IND vs AUS: ಇಂಡೋ ಆಸೀಸ್ ಟೆಸ್ಟ್ ಸರಣಿಗೂ ಮುನ್ನವೇ ಎಚ್ಚರಿಕೆ ನೀಡಿದ ಆಟಗಾರ: ಏನಂದ್ರು ನೋಡಿ!

IND vs AUS Test Match: 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ಪ್ರಕಾರ, ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಹೊರಡುವ ಮೊದಲು ಮಾತನಾಡಿದ ಹೆಡ್, “ಪಾಕಿಸ್ತಾನದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿದ ನಂತರ ನಾನು ನನ್ನ ಬಗ್ಗೆ ಕೊಂಚ ಆಲೋಚನೆ ಮಾಡಿದೆ. ಉಪಖಂಡದಲ್ಲಿ ಆಡಿದ ಕೊನೆಯ ಸರಣಿಯಲ್ಲಿ ನನಗೆ ಬೇಕಾದಷ್ಟು ಧನಾತ್ಮಕವಾಗಿ ಬ್ಯಾಟಿಂಗ್ ಮಾಡಲಿಲ್ಲ ಎಂದು ನಾನು ಅಂದುಕೊಂಡೆ” ಅಂತ ಹೇಳಿದ್ದಾರೆ.  

Written by - Bhavishya Shetty | Last Updated : Jan 29, 2023, 03:29 PM IST
    • ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್‌ ಪಂದ್ಯ
    • ನಡುವಿನ ನಾಲ್ಕು ಟೆಸ್ಟ್‌ಗಳ ಸರಣಿ ಫೆಬ್ರವರಿ 9 ರಂದು ಪ್ರಾರಂಭವಾಗಲಿದೆ
    • ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಹೇಳಿಕೆ ನೀಡಿದ್ದಾರೆ
IND vs AUS: ಇಂಡೋ ಆಸೀಸ್ ಟೆಸ್ಟ್ ಸರಣಿಗೂ ಮುನ್ನವೇ ಎಚ್ಚರಿಕೆ ನೀಡಿದ ಆಟಗಾರ: ಏನಂದ್ರು ನೋಡಿ! title=
India Australia Test

IND vs AUS Test Match: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ತಮ್ಮ ಸಂಪ್ರದಾಯವಾದಿ ಧೋರಣೆಯನ್ನು ಬಿಟ್ಟು ಮುಂಬರುವ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎದುರಾಳಿ ತಂಡದ ದಾಳಿಯಲ್ಲಿ ಪ್ರಾಬಲ್ಯ ಸಾಧಿಸುವ ತಂತ್ರವನ್ನು ಅಳವಡಿಸಿಕೊಳ್ಳಲಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್‌ಗಳ ಸರಣಿ ಫೆಬ್ರವರಿ 9 ರಂದು ಪ್ರಾರಂಭವಾಗಲಿದೆ.

ಇದನ್ನೂ ಓದಿ: IND vs NZ: 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಈ 3 ಆಟಗಾರರು ಬಹಳ ಮುಖ್ಯ!

ಟ್ರಾವಿಸ್ ಹೆಡ್ ಹೇಳಿಕೆ :

'ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ಪ್ರಕಾರ, ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಹೊರಡುವ ಮೊದಲು ಮಾತನಾಡಿದ ಹೆಡ್, “ಪಾಕಿಸ್ತಾನದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿದ ನಂತರ ನಾನು ನನ್ನ ಬಗ್ಗೆ ಕೊಂಚ ಆಲೋಚನೆ ಮಾಡಿದೆ. ಉಪಖಂಡದಲ್ಲಿ ಆಡಿದ ಕೊನೆಯ ಸರಣಿಯಲ್ಲಿ ನನಗೆ ಬೇಕಾದಷ್ಟು ಧನಾತ್ಮಕವಾಗಿ ಬ್ಯಾಟಿಂಗ್ ಮಾಡಲಿಲ್ಲ ಎಂದು ನಾನು ಅಂದುಕೊಂಡೆ” ಅಂತ ಹೇಳಿದ್ದಾರೆ.  

