3ನೇ ಟೆಸ್ಟ್‌ ಪಂದ್ಯದಲ್ಲೂ ಆಸಿಸ್ ಗೆ ದೊರೆತ ಜಯ ! 3-0 ಅಂತರದಲ್ಲಿ ಸರಣಿ ವಶ

AUS vs PAK  3rd Test :  ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೆ ಟೆಸ್ಟ್‌ ಪಂದ್ಯವು ಇಂದು( ಶನಿವಾರ)  ಅಂತ್ಯಗೊಂಡಿದೆ. ಪಾಕ್‌ ವಿರದ್ದ ಆಸಿಸ್‌ ತಂಡವು ಭರ್ಜರಿ ಜಯಗಳಿಸಿದ್ದು, ಸರಣಿಯನ್ನು 3-0 ಅಂತರಗಳಿಂದ ವಶಮಾಡಿಕೊಂಡಿದೆ. 

Written by - Zee Kannada News Desk | Last Updated : Jan 6, 2024, 06:08 PM IST
3ನೇ ಟೆಸ್ಟ್‌ ಪಂದ್ಯದಲ್ಲೂ ಆಸಿಸ್ ಗೆ ದೊರೆತ ಜಯ ! 3-0 ಅಂತರದಲ್ಲಿ ಸರಣಿ ವಶ  title=

AUS vs PAk test series : ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಕಡೆಯ ಹಾಗೂ ಮೂರನೇ ಟೆಸ್ಟ್‌ ಪಂದ್ಯವು ಸಿಡ್ನಿ ಸ್ಟೇಡಿಂನಲ್ಲಿ ಜನವರಿ 3 ರಿಂದ ಆರಂಭವಾಗಿತ್ತು. ಈ ಪಂದ್ಯದಲ್ಲಿ ಆಥಿತೇಯ ಆಸ್ಟ್ರೇಲಿಯಾ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಸರಣಿಯನ್ನು ತಮ್ಮ ವಶ ಮಾಡಿಕೊಂಡಿದೆ. 

ಆಥಿತೇಯ ಆಸಿಸ್‌ ತಂಡವು ಪಾಕ್‌ ವಿರುದ್ದ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಿತ್ತು, ಆಡಿದ ಮೂರು ಪಂದ್ಯಗಳಲ್ಲಿ ಜಯಗಳಿಸಿ 3-0 ಅಂತರಗಳಿಂದ ಸರಣಿಯನ್ನು ಗೆದ್ದುಕೊಂಡಿದೆ.  ಅಷ್ಟೇ ಅಲ್ಲದೇ ಈ ಮೂಲಕ ತಮ್ಮ ಗೆಲುವನ್ನು ತಂಡದ ಪರ ವಿದಾಯ ಪಂದ್ಯವನ್ನು ಆಡಿದ ಡೇವಿಡ್‌ ವಾರ್ನರ್‌ ಅವರಿಗೆ ಅರ್ಪಿಸಲಾಗಿದೆ. 

ಇದನ್ನು ಓದಿ-ಟಿ 20 ವಿಶ್ವಕಪ್ ಡೇಟ್ ಫಿಕ್ಸ್: ಈ ದಿನದಂದು ನಡೆಯಲಿದೆ ಇಂಡೋ ಪಾಕ್ ಹೈವೋಲ್ಟೇಜ್ ಫೈಟ್

ಜನವರಿ 3 ರಂದು ಆರಂಭವಾಗಿದ್ದ ಕಡೆಯ ಪಂದ್ಯವನ್ನು ಪಾಕ್‌ ಟಾಸ್‌ಗೆದ್ದು ಬ್ಯಾಟ್‌ ಮಾಡುವ ಮೂಲಕ ಆರಂಭಿಸಿತ್ತು, ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್‌  313ರ ಉತ್ತಮ ರನ್‌ ಕಲೆ ಹಾಕಿತ್ತು.  ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್‌ ಪರ ಮೊಹಮ್ಮದ್‌ ರಿಜ್ವಾನ್‌ 88 ರನ್‌ ಗಳಿಸಿದರೆ, ಆಘಾ ಸಲ್ಮಾನ್‌ 53, ಅಮರ್ ಜಮಾಲ್ 82 ರನ್‌ಗಳಿಸಿ ಮಿಂಚಿದರು.  

ಇನ್ನು ಪಾಕ್‌ ಅನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಆಲ್‌ ಔಟ್‌ ಮಾಡಿದ ಆಸಿಸ್‌ ಬ್ಯಾಟಿಂಗ್‌ ಇನ್ನಿಂಗ್ಸ್‌ ಆರಂಭಿಸಿತು.  ತಂಡದ ಪರ ಲಬುಶೇನ್‌  60 ರನ್ ಹಾಗೂ ಮಿಚೆಲ್‌ ಮಾರ್ಷ್‌ ಅವರ ಅರ್ಧ ಶತಕದ ಸಹಾಯದಿಂದ 299 ರನ್‌ ಗಳಿಸಿ ಆಲ್‌ ಔಟ್‌ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 14 ರನ್‌ಗಳ ಹಿನ್ನಡೆಯಾಯಿತು.

