BWF 2022: ಲಕ್ಷ್ಯ ಸೇನ್ ಗೆ ಗೆಲುವು-ಪದಕ ಬೇಟೆ ಮುಂದುವರೆಸಿದ ಭಾರತೀಯ ವೀರರು

ಇತ್ತೀಚೆಗೆಯಷ್ಟೇ ನಡೆದ ವಿಶ್ವ ಚಾಂಪಿಯನ್ ಶಿಪ್, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಪದಕ ದೋಚಿದ್ದರು. ಇದೀಗ ಮತ್ತೊಂದು ಕ್ರೀಡಾಕೂಟ ಆಯೋಜನೆಗೊಂಡಿದ್ದು, ಭಾರತದ ಬ್ಯಾಡ್ಮಿಂಟನ್ ಧೀರರು ಪದಕ ಗೆಲ್ಲುತ್ತಾರಾ ಎಂದು ಕಾದು ನೋಡಬೇಕಿದೆ.

Written by - Bhavishya Shetty | Last Updated : Aug 22, 2022, 05:50 PM IST
    • ವಿಶ್ವ ಚಾಂಪಿಯನ್‌ಶಿಪ್‌ ಆಗಸ್ಟ್ 22 ರಂದು ಜಪಾನ್‌ನ ಟೋಕಿಯೊದಲ್ಲಿ ಪ್ರಾರಂಭವಾಗಿದೆ
    • ಆರಂಭಿಕ ದಿನದಂದು ಭರ್ಜರಿ ಆಟ ಪ್ರದರ್ಶಿಸಿದ ಭಾರತದ ವೀರರು
    • ಮುಂದಿನ ಸುತ್ತಿಗೆ ಪಾದಾರ್ಪಣೆ ಮಾಡಿದ ಆಟಗಾರರ ವಿವರ ಇಲ್ಲಿದೆ
BWF 2022: ಲಕ್ಷ್ಯ ಸೇನ್ ಗೆ ಗೆಲುವು-ಪದಕ ಬೇಟೆ ಮುಂದುವರೆಸಿದ ಭಾರತೀಯ ವೀರರು title=
Lakshya Sen

2022 ರ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ವಿಶ್ವ ಚಾಂಪಿಯನ್‌ಶಿಪ್‌ ಆಗಸ್ಟ್ 22 ರಂದು ಜಪಾನ್‌ನ ಟೋಕಿಯೊದಲ್ಲಿ ಪ್ರಾರಂಭವಾಗಿದೆ. ಇನ್ನು ಈ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕಲಿಗಳೂ ಭಾಗವಹಿಸಲಿದ್ದು, ಪದಕ ಬೇಟೆ ನಡೆಸಲಿದ್ದಾರೆ. ಇತ್ತೀಚೆಗೆಯಷ್ಟೇ ನಡೆದ ವಿಶ್ವ ಚಾಂಪಿಯನ್ ಶಿಪ್, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಪದಕ ದೋಚಿದ್ದರು. ಇದೀಗ ಮತ್ತೊಂದು ಕ್ರೀಡಾಕೂಟ ಆಯೋಜನೆಗೊಂಡಿದ್ದು, ಭಾರತದ ಬ್ಯಾಡ್ಮಿಂಟನ್ ಧೀರರು ಪದಕ ಗೆಲ್ಲುತ್ತಾರಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Prediabetes : ಭಾರತದಲ್ಲಿ ಹೆಚ್ಚುತ್ತಿವೆ ಪ್ರಿಡಯಾಬಿಟಿಸ್ ಪ್ರಕರಣಗಳು.. ಇದು ಏನು ಸೂಚಿಸುತ್ತದೆ?

