Viral Video: ಲ್ಯಾಂಬೋರ್ಘಿನಿ ಕಾರಿನಲ್ಲಿ ಮುಂಬೈ ಸುತ್ತಿದ ರೋಹಿತ್ ಶರ್ಮಾ!

ಐಷಾರಾಮಿ ಎಸ್‌ಯುವಿ ಚಾಲನೆ ಮಾಡುತ್ತಾ ಮುಂಬೈನಲ್ಲಿ ಸುತ್ತಾಡುತ್ತಿದ್ದ ರೋಹಿತ್ ಶರ್ಮಾರನ್ನು ಅವರ ಅಭಿಮಾನಿಗಳು ಗುರುತಿಸಿ ಮಾತನಾಡಿಸಿದ್ದಾರೆ.

Written by - Puttaraj K Alur | Last Updated : Nov 21, 2022, 06:19 PM IST
  • ಏಷ್ಯಾಕಪ್ ಮತ್ತು ಟಿ-20 ವಿಶ್ವಕಪ್ ಬಳಿ ಜಾಲಿ ಮೂಡ್‍ನಲ್ಲಿರುವ ರೋಹಿತ್ ಶರ್ಮಾ
  • ಮುಂಬೈನ ರಸ್ತೆಗಳಲ್ಲಿ ಐಷಾರಾಮಿ ಲ್ಯಾಂಬೋರ್ಘಿನಿ ಕಾರಿನಲ್ಲಿ ಸುತ್ತಾಡಿದ ಹಿಟ್‍ಮ್ಯಾನ್
  • ಅಭಿಮಾನಿಗಳನ್ನು ಮಾತನಾಡಿಸಿ ಕಾರು ಚಲಾಯಿಸಿಕೊಂಡ ಹೋದ ರೋಹಿತ್ ಶರ್ಮಾ
Viral Video: ಲ್ಯಾಂಬೋರ್ಘಿನಿ ಕಾರಿನಲ್ಲಿ ಮುಂಬೈ ಸುತ್ತಿದ ರೋಹಿತ್ ಶರ್ಮಾ! title=
ಲ್ಯಾಂಬೋರ್ಘಿನಿ ಕಾರಿನಲ್ಲಿ ರೋಹಿತ್ ಸುತ್ತಾಟ!

ನವದೆಹಲಿ: ಏಷ್ಯಾಕಪ್ ಮತ್ತು ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಭಾರತ ತಂಡ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದ್ದು, ಇತ್ತ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಮುಂಬೈನ ರೋಡುಗಳಲ್ಲಿ ಲ್ಯಾಂಬೋರ್ಘಿನಿ ಕಾರಿನಲ್ಲಿ ಸುತ್ತಾಡುತ್ತಿದ್ದಾರೆ.

ಹೌದು, ರೋಹಿತ್ ಶರ್ಮಾ ಇದೀಗ ಜಾಲಿಮೂಡ್‍ನಲ್ಲಿದ್ದಾರೆ. ವಾಣಿಜ್ಯ ನಗರಿ ಮುಂಬೈನ ಬೀದಿಗಳಲ್ಲಿ ಅವರು ಐಷಾರಾಮಿ ಕಾರು ಓಡಿಸುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ Blu Eleos Metallic ಬಣ್ಣದ ಲ್ಯಾಂಬೋರ್ಘಿನಿ ಉರುಸ್ ಕಾರಿನಲ್ಲಿ ರೋಹಿತ್ ಸುತ್ತಾಡಿದ್ದಾರೆ.

ಇದನ್ನೂ ಓದಿ: ರವೀಂದ್ರ ಜಡೇಜಾನನ್ನು ಧೋನಿಗೆ ಪ್ರಧಾನಿ ಮೋದಿ ಪರಿಚಯಿಸಿದ್ದು ಹೇಗೆ ಗೊತ್ತಾ?

ಐಷಾರಾಮಿ ಎಸ್‌ಯುವಿ ಚಾಲನೆ ಮಾಡುತ್ತಾ ಮುಂಬೈನಲ್ಲಿ ಸುತ್ತಾಡುತ್ತಿದ್ದ ರೋಹಿತ್ ಶರ್ಮಾರನ್ನು ಅವರ ಅಭಿಮಾನಿಗಳು ಗುರುತಿಸಿ ಮಾತನಾಡಿಸಿದ್ದಾರೆ. ಅಭಿಮಾನಿಗಳು ಕೂಗಿ ಕರೆದಾಗ ಕಾರು ನಿಲ್ಲಿಸಿದ ರೋಹಿತ್ ಅವರ ಜೊತೆಗೆ ಮಾತನಾಡಿ ಮತ್ತೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ರೋಹಿತ್ ಶರ್ಮಾರ ಗ್ಯಾರೇಜ್‌ನಲ್ಲಿ ಲ್ಯಾಂಬೋರ್ಘಿನಿ ಉರುಸ್ ಮಾತ್ರವಲ್ಲದೆ BMW M5 ನಂತಹ ಹಲವಾರು ಐಷಾರಾಮಿ ಕಾರುಗಳು ಸಹ ಇವೆ. ಕಾರುಗಳ ಬಗ್ಗೆ ವಿಪರಿತ ಕ್ರೇಜ್ ಹೊಂದಿರುವ ರೋಹಿತ್ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಸಂಗ್ರಹಿಸಿದ್ದಾರೆ. ಇಟಾಲಿಯನ್ ಸ್ಪೋರ್ಟ್ಸ್ ಕಾರ್ ತಯಾರಕ ಕಂಪನಿ ಒಡೆತನದ ಈ ಲ್ಯಾಂಬೋರ್ಘಿನಿ ಉರುಸ್ ಕಾರಿನ ಬೆಲೆ ಭಾರತದಲ್ಲಿ ಬರೋಬ್ಬರಿ 3.55 ಕೋಟಿ ರೂ. ಇದೆ.

ಇದನ್ನೂ ಓದಿ: FIFA World Cup 2022: ಕಾಲೇ ಇಲ್ಲದ ವ್ಯಕ್ತಿ ಕಾಲ್ಚೆಂಡಿನ ಲೋಕದ ರಾಯಭಾರಿ!

ಲ್ಯಾಂಬೋರ್ಘಿನಿ ಉರುಸ್ ಭಾರತೀಯ ಸೆಲೆಬ್ರಿಟಿಗಳ ಜನಪ್ರಿಯ ಆಯ್ಕೆಯಾಗಿದೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್, ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ, ಜೂನಿಯರ್ ಎನ್‌ಟಿಆರ್, ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಅವರ ಗ್ಯಾರೇಜ್‌ನಲ್ಲಿಯೂ ಈ ಕಾರು ಜಾಗ ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News