Rare No Ball: ಕ್ರಿಕೆಟ್ ಪಂದ್ಯದ ವೇಳೆ ಅಪರೂಪದ ‘ನೋ ಬಾಲ್’ ಎಸೆದ ಬಾಂಗ್ಲಾ ಬೌಲರ್! ಏನದು ನೋಡಿ

Mehidy Hasan No Balls: ಭಾರತ ಬ್ಯಾಟಿಂಗ್ ಮಾಡುತ್ತಿರುವಾಗ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದರು. ಮೆಹದಿ ಹಸನ್ 21ನೇ ಓವರ್ ನಲ್ಲಿ ಬೌಲ್ ಮಾಡಿದರು. ಮೆಹದಿ ಮೊದಲ ನಾಲ್ಕು ಎಸೆತಗಳನ್ನು ಚೆನ್ನಾಗಿ ಬೌಲ್ ಮಾಡಿದ್ದರು. ಆದರೆ ಐದನೇ ಎಸೆತವನ್ನು ಬೌಲಿಂಗ್ ಮಾಡುವಾಗ ಮೆಹದಿ, ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ವಿಕೆಟ್ ಗಳನ್ನು ಕಾಲಿನಿಂದ ಒದ್ದರು. ಅಂಪೈರ್ ಚೆಂಡನ್ನು ನೋ ಬಾಲ್ ಎಂದು ಘೋಷಿಸಿದರು.

Written by - Bhavishya Shetty | Last Updated : Dec 9, 2022, 11:21 AM IST
    • ಬೌಲಿಂಗ್ ಮಾಡುವಾಗ ಕ್ರೀಸ್ ದಾಟಿದರೆ ನೋಬಾಲ್ ನೀಡುತ್ತಾರೆ
    • ಏಕದಿನ ಪಂದ್ಯದಲ್ಲಿ ಅಪರೂಪದ ನೋ ಬಾಲ್ ಎಸೆತ ಕಂಡುಬಂದಿತ್ತು
    • ಮೆಹದಿ, ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ವಿಕೆಟ್ ಗಳನ್ನು ಕಾಲಿನಿಂದ ಒದ್ದರು
Rare No Ball: ಕ್ರಿಕೆಟ್ ಪಂದ್ಯದ ವೇಳೆ ಅಪರೂಪದ ‘ನೋ ಬಾಲ್’ ಎಸೆದ ಬಾಂಗ್ಲಾ ಬೌಲರ್! ಏನದು ನೋಡಿ  title=
India Bangladesh

Mehidy Hasan No Balls: ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ನೋಬಾಲ್ ಆಗುವುದು ಸಾಮಾನ್ಯ. ಲೈನ್ ನಾಬ್, ಹೈಟ್ ನಾಬ್, ಸೈಡ್ ನಾಬ್ ಇತ್ಯಾದಿಗಳ ಮೂಲಕ ನೋ ಬಾಲ್ ಎಸೆತವಾಗುತ್ತದೆ. ಹೆಚ್ಚಿನ ವೇಗದ ಬೌಲರ್‌ಗಳು ತಮ್ಮ ರನ್-ಅಪ್ ಅನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಂಪೈರ್‌ಗಳು ಬೌಲಿಂಗ್ ಮಾಡುವಾಗ ಕ್ರೀಸ್ ದಾಟಿದರೆ ನೋಬಾಲ್ ನೀಡುತ್ತಾರೆ. ಬೌಲರ್‌ನ ಚೆಂಡು ನೇರವಾಗಿ ಬ್ಯಾಟರ್‌ನ ಸೊಂಟದ ಮೇಲೆ ಬಿದ್ದಿದ್ದರೂ ಸಹ ನೋಬಾಲ್ ನೀಡಲಾಗುತ್ತದೆ. ಚೆಂಡು ನೆಲಕ್ಕೆ ಬಡಿದು ಬ್ಯಾಟರ್‌ನ ತಲೆಯ ಮೇಲೆ ಹೋದರೆ ಅಂಪೈರ್‌ಗಳು ನೋ ಬಾಲ್ ನೀಡುತ್ತಾರೆ. ಇವೆಲ್ಲದರ ಹೊರತಾಗಿ ಬುಧವಾರ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಅಪರೂಪದ ನೋ ಬಾಲ್ ಎಸೆತ ಕಂಡುಬಂದಿತ್ತು.