ಭಾರತ ತಂಡ:

  • ಪುರುಷರ ಸಿಂಗಲ್ಸ್: ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಬಿ. ಸಾಯಿ ಪ್ರಣೀತ್, ಎಚ್‌ಎಸ್ ಪ್ರಣೋಯ್
  • ಮಹಿಳೆಯರ ಸಿಂಗಲ್ಸ್: ಸೈನಾ ನೆಹ್ವಾಲ್, ಮಾಳವಿಕಾ ಬನ್ಸೋಡ್
  • ಪುರುಷರ ಡಬಲ್ಸ್: ಚಿರಾಗ್ ಶೆಟ್ಟಿ/ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ, ಮನು ಅತ್ರಿ/ಬಿ ಸುಮೀತ್ ರೆಡ್ಡಿ, ಕೃಷ್ಣ ಪ್ರಸಾದ್ ಗರಗ/ವಿಷ್ಣುವರ್ಧನ್ ಗೌಡ್ ಪಂಜುಲ, ಎಂಆರ್ ಅರ್ಜುನ್/ಧ್ರುವ ಕಪಿಲ
  • ಮಹಿಳೆಯರ ಡಬಲ್ಸ್: ಟ್ರೀಸಾ ಜಾಲಿ/ಗಾಯತ್ರಿ ಗೋಪಿಚಂದ್, ಅಶ್ವಿನಿ ಪೊನ್ನಪ್ಪ/ಎನ್ ಸಿಕ್ಕಿ ರೆಡ್ಡಿ, ಅಶ್ವಿನಿ ಭಟ್/ಶಿಖಾ ಗೌತಮ್, ಪೂಜಾ ದಂಡು/ಸಂಜನಾ ಸಂತೋಷ್
  • ಮಿಶ್ರ ಡಬಲ್ಸ್: ಇಶಾನ್ ಭಟ್ನಾಗರ್/ತನಿಶಾ ಕ್ರಾಸ್ಟೊ ಮತ್ತು ವೆಂಕಟ್ ಗೌರವ್ ಪ್ರಸಾದ್/ಜೂಹಿ ದೇವಾಂಗನ್

ಭಾರತದ ಲಕ್ಷ್ಯ ಸೇನ್ ಅವರು ಡೆನ್ಮಾರ್ಕ್‌ನ ಹ್ಯಾನ್ಸ್-ಕ್ರಿಸ್ಟಿಯನ್ ವಿಟ್ಟಿಂಗಸ್ ಅವರನ್ನು 21-12, 21-11 ರಿಂದ ಸೋಲಿಸಿ 2022 ರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ. ಡೇನ್‌ಗೆ ಕಷ್ಟವಾಗುವಂತೆ ಶಾಟ್‌ಗಳನ್ನು ಹೊಡೆದ ಲಕ್ಷ್ಯ ಅವರು ಪಂದ್ಯದುದ್ದಕ್ಕೂ ಪ್ರಬಲ ಪೈಪೋಟಿಯನ್ನು ನೀಡಿದ್ದರು. ಕಳೆದ ಆವೃತ್ತಿಯ ಕಂಚಿನ ಪದಕ ವಿಜೇತ, ಒಂಬತ್ತನೇ ಶ್ರೇಯಾಂಕದವರೂ ಆದ ಲಕ್ಷ್ಯ ಸೇನ್ ಪಂದ್ಯವನ್ನು ಕೇವಲ 35 ನಿಮಿಷಗಳಲ್ಲಿ ಕೊನೆಗೊಳಿಸಿದ್ದಾರೆ.

ಟೋಕಿಯೋದಲ್ಲಿ ನಡೆಯುತ್ತಿರುವ BWF ವಿಶ್ವ ಚಾಂಪಿಯನ್‌ಶಿಪ್‌ನ ಆರಂಭಿಕ ದಿನದಂದು ಭಾರತದ ಮಹಿಳೆಯರ ಮತ್ತು ಮಿಶ್ರ ಡಬಲ್ಸ್ ತಂಡ ಸ್ಪರ್ಧೆಯಲ್ಲಿ ಗೆಲುವುಗಳನ್ನು ದಾಖಲಿಸಿದೆ. 2019 ರ ಕಂಚಿನ ಪದಕ ವಿಜೇತ ಪ್ರಣೀತ್ ಅವರು 15-21 21-15 15-21 ರಿಂದ ವಿಶ್ವದ 4 ನೇ ಶ್ರೇಯಾಂಕದ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಆದಾಗ್ಯೂ, ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಅವರು ಮಾಲ್ಡೀವ್ಸ್‌ನ ಅಮೀನ್‌ನಾಥ್ ನಬೀಹಾ ಅಬ್ದುಲ್ ರಜಾಕ್ ಮತ್ತು ಫಾತಿಮತ್ ನಬಾಹಾ ಅಬ್ದುಲ್ ರಜಾಕ್ ವಿರುದ್ಧ 21-7 21-9 ಅಂತರದಲ್ಲಿ ಜಯಗಳಿಸಿ ಮಹಿಳೆಯರ ಡಬಲ್ಸ್ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ.