ಇದನ್ನು ಓದಿ-ಆಸ್ಟ್ರೇಲಿಯಾ ವಿರುದ್ದದ ಕೊನೆಯ ಪಂದ್ಯದಲ್ಲಾದರು ಪಾಕ್‌ಗೆ ಸಿಗುತ್ತ ಜಯ? ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್‌ ಗೆ ಮುನ್ನಡೆ

ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ ಪಾಕಿಸ್ತಾನದ ಬ್ಟಾಟ್ಸ್‌ಮನ್ಸ್‌ ಗೆ ಆಸಿಸ್‌ ಬೌಲರ್‌ಗಳು ಟಕ್ಕರ್‌ ಕೊಟ್ಟರು.   ಆಸಿಸ್‌  ವೇಗಿ ಜೋಶ್‌ ಹೆಜೆಲ್‌ವುಡ್‌ ಪ್ರಮುಖ 4 ವಿಕೆಟ್‌ಗಳನ್ನು ಪಡೆದು ಪಾಕ್‌ ತಂಡವನ್ನು ಕೇವಲ 115 ರನ್‌ಗಳಿಗೆ ಆಲ್‌ ಔಟ್‌ ಮಾಡಲಾಯಿತು. ಇನ್ನು  130 ರನ್‌ ಗಳ ಗುರಿ ಬೆನ್ನಟ್ಟಿದ ಆಸಿಸ್‌ ತಂಡವು 8 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿತು.

ತಂಡಗಳ ವಿವರ : 

ಪಾಕಿಸ್ಥಾನ ಬ್ಯಾಟಿಂಗ್‌ -  ಅಬ್ದುಲ್ಲಾ ಶಫೀಕ್ (0 & 0),  ಸೇಮ್ ಅಯೂಬ್ (0 & 33) ,  ಶಾನ್‌ ಮಸೂದ್‌(35 & 0) ,  ಬಾಬರ್‌ ಆಜಮ್‌ (26 & 23 ) ,  ಸೌದ್‌ ಶಕೀಲ್‌ (5 & 2),  ಮೊಹಮ್ಮದ್‌ ರಿಜ್ವಾನ್‌ (88 & 28),  ಆಘಾ ಸಲ್ಮಾನ್‌ (53 & 0) ,  ಸಜಿದ್‌ ಖಾನ್‌ (15 & 0),  ಅಮರ್‌ ಜಮಾಲ್‌ (82 & 18 ) ,  ಹಸನ್‌ ಅಲಿ (0 & 5) ‌,  ಮಿರ್ ಹಮ್ಝಾ (7 & 1)

ಬೌಲಿಂಗ್‌ -  ಸಜಿದ್‌ ಖಾನ್‌ (1 & 2) ,  ಮಿರ್ ಹಮ್ಝಾ (1),   ಹಸನ್‌ ಅಲಿ (0),   ಅಮರ್‌ ಜಮಾಲ್‌ (6),  ಆಘಾ ಸಲ್ಮಾನ್‌ (2) ವಿಕೆಟ್‌ಗಳು

ಆಸ್ಟ್ರೇಲಿಯಾ ಬ್ಯಾಟಿಂಗ್‌ -  ಡೇವಿಡ್‌ ವಾರ್ನರ್‌ (34 & 57),  ಉಸ್ಮನ್‌ ಖವಾಜ (47 & 0),  ಮಾರ್ನಸ್‌ ಲಬುಶೇನ್‌ (60 & 62), ಸ್ಟೀವ್‌ ಸ್ಮಿತ್‌ (38 & 4),  ಟ್ರಾವಿಸ್‌ ಹೆಡ್‌ (10),  ಮಿಚೆಲ್‌ ಮಾರ್ಷ್‌ (54),  ಅಲೆಕ್ಸ್‌ ಕ್ಯಾರಿ (38),  ಮಿಚೆಲ್‌ ಸ್ಟಾರ್ಕ್‌ (1 ),  ಪ್ಯಾಟ್‌ ಕಮಿನ್ಸ್‌ (0),  ನಥನ್‌ ಲಿಯನ್‌ (5),  ಜೋಶ್‌ ಹೆಜೆಲ್ವುಡ್‌ (0)

ಬೌಲಿಂಗ್‌ -  ಮಿಚೆಲ್‌ ಸ್ಟಾರ್ಕ್‌ (2 & 1) ,  ಜೋಶ್‌ ಹೆಜೆಲ್ವುಡ್‌ (1 & 4),  ಪ್ಯಾಟ್‌ ಕಮಿನ್ಸ್‌ (5 &, 1),  ನಥನ್‌ ಲಿಯನ್‌ (1 & 3) , ಮಿಚೆಲ್‌ ಮಾರ್ಷ್‌ (1), ಟ್ರಾವಿಸ್‌ ಹೆಡ್‌ (1)

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News