ಇದನ್ನೂ ಓದಿ: IND vs BAN: ಇಂಡೋ-ಬಾಂಗ್ಲಾ 3ನೇ ಪಂದ್ಯದ ಮೇಲೆ ವರುಣನ ವಕ್ರದೃಷ್ಟಿ: ಚಿತ್ತಾಗಾಂಗ್ ಹವಾಮಾನ ವರದಿ ಹೀಗಿದೆ

ಭಾರತ ಬ್ಯಾಟಿಂಗ್ ಮಾಡುತ್ತಿರುವಾಗ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದರು. ಮೆಹದಿ ಹಸನ್ 21ನೇ ಓವರ್ ನಲ್ಲಿ ಬೌಲ್ ಮಾಡಿದರು. ಮೆಹದಿ ಮೊದಲ ನಾಲ್ಕು ಎಸೆತಗಳನ್ನು ಚೆನ್ನಾಗಿ ಬೌಲ್ ಮಾಡಿದ್ದರು. ಆದರೆ ಐದನೇ ಎಸೆತವನ್ನು ಬೌಲಿಂಗ್ ಮಾಡುವಾಗ ಮೆಹದಿ, ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ವಿಕೆಟ್ ಗಳನ್ನು ಕಾಲಿನಿಂದ ಒದ್ದರು. ಅಂಪೈರ್ ಚೆಂಡನ್ನು ನೋ ಬಾಲ್ ಎಂದು ಘೋಷಿಸಿದರು. ಆ ಬಳಿಕ ಮತ್ತೆ ಮೆಹದಿ ಮುಂದಿನ ಎಸೆತವನ್ನು ಬೌಲಿಂಗ್ ಮಾಡುವಾಗಲೂ ಸಹ ತನ್ನ ಕಾಲಿನಿಂದ ವಿಕೆಟ್‌ಗಳನ್ನು ಒದೆಯುತ್ತಾರೆ. ಅಂಪೈರ್ ಚೆಂಡನ್ನು ಮತ್ತೆ ನೋ ಬಾಲ್ ಎಂದು ಘೋಷಿಸುತ್ತಾರೆ.

ಮೊದಲ ನೋಬಾಲ್ ಗೆ ಬಂದ ಫ್ರೀ ಹಿಟ್ ಅನ್ನು ಶ್ರೇಯಸ್ ಅಯ್ಯರ್ ಬಳಸಿಕೊಳ್ಳಲಾಗಲಿಲ್ಲ. ಅವರು ಕೇವಲ ಸಿಂಗಲ್ ತೆಗೆದುಕೊಂಡರು. ಎರಡನೇ ಫ್ರೀ ಹಿಟ್‌ಗೆ ಬೌಂಡರಿ ಬಾರಿಸಿದರು. ಮೆಹದಿ ಹಸನ್ ಅವರ ಅಪರೂಪದ ನೋಬಾಲ್‌ಗಳಿಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ನೋಬಾಲ್‌ಗಳನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ನಗುತ್ತಿದ್ದಾರೆ. 'ಅಪರೂಪದ ನೋಬಾಲ್ಸ್' ಎಂದು ಒಬ್ಬರು ಕಾಮೆಂಟ್ ಮಾಡಿದರೆ, 'ಇಂತಹ ನೋಬಾಲ್‌ಗಳು ಯಾವತ್ತೂ ನೋಡಿಲ್ಲ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: IPLನಿಂದ ವಿದೇಶಿ ಆಟಗಾರರಿಗೆ ಬಿಗ್ ಶಾಕ್: ಈ ನಿಯಮದ ಪ್ರಕಾರ ತಂಡಕ್ಕೆ ಸೇರ್ಪಡೆಯಿಲ್ಲ!!

ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 5 ರನ್‌ಗಳಿಂದ ಸೋತಿದೆ. 272 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು. ಶ್ರೇಯಸ್ ಅಯ್ಯರ್ (82) ಗರಿಷ್ಠ ಸ್ಕೋರರ್ ಆಗಿದ್ದರೆ, ರೋಹಿತ್ ಶರ್ಮಾ (51) ಅರ್ಧಶತಕದೊಂದಿಗೆ ಕೊನೆಯವರೆಗೂ ಹೋರಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು. ಮೆಹದಿ ಹಸನ್ (ಔಟಾಗದೆ 100) ಶತಕ ಗಳಿಸಿದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Lin - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News