ಅಶ್ವಿನಿ ಮತ್ತು ಸಿಕ್ಕಿ ಎರಡನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಚೀನಾದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫ್ಯಾನ್ ಅವರನ್ನು ಎದುರಿಸಲಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಮತ್ತು ಇಶಾನ್ ಭಟ್ನಾಗರ್ 29 ನಿಮಿಷಗಳಲ್ಲಿ ಜರ್ಮನಿಯ ಪ್ಯಾಟ್ರಿಕ್ ಸ್ಕೀಲ್ ಮತ್ತು ಫ್ರಾನ್ಜಿಸ್ಕಾ ವೋಲ್ಕ್‌ಮನ್‌ರನ್ನು 21-13 21-13 ಸೆಟ್‌ಗಳಿಂದ ಸೋಲಿಸಿ ತಮ್ಮ ಅಭಿಯಾನಕ್ಕೆ ಸಕಾರಾತ್ಮಕ ಆರಂಭವನ್ನು ನೀಡಿದ್ದಾರೆ. ಇನ್ನು ಮುಂಬರುವ ಪಂದ್ಯದಲ್ಲಿ ಭಾರತದ ಜೋಡಿಯು 14ನೇ ಶ್ರೇಯಾಂಕದ ಸುಪಕ್ ಜೊಮ್ಕೊಹ್ ಮತ್ತು ಥಾಯ್ಲೆಂಡ್‌ನ ಸುಪಿಸ್ಸಾರಾ ಪಾವ್ಸಂಪ್ರಾನ್ ಅವರನ್ನು ಎದುರಿಸಲಿದೆ.

ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎಚ್ ಎಸ್ ಪ್ರಣಯ್ ಅವರು ಆಸ್ಟ್ರಿಯಾದ ಲೂಕಾ ವ್ರೇಬರ್ ಅವರನ್ನು 21-12, 21-11 ನೇರ ಗೇಮ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಪುರುಷರ ಡಬಲ್ಸ್ ಪಂದ್ಯದಲ್ಲಿ ಎಂ.ಆರ್.ಅರ್ಜುನ್ ಮತ್ತು ಧ್ರುವ ಕಪಿಲಾ 21-17, 17-21, 22-20ರಲ್ಲಿ ಥಾಯ್ಲೆಂಡ್‌ನ ಸುಪಕ್ ಕೊಮ್ಕೊಹ್-ಕಿಟ್ಟಿನುಪಾಂಗ್ ಕೆಡ್ರೆನ್ ಅವರನ್ನು ಸೋಲಿಸಿದರು. 

ಇದನ್ನೂ ಓದಿ: 100 ವರ್ಷಕ್ಕಿಂತ ಹೆಚ್ಚು ಬದುಕು, ರಾತ್ರಿಗಳೇ ಇಲ್ಲದ ದಿನಗಳು... ಭಯ ಹುಟ್ಟಿಸುವಂತಿವೆ ಈ ಭವಿಷ್ಯಗಳು

ಇನ್ನು ನಾಳೆ ನಡೆಯಲಿರುವ ಪಂದ್ಯದಲ್ಲಿ 2021ರ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಐರ್ಲೆಂಡ್‌ನ ನಾಟ್ ನ್ಗುಯೆನ್ ಅವರನ್ನು ಎದುರಿಸಲಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News