ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ, ಫ್ಯಾನ್ಸ್ ಫುಲ್ ಫಿದಾ

ಇದೀಗ ಶ್ರೀವಲ್ಲಿ ಹಾಡಿಗೆ ಹಾರ್ದಿಕ್ ಪಾಂಡ್ಯ ತಮ್ಮ ಅಜ್ಜಿಯೊಂದಿಗೆ ನೃತ್ಯ ಮಾಡಿ, ವಿಡಿಯೋ ಶೇರ್ ಮಾಡಿದ್ದಾರೆ.  ಇಬ್ಬರೂ ತಮ್ಮ ಹೆಜ್ಜೆಗಳಿಂದ ನೆಟ್ಟಿಗರ ಮನಗೆದ್ದಿದ್ದಾರೆ.

Edited by - Chetana Devarmani | Last Updated : Jan 26, 2022, 04:51 PM IST
  • ಶ್ರೀವಲ್ಲಿ ಹಾಡಿಗೆ ಹಾರ್ದಿಕ್ ಪಾಂಡ್ಯ ಸ್ಟೆಪ್ಸ್
  • ತಮ್ಮ ಅಜ್ಜಿಯೊಂದಿಗೆ ನೃತ್ಯ ಮಾಡಿದ ಕ್ರಿಕೆಟಿಗ
  • ನೆಟ್ಟಿಗರ ಮನಗೆದ್ದ ವಿಡಿಯೋ
ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ, ಫ್ಯಾನ್ಸ್ ಫುಲ್ ಫಿದಾ  title=
ಹಾರ್ದಿಕ್ ಪಾಂಡ್ಯ

ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ನಾನಿ ಜೊತೆ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ಅನೇಕ ಅಭಿಮಾನಿಗಳು ಇದನ್ನು ಇಷ್ಟಪಟ್ಟಿದ್ದಾರೆ.  

ಇದನ್ನೂ ಓದಿ: David Warner: ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್..!

ಎಲ್ಲೆಲ್ಲೂ ಪುಷ್ಪಾ ಚಿತ್ರದ (Pushpa) ಹಾಡುಗಳ ಹುಕ್ ಸ್ಟೆಪ್ ಗೆ ಜನ ಕುಣಿಯುತ್ತಿದ್ದಾರೆ. ಶ್ರೀವಲ್ಲಿ ಹಾಡು, ಸಾಮಿ ಮತ್ತು ಊ ಅಂತವ ಹಾಡುಗಳು ಆನ್‌ಲೈನ್‌ನಲ್ಲಿ ಬಹಳ ಜನಪ್ರಿಯವಾಗಿವೆ. ಅನೇಕ ಜನರು ನೃತ್ಯ ಮಾಡಿದ್ದಾರೆ. 

ಇದೀಗ ಶ್ರೀವಲ್ಲಿ (Srivalli Song) ಹಾಡಿಗೆ ಹಾರ್ದಿಕ್ ಪಾಂಡ್ಯ ತಮ್ಮ ಅಜ್ಜಿಯೊಂದಿಗೆ ನೃತ್ಯ ಮಾಡಿ, ವಿಡಿಯೋ ಶೇರ್ ಮಾಡಿದ್ದಾರೆ.  ಇಬ್ಬರೂ ತಮ್ಮ ಹೆಜ್ಜೆಗಳಿಂದ ನೆಟ್ಟಿಗರ ಮನಗೆದ್ದಿದ್ದಾರೆ.

 

 

ಎಲ್ಲಾ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಮುದ್ದಾದ ನೃತ್ಯವನ್ನು ಇಷ್ಟಪಟ್ಟಿದ್ದಾರೆ. ಪುಷ್ಪ ಚಿತ್ರದಲ್ಲಿ ಸ್ಟೈಲಿಶ್ ಕಿಂಗ್ ಅಲ್ಲು ಅರ್ಜುನ್ (Allu Arjun) ಮತ್ತು ಬ್ಯೂಟಿ ಕ್ವೀನ್ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಕ್ರಿಕೆಟರ್ ಕ್ರಿಸ್ ಗೇಲ್ ಗೆ ವೈಯಕ್ತಿಕ ಮೆಸೇಜ್...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News