IND vs AUS ಟಿ20 ಸರಣಿಯ ಸೋಲಿಗೆ ಆಸ್ಟ್ರೇಲಿಯಾ ನಾಯಕ ದೂಷಿಸಿದ್ದು ಯಾರನ್ನ ಗೊತ್ತಾ?

IND vs AUS:  ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಯುವ ತಂಡ ಕಾಂಗರೂಗಳ ವಿರುದ್ಧ ವಿಶ್ವಕಪ್ 2023ರ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ  ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 1-4 ಅಂತರದ ಸೋಲು ಅನುಭವಿಸಿದೆ. ಈ ಬಗ್ಗೆ ಮಾತನಾಡಿರುವ ಕಾಂಗರೂ ಪಡೆಯ ನಾಯಕ ದೂಷಿಸಿದ್ದು ಯಾರನ್ನ ಗೊತ್ತಾ? 

Written by - Yashaswini V | Last Updated : Dec 4, 2023, 08:16 AM IST
  • ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-4 ಅಂತರದ ಗೆಲುವು ಸಾಧಿಸಿದೆ.
  • ಈ ಮೂಲಕ ವಿಶ್ವಕಪ್ 2023ರ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ.
  • ಆಸ್ಟ್ರೇಲಿಯಾ ವಿರುದ್ಧದ ಈ ಟಿ20 ಸರಣಿ ಗೆಲುವಿನ ಬಳಿಕ ಭಾರತ ಇದೀಗ ಡಿಸೆಂಬರ್ 10ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯನ್ನು ಆಡಬೇಕಿದೆ.
IND vs AUS ಟಿ20 ಸರಣಿಯ ಸೋಲಿಗೆ ಆಸ್ಟ್ರೇಲಿಯಾ ನಾಯಕ ದೂಷಿಸಿದ್ದು ಯಾರನ್ನ ಗೊತ್ತಾ?  title=

IND vs AUS: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿಯ ಐದನೇ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 6 ರನ್‌ಗಳ ಸೋಲು ಅನುಭವಿಸಿದೆ. ಈ ಮೂಲಕ ಟೀಂ ಇಂಡಿಯಾದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 1-4 ಅಂತರದ ಸೋಲು ಅನುಭವಿಸಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತದ ಯುವ ತಂಡ ಕಾಂಗರೂಗಳ ವಿರುದ್ಧ ವಿಶ್ವಕಪ್ 2023ರ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ. 

ಆಸ್ಟ್ರೇಲಿಯಾ ವಿರುದ್ಧದ ಈ ಟಿ20 ಸರಣಿ ಗೆಲುವಿನ ಬಳಿಕ ಭಾರತ ಇದೀಗ ಡಿಸೆಂಬರ್ 10ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯನ್ನು ಆಡಬೇಕಿದೆ.  ಈ ಮಧ್ಯೆ, ಭಾರತದ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 1-4 ಅಂತರದ ಸೋಲು ಅನುಭವಿಸಿರುವ ಆಸಿಸ್ ನಾಯಕ ಮ್ಯಾಥ್ಯೂ ವೇಡ್ ಪಂದ್ಯದ ಸೋಲಿನ ಹೊಣೆ ಹೊರಿಸಿದ್ದು ಯಾರಿಗೆ ಗೊತ್ತಾ? 

ಇದನ್ನೂ ಓದಿ- ಆಸಿಸ್ ವಿರುದ್ಧದ ಟೀಮ್ ಇಂಡಿಯಾ ಗೆಲುವಿನ ರೋಚಕ ಕ್ಷಣಗಳು 

ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೇಡ್: 
ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 1-4 ಅಂತರದ ಸೋಲು ಅನುಭವಿಸಿರುವ ಬಗ್ಗೆ ಮಹತ್ವದ ಹೇಳಿಕೆ ನೀಡಿರುವ ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೇಡ್, ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ-20 ಸರಣಿಯ ಫೈನಲ್ ಪಂದ್ಯದಲ್ಲಿ ನಾವು ನಿರೀಕ್ಷಿಸಿದಂತೆ ಫಲಿತಾಂಶವನ್ನು ಪಡೆದಿದ್ದರೆ ಸರಣಿಯಲ್ಲಿ 2-3 ರ ಸ್ಕೋರ್ ಲೈನ್ ಆಗುತ್ತಿತ್ತು. ಇದು ನಮಗೆ ಉತ್ತಮ ಪಂದ್ಯವನ್ನು ಆಡಿದ್ದೇವೆ ಎಂಬಷ್ಟರ ಮಟ್ಟಿಗೆ ಸಮಾಧಾನವನ್ನಾದರೂ ನೀಡುತ್ತಿತ್ತು. ಆದರೆ, ಈ ಪಂದ್ಯದಲ್ಲಿ ನಾವು ಸೋತಿದ್ದೇವೆ. ಇದರೊಂದಿಗೆ ಸಾಕಷ್ಟು ಕಲಿತಿದ್ದೇವೆ ಎಂದರು. 

ಸೋಲಿಗೆ ಇದೇ ಪ್ರಮುಖ ಕಾರಣ:
ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಚೆಂಡಿನೊಂದಿಗೆ ಆಸ್ಟ್ರೇಲಿಯಾದ ಪ್ರಬಲ ಪ್ರದರ್ಶನವನ್ನು ಒಪ್ಪಿಕೊಂಡ ವೇಡ್  ಮತ್ತು ಬೆನ್ ಮೆಕ್‌ಡರ್ಮಾಟ್ ಅವರನ್ನು ಹೊಗಳುತ್ತಾ ಆಟದಲ್ಲಿ ಅವರು ಪುಟಿದೇಳಿದರು ಎಂದರು. ಇದೇ ವೇಳೆ ಕೊನೆಯ ನಾಲ್ಕೈದು ಓವರ್‌ಗಳಲ್ಲಿ ನಮ್ಮ ಬ್ಯಾಟಿಂಗ್ ಅಷ್ಟು ಉತ್ತಮವಾಗಿರಲಿಲ್ಲ. ಇಬ್ಬರು ಸ್ಪಿನ್ನರ್‌ಗಳ ವಿರುದ್ಧ ಎಡಪಂಥೀಯರನ್ನು ಆಡಿಸುವ ಪ್ರಲೋಭನೆ ಯಾವಾಗಲೂ ಇರುತ್ತದೆ.  ಬ್ಯಾಟಿಂಗ್ ವೈಫಲ್ಯವೇ ತಂಡದ ಸೋಲಿಗೆ ಕಾರಣ ಎಂದು ಅವರು  ಆರೋಪಿಸಿದ್ದಾರೆ. 

ಇದನ್ನೂ ಓದಿ- ಟೀಂ ಇಂಡಿಯಾ ಗೆದ್ದರೂ ಕಳಪೆ ದಾಖಲೆ ಬರೆದ ರಿಂಕು ಸಿಂಗ್: ಟಿ20 ಪದಾರ್ಪಣೆ ಮಾಡಿದ ಬಳಿಕ ಇದೇ ಮೊದಲು

ಇದೇ ಸಂದರ್ಭದಲ್ಲಿ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಕೆಳ ಕ್ರಮಾಂಕದಲ್ಲಿ ನನ್ನ ತಂಡವನ್ನು ಬಲಪಡಿಸುವುದು ನನ್ನ ಪಾತ್ರವಾಗಿದೆ ಎಂದು ಆಶಿಸಿ ಕ್ಯಾಪ್ಟನ್ ತಿಳಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News