ಪಾಕಿಸ್ತಾನ ಕ್ರಿಕೇಟ್‌ ಮಂಡಳಿ ವಿರುಧ್ದ ಗುಡುಗಿದ "ಡ್ಯಾನಿಶ್ ಕನೇರಿಯಾ" !

Danish Kaneria : ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ವಿರುಧದ 2ನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗಿದ್ದು, ಅದೇ ಬೆನ್ನಲ್ಲೇ ಪಾಕಿಸ್ತಾನ ಕ್ರಕೇಟ್‌ ಮಂಡಳಿ ಆಸ್ಟ್ರೇಲಿಯಾ ನೆಲದಲ್ಲಿ ಅತೀಹೆಚ್ಚು ವಿಕೆಟ್‌ ಪಡದ ಆಡಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪಾಕ್‌ನ ಮಾಜಿ ಆಟಗಾರ ಡ್ಯಾನಿಶ್ ಹೆಸರು ಕಾಣೆಯಾಗಿದೆ. ಇವರು ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳನ್ನು ಆಡಿದ್ದು 24 ವಿಕೇಟ್‌ ಪಡೆದಿದ್ದಾರೆ.

Written by - Zee Kannada News Desk | Last Updated : Dec 24, 2023, 06:41 PM IST
  • ಆಸ್ಟ್ರೇಲಿಯಾದಲ್ಲಿ ಪ್ರಮುಖ ವಿಕೆಟ್ ಟೇಕರ್‌ ಪಟ್ಟಿ ಬಿಡುಗಡೆಮಾಡಿದ PCB
  • ಪಟ್ಟಿಯಲ್ಲಿ ಪಾಕ್‌ನ ಮಾಜಿ ಆಟಗಾರ ಡ್ಯಾನಿಶ್ ಹೆಸರು ಕಾಣೆಯಾಗಿದೆ
  • ಆಸ್ಟ್ರೇಲಿಯಾದಲ್ಲಿ ಆಡಿದ 5 ಪಂದ್ಯಗಳಲ್ಲಿ 24 ವಿಕೆಟ್‌ ಪಡೆದಿದ್ಧಾರೆ
ಪಾಕಿಸ್ತಾನ ಕ್ರಿಕೇಟ್‌ ಮಂಡಳಿ ವಿರುಧ್ದ ಗುಡುಗಿದ "ಡ್ಯಾನಿಶ್ ಕನೇರಿಯಾ" ! title=

Pakistana crikcet board : ಪಾಕಿಸ್ತಾನದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ಪಾಕಿಸ್ತಾನ ತಂಡದ ಪರ ಅನೇಕ ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಬಲಿಷ್ಠ ತಂಡಗಳ ವಿರುಧ್ದ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುವ ಮೂಲಕ ಚಾಪು ಮೂಡಿಸಿದ್ದಾರೆ. ಆದರೆ ಇವರು ಈಗ ಪಾಕಿಸ್ತಾನ ಕ್ರಿಕೇಟ್‌ ಮಂಡಲಿಯ ನಡೆಯ ವಿರುಧ್ದ ತಿರುಗಿಬಿದ್ದಿದ್ದಾರೆ. 

ಕನೇರಿಯಾ ಅವರು ಪಾಕಿಸ್ತಾನ ಕ್ರಿಕೇಟ್‌ ಮಂಡಳಿಯು ತಮ್ಮ ವಿರುಧ್ದ ತಾರತಮ್ಯವನ್ನು ತೋರಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಸ್ಟ್ರೇಲಿಯಾದಲ್ಲಿ ಪ್ರಮಖ ವಿಕೆಟ್‌ ಪಡೆದವರ ತಮ್ಮ ತಂಡದ ಬೌಲರ್‌ಗಳ ಪಟ್ಟಿಯನ್ನು ಮಂಡಿಸಿತ್ತು, ಆದರೆ ಪ್ರಮುಖ ವಿಕೆಟ್ ಟ್ಯಾಕರ್‌ಗಳ ಪಟ್ಟಿಯಲ್ಲಿ ಕನೇರಿಯಾ ಹೆಸೆರು ಕಾಣೆಯಾಗಿತ್ತು. 

