500 ಗೋಲುಗಳ ದಾಖಲೆ ಬರೆದ Cristiano Ronaldo!

Cristiano Ronaldo : ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ  500 ಗೋಲುಗಳ ದಾಖಲೆ ಬರೆದಿದ್ದಾರೆ. ಕ್ಲಬ್ ಆಟದಲ್ಲಿ ಅವರ ಗೋಲುಗಳ ಸಂಖ್ಯೆ 500ರ ಗಡಿ ಮುಟ್ಟಿದೆ.

Written by - Ranjitha R K | Last Updated : Feb 10, 2023, 03:55 PM IST
  • 500 ಗೋಲುಗಳ ದಾಖಲೆ ಬರೆದ ಫುಟ್ಬಾಲ್ ದಿಗ್ಗಜ
  • 4 ಗೋಲುಗಳನ್ನು ಬಾರಿಸುವ ಮೂಲಕ ಗೆಲುವು ತಂದು ಕೊಟ್ಟ ಕ್ರಿಸ್ಟಿಯಾನೊ
  • ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಹಿರೋ
 500 ಗೋಲುಗಳ  ದಾಖಲೆ ಬರೆದ Cristiano Ronaldo! title=

Cristiano Ronaldo : ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ  500 ಗೋಲುಗಳ ದಾಖಲೆ ಬರೆದಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ನಾಸರ್ ಮತ್ತು ಅಲ್ ವೆಹ್ದಾ ನಡುವಿನ ಸೌದಿ ಪ್ರೊ ಲೀಗ್ ಪಂದ್ಯದಲ್ಲಿ 4 ಗೋಲುಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಮಾತ್ರವಲ್ಲ  500 ಕ್ಲಬ್ ಗೋಲುಗಳ ದಾಖಲೆ ಮಾಡಿದ್ದಾರೆ. 

ರೊನಾಲ್ಡೊ ಮೊದಲ ಗೋಲು ಗಳಿಸಿ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ರೊನಾಲ್ಡೊ ಬಾರಿಸಿದ ಮೊದಲ ಗೋಲು ಅವರಿಗೆ ಮಹತ್ವದ ಸಾಧನೆಯಾಗಿ ದಾಖಲಾಗಿದೆ. ಕ್ಲಬ್ ಆಟದಲ್ಲಿ ಅವರ ಗೋಲುಗಳ ಸಂಖ್ಯೆ 500ರ ಗಡಿ ಮುಟ್ಟಿದೆ.

ಇದನ್ನೂ ಓದಿ : Rohit Sharma Test Century : ನಾಗ್ಪುರ ಟೆಸ್ಟ್‌ನಲ್ಲಿ ಶತಕ ಸಿಡಿಸಿ, ಈ ಅದ್ಭುತ ದಾಖಲೆ  ಕ್ಯಾಪ್ಟನ್ ರೋಹಿತ್!

ರೊನಾಲ್ಡೊ  ತನ್ನ ಸಹ ಆಟಗಾರ ಕಳುಹಿಸಿದ ಚೆಂಡನ್ನು ಗಾಳಿಯಲ್ಲಿ ಹೊಡೆಯುವ ಮೂಲಕ ಎರಡನೇ ಗೋಲು ಗಳಿಸಿದ್ದಾರೆ. ಮೂರನೇ ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ. 

ಒಂದು ವಾರದ ಹಿಂದೆ, ಅಲ್ ನಾಸರ್‌ನ ರೊನಾಲ್ಡೊ ಅಲ್ ಫಡೆ ವಿರುದ್ಧ ಸೌದಿ ಅರೇಬಿಯನ್ ಕ್ಲಬ್ ಪಂದ್ಯದಲ್ಲಿ ತನ್ನ ಮೊದಲ ಗೋಲು  ಹೊಡೆದಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ಅಲ್ ನಾಸರ್‌ಗೆ ಸೇರಿದ ನಂತರ ಸೌದಿ ಪ್ರೊ ಲೀಗ್‌ನಲ್ಲಿ ರೊನಾಲ್ಡೊ ಅವರ ಮೊದಲ ಗೋಲು ಇದಾಗಿತ್ತು. ಅದರ ಬೆನ್ನಲ್ಲೇ ಇದೀಗ ಹ್ಯಾಟ್ರಿಕ್ ಗೋಲ್ ಮೂಲಕ ಛಾಪು ಮೂಡಿಸಿರುವ ರೊನಾಲ್ಡೊಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ : IND vs AUS : ಆಸ್ಟ್ರೇಲಿಯಾ ಟೆಸ್ಟ್ ಇಡೀ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್..!

ಕ್ರಿಸ್ಟಿಯಾನೊ ರೊನಾಲ್ಡೊ ಇದುವರೆಗೆ ರಿಯಲ್ ಮ್ಯಾಡ್ರಿಡ್ ಪರ 44 ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದ್ದಾರೆ. ಜೊತೆಗೆ, ಅವರು ಮ್ಯಾಂಚೆಸ್ಟರ್ ಯುನೈಟೆಡ್‌ಗಾಗಿ 3 ಹ್ಯಾಟ್ರಿಕ್ ಗೋಲುಗಳನ್ನು, ಜುವೆಂಟಸ್‌ಗಾಗಿ 3 ಹ್ಯಾಟ್ರಿಕ್ ಗೋಲುಗಳನ್ನು ಮತ್ತು ಪೋರ್ಚುಗಲ್ ರಾಷ್ಟ್ರೀಯ ತಂಡಕ್ಕಾಗಿ 10 ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿದ್ದಾರೆ. ಅಲ್-ನಾಸರ್ ಪರ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ರೊನಾಲ್ಡೊ ಮತ್ತೊಮ್ಮೆ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News