ನವದೆಹಲಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 51 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಏಕದಿನಗಳ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ವಾರ್ನರ್ 83, ಆರನ್ ಫಿಂಚ್ 60, ಸ್ಟೀವ್ ಸ್ಮಿತ್ 104, ಹಾಗೂ ಕೊನೆಯಲ್ಲಿ ಲಾಬುಸ್ಚಜ್ಞೆ ಹಾಗೂ ಮ್ಯಾಕ್ಸ್ ವೆಲ್ ಅವರು ಕ್ರಮವಾಗಿ 70 ಹಾಗೂ 63 ರನ್ ಗಳ ನೆರವಿನಿಂದಾಗಿ ಆಸ್ಟ್ರೇಲಿಯಾ ತಂಡವು 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತು.
ಧವನ್, ಹಾರ್ದಿಕ್ ಹೋರಾಟ ವ್ಯರ್ಥ, ಆಸಿಸ್ ವಿರುದ್ಧ ಭಾರತಕ್ಕೆ 66 ರನ್ ಗಳ ಸೋಲು
Warner 8⃣3⃣
Finch 6⃣0⃣
Smith 1⃣0⃣4⃣
Labuschagne 7⃣0⃣
Maxwell 6⃣3⃣*This is only the second time when the top 5 of a batting line-up have scored fifty-plus runs in ODI history 💥
Can you recall the first instance?#AUSvIND pic.twitter.com/WxINdmpVgn
— ICC (@ICC) November 29, 2020
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು 60 ರನ್ ಗಳಾಗುವಷ್ಟರಲ್ಲಿ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಭದ್ರವಾಗಿ ತಳವೂರುವಷ್ಟರಲ್ಲಿ ಶ್ರೇಯಸ್ ವಿಕೆಟ್ ಕಳೆದುಕೊಂಡರು. ಭಾರತದ ಪರವಾಗಿ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಕ್ರಮವಾಗಿ 89 ಹಾಗೂ 76 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಇವರು ಔಟಾಗುತ್ತಿದ್ದಂತೆ ಭಾರತ ತಂಡದ ಗೆಲುವಿನ ಆಸೆ ಕಮರಿತು ಎಂದು ಹೇಳಬಹುದು.
📰 Steve Smith's successive centuries send Australia to series success
💯 from Smith and 50s for Warner, Finch, Labuschagne and Maxwell power Australia to the top of the @cricketworldcup Super League table.
Read the report from another run-fest in the #AUSvIND series 👇
— ICC (@ICC) November 29, 2020
ಕೊನೆಯದಾಗಿ ರವಿಂದ್ರ ಜಡೇಜಾ ಕೇವಲ 11 ಎಸೆತಗಳಲ್ಲಿ 24 ರನ್ ಗಳಿಸಿದರೂ ಕೂಡ ಅದು ಗೆಲುವಿನ ದಡ ಸೇರಿಸಲಿಲ್ಲ.ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 338 ರನ್ ಗಳನ್ನು ಗಳಿಸಿತು,