ಟ್ರಾವಿಸ್ ಹೆಡ್ ಮಾತು ಮುಂದುವರೆಸಿ, 'ಈ ಸರಣಿಯಲ್ಲಿ ನಾನು ಸ್ಪಿನ್ ವಿರುದ್ಧ ಆಡಿದ ರೀತಿ, ನಾನು ಹೆಚ್ಚು ಸಕಾರಾತ್ಮಕವಾಗಿ ಆಡಿದರೆ, ನನ್ನ ಕಾಲ್ಚಳಕವು ಉತ್ತಮವಾಗಿರುತ್ತದೆ ಮತ್ತು ನನ್ನ ರಕ್ಷಣಾತ್ಮಕ ಆಟವೂ ಉತ್ತಮವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಇದು ಆಸ್ಟ್ರೇಲಿಯಾದಲ್ಲಿ ಆಡುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ ಎಂದು ನನಗೆ ತಿಳಿದಿದೆ” ಎಂದರು.

“ಈ ಬೇಸಿಗೆಯಲ್ಲಿ ನಾವು ವೇಗದ ಬೌಲರ್‌ಗಳ ವಿರುದ್ಧ ಇದನ್ನು ಪರೀಕ್ಷಿಸಿದ್ದೇವೆ. ನನ್ನ 'ಫ್ರಂಟ್ ಫೂಟ್ ಡಿಫೆನ್ಸ್' ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಹೋಗಬೇಕಾಗಿರುವುದು ಸಕಾರಾತ್ಮಕ ಮನಸ್ಥಿತಿಯಿಂದ ಹೊರತು ರಕ್ಷಣಾತ್ಮಕವಾಗಿ ಅಲ್ಲ” ಎಂದು ಹೇಳಿದರು.,

ಟ್ರಾವಿಸ್ ಹೆಡ್ ಏಷ್ಯಾದಲ್ಲಿ ಕೊನೆಯ ಮೂರು ಸರಣಿಗಳಲ್ಲಿ ಆಡಿದ್ದರು. 2018 ಮತ್ತು 2022 ರಲ್ಲಿ ಪಾಕಿಸ್ತಾನದ ವಿರುದ್ಧ ಮತ್ತು ಕಳೆದ ವರ್ಷ ಶ್ರೀಲಂಕಾದಲ್ಲಿ ಆಡಿದ್ದರು. ಈ ಸರಣಿಯ 11 ಇನ್ನಿಂಗ್ಸ್‌ಗಳಲ್ಲಿ 21.30 ಸರಾಸರಿಯಲ್ಲಿ ಕೇವಲ 213 ರನ್ ಗಳಿಸಿದ್ದರು.

ಇದನ್ನೂ ಓದಿ:  Ishan Kishan: Ind vs NZ ಎರಡನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಬದಲಿಗೆ ಈ ಆಟಗಾರ!

ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಸ್ವಲ್ಪ ರಕ್ಷಣಾತ್ಮಕ ಮನೋಭಾವವನ್ನು ಅಳವಡಿಸಿಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಅಲ್ಲಿಗೆ ಹೋಗಿ ಪಿಚ್ ಅನ್ನು ನಿರ್ಣಯಿಸುವುದು ಮತ್ತು ನಿಮ್ಮ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಅಲ್ಲಿ, ಪಂದ್ಯವು ಕಡಿಮೆ ಸ್ಕೋರಿಂಗ್ ಅಥವಾ ಹೆಚ್ಚಿನ ಸ್ಕೋರಿಂಗ್ ಆಗಿರಬಹುದು. ನೀವು ಕೆಲವೊಮ್ಮೆ ದೊಡ್ಡ ಸ್ಕೋರ್ ಮಾಡಬೇಕಾಗಬಹುದು ಅಥವಾ 40, 50 ಅಥವಾ 60 ಸ್ಕೋರ್ ಕೂಡ ನಿಮ್ಮನ್ನು ಗೆಲ್ಲಿಸಬಹುದು” ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News