ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ವೈಫಲ್ಯ ಅನುಭವಿಸಿದ ಪಂಜಾಬ್ ಕಿಂಗ್ಸ್ ತಂಡ ದೆಹಲಿ ಕ್ಯಾಪಿಟಲ್ಸ್ ಗೆ ಸುಲಭ ತುತ್ತಾಯಿತು. ಮುಂಬೈನ ಬ್ರರ್ಬೌನ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 32 ಪಂದ್ಯದಲ್ಲಿ ಪಂಜಾಬ್ ವಿರುದ್ಧ ದೆಹಲಿ 9 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಗೆದ್ದ ದೆಹಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ ದೆಹಲಿ ಬೌಲಿಂಗ್ ದಾಳಿಗೆ ಸಿಲುಕಿ ನಲುಗಿಹೋಯಿತು. ನಿಗದಿತ 20 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 115 ರನ್‍ಗಳ ಸಾಧಾರಣ ಮೊತ್ತ ಗಳಿಸಿತು. 116 ರನ್‍ಗಳ ಸುಲಭ ಗುರಿ ಬೆನ್ನತ್ತಿದ ದೆಹಲಿ ಕೇವಲ ಕೇವಲ 1 ವಿಕೆಟ್ ಕಳೆದುಕೊಂಡು 10 ಓವರ್ ಗಳಲ್ಲಿ ಗೆಲುವಿನ ಗುರಿ ಮುಟ್ಟಿತು.
ದೆಹಲಿ ನಿಖರ ಬೌಲಿಂಗ್ ದಾಳಿಗೆ ಪಂಜಾಬ್ ತತ್ತರ!
🔝 bowling effort ✅
🔥 chase ✅Simply clinical stuff from the DC boys as we registered the biggest win in the history of the IPL in terms of balls to spare in a chase of 100+ runs 💙#YehHaiNayiDilli | #IPL2022 | #DCvPBKS | #TATAIPL | #IPL | #DelhiCapitals pic.twitter.com/N8DVhgqdoM
— Delhi Capitals (@DelhiCapitals) April 20, 2022
ದೆಹಲಿ ಕ್ಯಾಪಿಟಲ್ಸ್ ಬೌಲರ್‌ಗಳ ನಿಖರ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ರನ್ ಗಳಿಸಲು ಪರದಾಡಬೇಕಾಯಿತು. ಪಂಜಾಬ್ ಪರ ವಿಕೆಟ್ ಕೀಪರ್ ಜಿತೇಶ್ ಶರ್ಮಾ (32) ಗರಿಷ್ಠ ರನ್ ಗಳಿಸಿದರು. ನಾಯಕ ಮಯಂಕ್ ಅಗರವಾಲ್ (25), ಶಾರೂಕ್ ಖಾನ್ (12), ರಾಹುಲ್ ಚಾಹರ್ (12), ಶಿಖರ್ ಧವನ್(9) ಜಾನಿ ಬೆಸ್ಟೊ(9) ಮತ್ತು ಅರ್ಷದೀಪ್ ಸಿಂಗ್ (9) ರನ್ ಗಳಿಸಿ ಔಟ್ ಆದರು. ಘಟಾನುಘಟಿ ಬ್ಯಾಟ್ಸ್‍ಮನ್‍ಗಳೇ ಉತ್ತಮವಾಗಿ ಆಡದೆ ನಿರಾಸೆ ಮೂಡಿಸಿದರು. ಹೀಗಾಗಿ ತಂಡ ಕೇವಲ 115 ರನ್ ಗಳಿಸಲಷ್ಟೇ ಶಕ್ತವಾಯಿತು. ದೆಹಲಿ ಪರ ಖಲೀಲ್ ಅಹ್ಮದ್, ಲಲಿತ್ ಯಾದವ್, ಅಕ್ಷರ್ ಪೇಟಲ್ ಹಾಗೂ ಕುಲ್‌ದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
10 ಓವರ್ ಗಳಲ್ಲಿ ಆಟ ಫಿನಿಶ್!
116 ರನ್‍ಗಳ ಸುಲಭ ಗೆಲುವಿನ ಗುರಿ ಬೆನ್ನತ್ತಿದ ದೆಹಲಿ ಕೇವಲ 10 ಓವರ್ ಗಳಲ್ಲಿ ಆಟವನ್ನು ಫಿನಿಶ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ(41) ಮತ್ತು ಡೇವಿಡ್ ವಾರ್ನರ್(ಔಟಾಗದೆ 60) ಮೊದಲ ವಿಕೆಟ್‍ಗೆ 83 ರನ್‍ಗಳ ಜೊತೆಯಾಟವಾಡಿದರು. ಇನ್ನುಳಿದಂತೆ ಸರ್ಫರಾಜ್ ಖಾನ್(ಅಜೇಯ 12) ರನ್ ಗಳಿಸಿದರು. ದೆಹಲಿ ಕೇವಲ 10.3 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತಲ್ಲದೆ, 9 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ದೆಹಲಿ ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದ್ದು, 6ನೇ ಸ್ಥಾನಕ್ಕೇರಿದೆ. ಅದರಂತೆ ಪಂಜಾಬ್ 8ನೇ ಸ್ಥಾನಕ್ಕೆ ಕುಸಿದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.