ಇದನ್ನು ಓದಿ-"ಹಾರ್ಧಿಕ್‌ ಪಾಂಡ್ಯ" ಈ ಭಾರಿಯ ಐಪಿಎಲ್‌ ಆಡೋದು ಡೌಟ್‌ ! ಮುಂಬೈ ತಂಡದ ನಾಯಕನಿಗೆ ಇಂಜುರಿ ಸಮಸ್ಯೆ...

ಪಾಕಿಸ್ತಾನದ ಮಾಜಿ ಬೌಲರ್ ಡ್ಯಾನಿಶ್ ಕನೇರಿಯಾ ಅವರು ಆಸ್ಟ್ರೇಲಿಯಾದಲ್ಲಿ ದೇಶದ ಪ್ರಮುಖ ವಿಕೆಟ್ ಟೇಕರ್‌ಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು  ತರಾಟೆಗೆ ತೆಗೆದುಕೊಂಡರು. 

 ಡ್ಯಾನಿಶ್ ಕನೇರಿಯಾ ಅವರು ಆಸ್ಟ್ರೇಲಿಯಾದಲ್ಲಿ  5 ಪಂದ್ಯಗಳನ್ನುಆಡಿದ್ದು, 24 ವಿಕೆಟ್‌ಗಳನ್ನು ಪಡೆದಿದ್ಧಾರೆ. ಆದರೂ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದನ್ನು ಒಪ್ಪದ ಕನೇರಿಯಾ ತನ್ನ ವಿರುದ್ಧದ ಸಂಪೂರ್ಣ ತಾರತಮ್ಯದ ಜೀವಂತ ಉದಾಹರಣೆ ಎಂದು ತಮ್ಮ X ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ-ಎಲೈಟ್ ಮಹಿಳಾ ಬಾಕ್ಸಿಂಗ್‌ 16 ರ ಸುತ್ತಿಗೆ ಪ್ರವೇಶ ಪಡೆದ ಹಾಲಿ ಚಾಂಪಿಯನ್‌ ! "ಸವೀಟಿ ಬೂರಾ"
ಪಿಸಿಬಿ ಬಿಡುಗಡೆ ಮಾಡಿದ ಟೇಬಲ್ ಪ್ರಕಾರ, ಪಾಕಿಸ್ತಾನದ ಪರ ಆಸ್ಟ್ರೇಲಿಯಾ ನೆಲದಲ್ಲಿಎಡಗೈ ಸೀಮರ್ ವಾಸಿಮ್ ಅಕ್ರಮ್ ಕಡಿಮೆ ಸರಾಸರಿಯಲ್ಲಿ ಅತೀಹೆಚ್ಚು ವಿಕೇಟ್‌ಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ, ಕನೇರಿಯಾ 24 ವಿಕೆಟ್‌ಗಳನ್ನು ಪಡೆದರು, ಆದರೆ ಅದು 40.58 ಸರಾಸರಿಯಲ್ಲಿ ಬಂದಿತು. ಈ ಕಾರಣಕ್ಕೆ ಕನೇರಿಯಾ ಹೆಸರು ಆ ಪಟ್ಟಿಯಲ್ಲಿ ಹೊರಬಿದ್ದಿದೆ.

ಕನೇರಿಯಾ ಅವರು ಪಾಕಿಸ್ತಾನದ ತಂಡದ ಪರ 61 ಪಂದ್ಯಗಳನ್ನು ಆಡಿದ್ದು ಒಟ್ಟು 112 ಇನ್ನಿಂಗ್ಸ್‌ಗಳಲ್ಲಿ 2949 ಒವರ್‌ಗಳನ್ನು ಮಾಡಿದ್ದಾರೆ. ಇನ್ನು 34.79ರ ಸರಾಸರಿಯಲ್ಲಿ 261 ವಿಕೆಟ್‌ಗಳನ್ನು ಪಡೆದಿದ್ದು, 517 ಒವರ್‌ಗಳನ್ನು ಮೇಡಿನ್‌ ಮಾಡಿದ ದಾಖಲೆ ಇವರ ಹೆಸರಿನಲ್ಲಿ ಸೇರಿಕೊಂಡಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News