ವಿಶ್ವಕಪ್‌ ಮೇಲೆ ಕಾಲಿಟ್ಟಿದ್ದ ಮಿಚೆಲ್ ಮಾರ್ಷ್‌ಗೆ ಸಂಕಷ್ಟ..! ಏನಾಯ್ತು ಆಸೀಸ್ ಕ್ರಿಕೆಟರ್‌ಗೆ..?

Mitchell Marsh : ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿಶ್ವಕಪ್‌ ಟ್ರೋಫಿಯ ಮೇಲೆ ಕಾಲಿಟ್ಟು ಬಿಯರ್‌ ಕುಡಿದು ಸಂಭ್ರಮಿಸಿದ್ದ ಮಿಚೆಲ್‌ ಮಾರ್ಷ್‌ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ.

Written by - Krishna N K | Last Updated : Nov 24, 2023, 10:41 PM IST
  • ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ಗೆ ಸಂಕಷ್ಟ
  • ವಿಶ್ವಕಪ್‌ ಟ್ರೋಫಿಯ ಮೇಲೆ ಕಾಲಿಟ್ಟು ಬಿಯರ್‌ ಕುಡಿದು ಸಂಭ್ರಮಿಸಿದ್ದ ಮಿಚೆಲ್‌
  • ಮಿಚೆಲ್‌ ಮಾರ್ಷ್‌ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ
ವಿಶ್ವಕಪ್‌ ಮೇಲೆ ಕಾಲಿಟ್ಟಿದ್ದ ಮಿಚೆಲ್ ಮಾರ್ಷ್‌ಗೆ ಸಂಕಷ್ಟ..! ಏನಾಯ್ತು ಆಸೀಸ್ ಕ್ರಿಕೆಟರ್‌ಗೆ..? title=
ಮಿಚೆಲ್‌ ಮಾರ್ಷ್‌ಗೆ ಸಂಕಷ್ಟ!

FIR on Mitchell Marsh: ವಿಶ್ವಕಪ್ ಗೆದ್ದು ಅತಿರೇಕದ ಸಂಭ್ರಮಾಚರಣೆ ಮಾಡಿದ್ದ ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ. 13ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ  ಟೀಮ್ ಇಂಡಿಯಾ ಎದುರು ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿತ್ತು. ವಿಶ್ವ ದಾಖಲೆಯ 6ನೇ ಬಾರಿ ಟ್ರೋಫಿ ಎತ್ತಿ ಹಿಡಿದಿತ್ತು. ಆದರೆ ಆಸೀಸ್‌ ಆಟಗಾರನ ಅತಿಯಾದ ಸಂಭ್ರಮಾಚರಣೆ ಈಗ ವಿವಾದಕ್ಕೆ ಕಾರಣವಾಗಿತ್ತು.

ಐಸಿಸಿ ಒಡಿಐ ವಿಶ್ವಕಪ್‌ ಟ್ರೋಫಿಯ ಮೇಲೆ ಕಾಲಿಟ್ಟು ಬಿಯರ್‌ ಕುಡಿದು ಸಂಭ್ರಮಿಸಿದ್ದ ಮಿಚೆಲ್‌ ಮಾರ್ಷ್‌ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಹಂಚಿಕೊಂಡಿದ್ದ ಫೋಟೋದಲ್ಲಿ ಮಿಚೆಲ್‌ ಮಾರ್ಷ್‌ ಟ್ರೋಫಿ ಮೇಲೆ ಕಾಲಿಟ್ಟು ಕುಳಿತಿದ್ದರು. 

ಇದನ್ನೂ ಓದಿ:Navdeep Saini: ಆರ್‌ಸಿಬಿ ವೇಗಿ ನವದೀಪ್ ಲವ್‌ ಮ್ಯಾರೇಜ್‌..! ಬಹುಕಾಲದ ಪ್ರಿಯತಮೆ ಯಾರು ಗೊತ್ತಾ?

ಆದರೆ ಕ್ರಿಕೆಟ್‌ ನ ಸರ್ವಶ್ರೇಷ್ಠ ಟ್ರೋಫಿಗೆ ಮಾರ್ಷ್‌ ಅಗೌರವ ತೋರಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತನೊಬ್ಬ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ವರದಿಗಳ ಪ್ರಕಾರ ಉತ್ತರ ಪ್ರದೇಶದ ಅಲಿಗಢದಲ್ಲಿ ದೂರು ದಾಖಲಾಗಿದೆ. ಆರ್‌ಟಿಐ ಕಾರ್ಯಕರ್ತ ಪಂಡಿತ್‌ ಕೇಶವ್‌ ಈ ದೂರು ನೀಡಿದ್ದು ಮಿಚೆಲ್‌ ಮಾರ್ಷ್‌ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಕೋಟ್ಯಾಂತರ ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಭಾವನೆಗೆ ನೋವು ತಂದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಈ ಆಟಗಾರನಿಗೆ ಭಾರತದಲ್ಲಿ ಕ್ರಿಕೆಟ್‌ ಆಡದಂತೆ ಮಾಡಬೇಕು ಎಂದು ದೂರಿನ ಮೂಲಕ ಮನವಿ ಮಾಡಿಕೊಂಡಿದ್ದಾರೆ. ದೂರಿ ಪತ್ರವನ್ನು ಪ್ರಧಾನಿ ಕಚೇರಿಗೆ ಕಳುಹಿಸಿರುವ ಮಾಹಿತಿ ಇದೆ. ಟ್ರೋಫಿ ಮೇಲೆ ಕಾಲಿಟ್ಟಿದ್ದಕ್ಕೆ ಅನೇಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿ ಮಾರ್ಷ್ ವಿರುದ್ಧ ಹರಿಹಾಯ್ದಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News