhoni

CSK MS Dhoni IPL 2025 Chennai Super Kings: BCCI IPL 2025 ಗಾಗಿ ರಿಟೈನ್‌ ನಿಯಮಗಳನ್ನು ಪ್ರಕಟಿಸಿದೆ. ಎಲ್ಲಾ ತಂಡಗಳು ಅಕ್ಟೋಬರ್ 31 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಇನ್ನು ಬಿಸಿಸಿಐ ಘೋಷಣೆಯ ಒಂದು ನಿರ್ದಿಷ್ಟ ಭಾಗವು ಚೆನ್ನೈ ಸೂಪರ್ ಕಿಂಗ್ಸ್ (CSK) ಗೆ ಬಹಳ ಮುಖ್ಯವಾಗಿತ್ತು. ಅಂತೆಯೇ ಮಂಡಳಿಯು ಹಳೆಯ ನಿಯಮವನ್ನು ಮತ್ತೆ ಜಾರಿಗೆ ತಂದಿದ್ದು ಇದರಿಂದ ಚೆನ್ನೈ ತಂಡ ಲಾಭ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಹೈಕೋರ್ಟ್‌ ಮೆಟ್ಟಿಲೇರಿದ ಐಶ್ವರ್ಯಾ-ಅಭಿಷೇಕ್‌ ಬಚ್ಚನ್...! ವಿಚ್ಛೇದನ ವದಂತಿ ಮಧ್ಯೆ ಕೋರ್ಟ್‌ ಮೊರೆ ಹೋಗಿದ್ದೇಕೆ ಜೋಡಿ... ಹೆಚ್ಚಾಯ್ತು ಫ್ಯಾನ್ಸ್ ಆತಂಕ!

ನಿಯಮಗಳ ಪ್ರಕಾರ, ಕಳೆದ ಐದು ಕ್ಯಾಲೆಂಡರ್ ವರ್ಷಗಳಲ್ಲಿ ಭಾರತದ ಪರ ಆಡದ ಯಾವುದೇ ಕ್ರಿಕೆಟಿಗನನ್ನು 'ಅನ್ನ್‌ ಕ್ಯಾಪ್ಡ್' ಎಂದು ಪರಿಗಣಿಸಲಾಗುತ್ತದೆ. ಆ ಆಟಗಾರನ ಬೆಲೆ ಕಡಿಮೆಯಾಗುತ್ತದೆ ಮತ್ತು ಫ್ರಾಂಚೈಸ್ ಹಣವನ್ನು ಉಳಿಸುತ್ತದೆ. ಈ ನಿಯಮ ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಅನ್ವಯಿಸುತ್ತದೆ. 15 ಆಗಸ್ಟ್ 2020 ರಂದು ನಿವೃತ್ತರಾಗಿದ್ದ ಧೋನಿ, ಅದಕ್ಕೂ ಮೊದಲು, ಅವರು ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಜುಲೈ 2019 ರಲ್ಲಿ ಆಡಿದ್ದರು.

ಈ ನಿಯಮವನ್ನು ಬಳಸಿಕೊಂಡು ಚೆನ್ನೈ ತಂಡ ಕೇವಲ 4 ಕೋಟಿ ರೂ.ಗೆ ಧೋನಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು. ಧೋನಿ ಈಗ ಹೆಚ್ಚೆಂದರೆ ಇನ್ನೂ ಒಂದು ಋತುವಿನಲ್ಲಿ ಆಡಬಹುದು. ಹೀಗಿರುವಾಗ ಈ ಒಬ್ಬ ಆಟಗಾರನಿಗಾಗಿ ಹೆಚ್ಚಿನ ಹಣ ವ್ಯಯಿಸಲು ಫ್ರಾಂಚೈಸಿ ತಯಾರಿಲ್ಲ. ಈ ನಿಯಮ ಮರು ಜಾರಿಯಾದ ಬಳಿಕ ಮುಂದಿನ ವರ್ಷ ಧೋನಿ ಮತ್ತೆ ಆಡುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ, ಸಿಎಸ್ ಕೆ ಸಿಇಒ ಕಾಸಿ ವಿಶ್ವನಾಥನ್ ಹೇಳಿಕೆ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

CSK CEO ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಹೇಳಿಕೆ ಪ್ರಕಾರ, “ಈ ಹಂತದಲ್ಲಿ ನಮಗೆ ಖಚಿತವಿಲ್ಲ. ಎಂಎಸ್ ಧೋನಿಗಾಗಿ ನಾವು ಆ ನಿಯಮವನ್ನು ಬಳಸಲು ಸಾಧ್ಯವಿಲ್ಲ. ನಾವು ಅವರೊಂದಿಗೆ ಚರ್ಚಿಸದ ಕಾರಣ ಈ ಬಗ್ಗೆ ಪ್ರತಿಕ್ರಿಯಿಸುವುದು ಕಷ್ಟ. ಧೋನಿ ಅಮೆರಿಕದಲ್ಲಿದ್ದು, ನಾವು ಇನ್ನೂ ಚರ್ಚೆ ಮಾಡಿಲ್ಲ. ನಾನು ಈ ವಾರ ಪ್ರಯಾಣ ಮಾಡುತ್ತಿದ್ದೇನೆ, ಆದ್ದರಿಂದ ಮುಂದಿನ ವಾರದಲ್ಲಿ ಸ್ವಲ್ಪ ಚರ್ಚೆಯಾಗುವ ಸಾಧ್ಯತೆಯಿದೆ. ನಂತರ ಸ್ವಲ್ಪ ಸ್ಪಷ್ಟತೆ ಸಿಗಬಹುದು. ಅವರು ಆಡುತ್ತಾರೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ, ಆದರೆ ಇದು ಧೋನಿ ಅವರೇ ತೆಗೆದುಕೊಳ್ಳುವ ನಿರ್ಧಾರ" ಎಂದಿದ್ದಾರೆ.

ಇದನ್ನೂ ಓದಿ: ಒಂದೇ ಒಂದು ಲವಂಗವನ್ನು ಇದರ ಜೊತೆ ಸುಟ್ಟು ಮನೆಯ ಈ ದಿಕ್ಕಿನಲ್ಲಿಡಿ: ಮನೆತುಂಬಾ ಶುಕ್ರದೆಸೆ ವೃದ್ಧಿಸಿ ಸಂಪತ್ತು ತುಂಬಿತುಳುಕುವುದು! ಕಾರು-ಬಂಗಲೆಗೆ ಮಾಲೀಕರಾಗುವಿರಿ

IPL ನಿಯಮಗಳ ಪ್ರಕಾರ, "ಆಟಗಾರನು ಆ ವರ್ಷದ ಹಿಂದಿನ ಐದು ಕ್ಯಾಲೆಂಡರ್ ವರ್ಷಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ (ಟೆಸ್ಟ್, ODI, T20) ಆಡದಿದ್ದರೆ ಅಥವಾ BCCI ಯೊಂದಿಗೆ ಕೇಂದ್ರ ಒಪ್ಪಂದವನ್ನು ಹೊಂದಿಲ್ಲದಿದ್ದರೆ ಕ್ಯಾಪ್ಡ್ ಭಾರತೀಯ ಆಟಗಾರನು ಅನ್‌ಕ್ಯಾಪ್ ಆಗುತ್ತಾನೆ." . ಇದು ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News