CSK ಫ್ಯಾನ್ಸ್’ಗೆ ಬಿಗ್ ಶಾಕ್! ಈ ಸ್ಟಾರ್ ಆಟಗಾರನಿಗೆ ತಂಡದಲ್ಲಿ ಸ್ಥಾನವಿಲ್ಲ ಎಂದ ಚೆನ್ನೈ ಫ್ರಾಂಚೈಸಿ

IPL 2024, Ben Stokes: ಫ್ರಾಂಚೈಸಿಯು 16.25 ಕೋಟಿ ರೂಪಾಯಿಗಳ ಬೃಹತ್ ಬೆಲೆಗೆ ಬೆನ್ ಸ್ಟೋಕ್ಸ್ ಅವರನ್ನು ಈ ಹಿಂದೆ ತಂಡಕ್ಕೆ ಸೇರಿಸಿತ್ತು. ಆದರೆ ಕಳೆದ ಋತುವಿನಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿ ಉಳಿದ ಸಮಯವನ್ನು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯದೆ ಕಾಲ ಕಳೆದಿದ್ದ ಸ್ಟೋಕ್ಸ್ ಇದೀಗ ಮುಂಬರುವ ಋತುವಿನಿಂದಲೂ ಹೊರಗುಳಿದಿದ್ದಾರೆ.

Written by - Bhavishya Shetty | Last Updated : Nov 23, 2023, 06:48 PM IST
    • IPL ನ ಮುಂಬರುವ ಋತುವಿನ ಬಗ್ಗೆ ಚರ್ಚೆಯು ಫುಲ್ ಸ್ವಿಂಗ್‌’ನಲ್ಲಿ ಪ್ರಾರಂಭಗೊಂಡಿದೆ
    • ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಹೇಳಿಕೆ ಬಿಡುಗಡೆ
    • ಐಪಿಎಲ್ 2024 ರಿಂದ ತಂಡದ ಪ್ರಮುಖ ಆಟಗಾರ ಹೊರಗುಳಿದಿದ್ದಾರೆ.
CSK ಫ್ಯಾನ್ಸ್’ಗೆ ಬಿಗ್ ಶಾಕ್! ಈ ಸ್ಟಾರ್ ಆಟಗಾರನಿಗೆ ತಂಡದಲ್ಲಿ ಸ್ಥಾನವಿಲ್ಲ ಎಂದ ಚೆನ್ನೈ ಫ್ರಾಂಚೈಸಿ title=
Chennai Super Kings

IPL 2024, Ben Stokes: ODI ವಿಶ್ವಕಪ್ 2023 ಮುಗಿದಿದೆ. ಈಗ IPL ನ ಮುಂಬರುವ ಋತುವಿನ ಬಗ್ಗೆ ಚರ್ಚೆಯು ಫುಲ್ ಸ್ವಿಂಗ್‌’ನಲ್ಲಿ ಪ್ರಾರಂಭಗೊಂಡಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಬಿಗ್ ಶಾಕ್ ನೀಡುವಂತಹ ಸುದ್ದಿಯೊಂದು ಬಂದಿದೆ. ಐಪಿಎಲ್ 2024 ರಿಂದ ತಂಡದ ಪ್ರಮುಖ ಆಟಗಾರ ಮತ್ತು ಅನುಭವಿ ಆಲ್ ರೌಂಡರ್ ಹೊರಗುಳಿದಿದ್ದಾರೆ.

ಇದನ್ನೂ ಓದಿ:ದಕ್ಷಿಣ ಭಾರತದ ಈ ಭಾಗಗಳಲ್ಲಿ ಮುಂದಿನ 5 ದಿನ ಕುಂಭದ್ರೋಣ ಮಳೆ! ಗುಡುಗು ಸಹಿತ ಬಲವಾದ ಗಾಳಿ ಬೀಸುವ ಮುನ್ನೆಚ್ಚರಿಕೆ

ಫ್ರಾಂಚೈಸಿಯು 16.25 ಕೋಟಿ ರೂಪಾಯಿಗಳ ಬೃಹತ್ ಬೆಲೆಗೆ ಬೆನ್ ಸ್ಟೋಕ್ಸ್ ಅವರನ್ನು ಈ ಹಿಂದೆ ತಂಡಕ್ಕೆ ಸೇರಿಸಿತ್ತು. ಆದರೆ ಕಳೆದ ಋತುವಿನಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿ ಉಳಿದ ಸಮಯವನ್ನು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯದೆ ಕಾಲ ಕಳೆದಿದ್ದ ಸ್ಟೋಕ್ಸ್ ಇದೀಗ ಮುಂಬರುವ ಋತುವಿನಿಂದಲೂ ಹೊರಗುಳಿದಿದ್ದಾರೆ.

ಇದನ್ನೂ ಓದಿ: ದ್ರಾವಿಡ್ ಬಳಿಕ ಭಾರತದ ಮುಖ್ಯ ಕೋಚ್ ಯಾರಾಗ್ತಾರೆ? ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಈ ದಿಗ್ಗಜನ ಹೆಸರು

ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸ್ಟಾರ್ ಆಲ್ ರೌಂಡರ್ ಬಗ್ಗೆ ಮಾಹಿತಿ ನೀಡಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಕೆಲಸದ ಹೊರೆ ಮತ್ತು ಫಿಟ್ನೆಸ್ ಕಾರಣದಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ 32 ವರ್ಷದ ಸ್ಟೋಕ್ಸ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ ಎಂಬ ವರದಿಗಳು ಹರಿದಾಡಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News