Gautam Gambhir: ಗೌತಮ್ ಗಂಭೀರ್ ಹೆಲ್ಮೆಟ್’ಗೆ ಗಟ್ಟಿಯಾಗಿ ತಗುಲಿದ ಬಾಲ್: ತಕ್ಷಣವೇ ಪಾಕ್ ಆಟಗಾರ ಮಾಡಿದ್ದೇನು ಗೊತ್ತಾ?

Gautam Gambhir: ಇಂಡಿಯಾ ಮಹಾರಾಜಸ್ ರನ್-ಚೇಸ್‌’ನ 11 ನೇ ಓವರ್‌ನಲ್ಲಿ, ಗಂಭೀರ್ ಫೈನ್ ಲೆಗ್ ಪ್ರದೇಶದ ಮೇಲೆ ಅಬ್ದುಲ್ ರಜಾಕ್ ಅವರ ರ‍್ಯಾಂಪ್ ಶಾಟ್ ಅನ್ನು ಆಡಲು ಪ್ರಯತ್ನಿಸಿದರು. ಆದರೆ ಗಂಭೀರ್ ಬಾಲ್ ಅನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡರೂ ಸಹ, ಹೆಲ್ಮೆಟ್‌’ಗೆ ಬಾಲ್ ಗಟ್ಟಿಯಾಗಿ ತಗುಲಿದೆ.

Written by - Bhavishya Shetty | Last Updated : Mar 11, 2023, 03:02 PM IST
    • ಗೌತಮ್ ಗಂಭೀರ್ ಮತ್ತು ಶಾಹಿದ್ ಅಫ್ರಿದಿ ಅದೆಷ್ಟೋ ಪಂದ್ಯದ ಸಮಯದಲ್ಲಿ ಕಿತ್ತಾಡಿಕೊಂಡಿದ್ದಾರೆ.
    • ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದೆ.
    • ಆದರೆ ದೋಹಾದ ಕ್ರಿಕೆಟ್ ಸ್ಟೇಡಿಯಂನಲ್ಲಿ ಒಡನಾಟದ ಕ್ಷಣವೊಂದು ಕಾಣಿಸಿಕೊಂಡಿದೆ.
Gautam Gambhir: ಗೌತಮ್ ಗಂಭೀರ್ ಹೆಲ್ಮೆಟ್’ಗೆ ಗಟ್ಟಿಯಾಗಿ ತಗುಲಿದ ಬಾಲ್: ತಕ್ಷಣವೇ ಪಾಕ್ ಆಟಗಾರ ಮಾಡಿದ್ದೇನು ಗೊತ್ತಾ? title=
Gautam Gambhir

Gautam Gambhir: ಗೌತಮ್ ಗಂಭೀರ್ ಮತ್ತು ಶಾಹಿದ್ ಅಫ್ರಿದಿ ಅದೆಷ್ಟೋ ಪಂದ್ಯದ ಸಮಯದಲ್ಲಿ ಕಿತ್ತಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದೆ. ಆದರೆ ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ ಸಂದರ್ಭದಲ್ಲಿ ಒಡನಾಟದ ಕ್ಷಣವೊಂದು ಕಾಣಿಸಿಕೊಂಡಿದೆ.

ಇದನ್ನೂ ಓದಿ: Watch: ಸ್ಟ್ಯಾಂಡ್‌ನಲ್ಲಿ ಫ್ಯಾನ್‌ ಹಿಡಿದ ಕ್ಯಾಚ್ ನೋಡಿ ಗಿಲ್‌ ಶಾಕ್? ವೈರಲ್‌ ಆಯ್ತು ಎಕ್ಷ್‌ಪ್ರೇಷನ್‌!‌

ಮಾರ್ಚ್ 10 ರಂದು ಇಂಡಿಯಾ ಮಹಾರಾಜಸ್ ಮತ್ತು ಏಷ್ಯಾ ಲಯನ್ಸ್ ನಡುವಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ ಸಿ) ಪಂದ್ಯ 1ರ ಸಮಯದಲ್ಲಿ ಈ ದೃಶ್ಯ ಕಂಡುಬಂದಿದೆ.

ಇಂಡಿಯಾ ಮಹಾರಾಜಸ್ ರನ್-ಚೇಸ್‌’ನ 11 ನೇ ಓವರ್‌ನಲ್ಲಿ, ಗಂಭೀರ್ ಫೈನ್ ಲೆಗ್ ಪ್ರದೇಶದ ಮೇಲೆ ಅಬ್ದುಲ್ ರಜಾಕ್ ಅವರ ರ‍್ಯಾಂಪ್ ಶಾಟ್ ಅನ್ನು ಆಡಲು ಪ್ರಯತ್ನಿಸಿದರು. ಆದರೆ ಗಂಭೀರ್ ಬಾಲ್ ಅನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡರೂ ಸಹ, ಹೆಲ್ಮೆಟ್‌’ಗೆ ಬಾಲ್ ಗಟ್ಟಿಯಾಗಿ ತಗುಲಿದೆ.

 
 
 
 

 
 
 
 
 
 
 
 
 
 
 

A post shared by ESPNcricinfo (@espncricinfo)

 

ಲೆಗ್ ಸೈಡ್‌’ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಫ್ರಿದಿ, ಮಾಜಿ ಭಾರತೀಯ ಬ್ಯಾಟರ್‌’ನ ಯೋಗಕ್ಷೇಮವನ್ನು ಪರಿಶೀಲಿಸಲು  ಧಾವಿಸಿದರು. ಗಂಭೀರ್ ಅವರು 39 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಾಯದಿಂದ 54 ರನ್ ಗಳಿಸಿ ತಮ್ಮ ಆಟದ ಲಯದಲ್ಲಿದ್ದರು. ಆದರೆ ಇಂಡಿಯಾ ಮಹಾರಾಜಸ್, ಲಯನ್ಸ್ ವಿರುದ್ಧ ಒಂಬತ್ತು ರನ್‌’ಗಳಿಂದ ಸೋತಿದ್ದಾರೆ.

166 ರನ್ ಚೇಸ್ ಮಾಡಲು ಮುಂದಾದ ಇಂಡಿಯಾ ಮಹಾರಾಜಸ್ ತಂಡ, ಎಂಟು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.

ಇದನ್ನೂ ಓದಿ: ಶುಭಮನ್ ಗಿಲ್‌ಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಕ್ಯಾಪ್ಟನ್ ರೋಹಿತ್ : Video ನೋಡಿ

ಈ ಮಧ್ಯೆ ಅಫ್ರಿದಿ ತಮ್ಮ ತಂಡದ ಪರ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಎಂಟು ಎಸೆತಗಳಲ್ಲಿ ಎರಡು ಬೌಂಡರಿಗಳ ಸಹಾಯದಿಂದ 12 ರನ್ ಗಳಿಸಿದರು. ಶಾರ್ಟ್ ಫೈನ್ ಲೆಗ್‌’ನಲ್ಲಿ ಹರ್ಭಜನ್ ಸಿಂಗ್‌ಗೆ ಕ್ಯಾಚ್ ನೀಡಿದ ಪರ್ವಿಂದರ್ ಅವಾನಾ ಅವರ ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News