Triple Century: ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಟ್ರಿಪಲ್ ಸೆಂಚುರಿ ಬಾರಿಸಿದ ಆಟಗಾರ ಯಾರು ಗೊತ್ತಾ?

ಇದರೊಂದಿಗೆ ಪಾಕಿಸ್ತಾನದ ಮಸೂದ್ ಜಾನ್ ಅವರ 24 ವರ್ಷಗಳ ಹಳೆಯ ದಾಖಲೆಯನ್ನೂ ಸಹ ಮುರಿದಿದ್ದಾರೆ. 1998ರಲ್ಲಿ ನಡೆದ ಮೊದಲ ಅಂಧರ ವಿಶ್ವಕಪ್‌ನಲ್ಲಿ ಮಸೂದ್ ದಕ್ಷಿಣ ಆಫ್ರಿಕಾ ವಿರುದ್ಧ 262 ರನ್ ಗಳಿಸಿದ್ದರು.

Written by - Bhavishya Shetty | Last Updated : Jun 16, 2022, 11:37 AM IST
  • ಏಕದಿನ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಆಟಗಾರ
  • ಸ್ಟೀಫನ್ ನಿರೋ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಟ್ರಿಪಲ್ ಶತಕ ಬಾರಿಸಿದ್ದಾರೆ
  • ಅಂಧರ ವಿಶ್ವಕಪ್‌ನಲ್ಲಿ 309 ರನ್ ಗಳಿಸಿದ್ದಾರೆ
Triple Century: ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಟ್ರಿಪಲ್ ಸೆಂಚುರಿ ಬಾರಿಸಿದ ಆಟಗಾರ ಯಾರು ಗೊತ್ತಾ?  title=
Steffan Nero

ಕ್ರಿಕೆಟ್‌ನಲ್ಲಿ ಅದೆಷ್ಟೋ ದಾಖಲೆಗಳು ಆಗಾಗ ಮಾಡಲ್ಪಡುತ್ತವೆ. ಇನ್ನೂ ಕೆಲವು ದಾಖಲೆಗಳನ್ನು ಕಂಡು ಜಗತ್ತೇ ಆಶ್ಚರ್ಯ ಪಡೋದುಂಟು. ಅದೇ ರೀತಿ ಇದೀಗ ಆಸ್ಟ್ರೇಲಿಯಾದ ಸ್ಟೀಫನ್ ನೀರೋ ಏಕದಿನ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಸ್ಟೀಫನ್ ನಿರೋ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಟ್ರಿಪಲ್ ಶತಕ ಗಳಿಸಿದ್ದು, ಅಜೇಯ ಎನಿಸಿಕೊಂಡಿದ್ದಾರೆ. 

ಇದನ್ನು ಓದಿ: ಹುಡುಗಿಯರು ಒಬ್ಬರೇ ಇರುವಾಗ Googleನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವ ವಿಷಯಗಳಿವು ..!

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀಫನ್ ನಿರೋ ನ್ಯೂಜಿಲೆಂಡ್ ವಿರುದ್ಧ ಅಂಧರ ಕ್ರಿಕೆಟ್‌ನಲ್ಲಿ 140 ಎಸೆತಗಳಲ್ಲಿ 49 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 309 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ಮೈದಾನದ ತುಂಬೆಲ್ಲಾ ರನ್‌ ಮಳೆ ಸುರಿಸಿದ್ದಾರೆ. ಜೊತೆಗೆ  ಸ್ಟೀಫನ್ ನೀರೋ ತಮ್ಮ ಇನ್ನಿಂಗ್ಸ್‌ನಿಂದ ಎಲ್ಲರ ಹೃದಯ ಗೆದ್ದಿದ್ದಾರೆ ಎನ್ನಬಹುದು. ಏಕದಿನ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಮಸೂದ್ ಜಾನ್ ಅವರ 24 ವರ್ಷಗಳ ಹಳೆಯ ದಾಖಲೆಯನ್ನೂ ಸಹ ಮುರಿದಿದ್ದಾರೆ. 1998ರಲ್ಲಿ ನಡೆದ ಮೊದಲ ಅಂಧರ ವಿಶ್ವಕಪ್‌ನಲ್ಲಿ ಮಸೂದ್ ದಕ್ಷಿಣ ಆಫ್ರಿಕಾ ವಿರುದ್ಧ 262 ರನ್ ಗಳಿಸಿದ್ದರು.

 

ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಸ್ಟೀಫನ್ ನೀರೋ ಸತತ ಮೂರು ಶತಕ ಬಾರಿಸಿದ್ದಾರೆ. ಮೊದಲ ಪಂದ್ಯದಲ್ಲಿ 113 ರನ್ ಮತ್ತು ಎರಡನೇ ಪಂದ್ಯದಲ್ಲಿ 101 ರನ್ ಗಳಿಸಿದ್ದರು. ಅವರ ಸರಾಸರಿ 500 ಕ್ಕಿಂತ ಹೆಚ್ಚಿದೆ. ಸ್ಟೀಫನ್ ನೀರೋ ಅವರ ಸ್ಫೋಟಕ ಬ್ಯಾಟಿಂಗ್‌ಗೆ ಎಲ್ಲರೂ ಅಭಿಮಾನಿಗಳಾಗಿದ್ದಾರೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ 8 ಪಂದ್ಯಗಳ ಸರಣಿ ನಡೆಯುತ್ತಿದ್ದು, ಇಲ್ಲಿಯವರೆಗೆ 6 ಪಂದ್ಯಗಳು ನಡೆದಿವೆ.

ಇದನ್ನು ಓದಿ: ಈ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಂಪರ್‌ ಕೊಡುಗೆ: 2 ತಿಂಗಳಲ್ಲಿ ಮನೆ ಸೇರಿಲಿದೆ ಗಿಫ್ಟ್‌

ಸ್ಟೀಫನ್ ನೀರೋ ಅವರ ಇನ್ನಿಂಗ್ಸ್‌ನಿಂದಾಗಿ ಆಸ್ಟ್ರೇಲಿಯಾ 40 ಓವರ್‌ಗಳ ಪಂದ್ಯದಲ್ಲಿ 542 ರನ್ ಗಳಿಸಿದೆ. ಇಷ್ಟು ದೊಡ್ಡ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೇವಲ 272 ರನ್ ಗಳಿಸಲಷ್ಟೇ ಶಕ್ತವಾಯಿತು. ನೀರೋ ಅಲ್ಲದೆ ಮೈಕಲ್ ಜಾನಿಸ್ ಕೂಡ 58 ರನ್ ಗಳಿಸಿದ್ದಾರೆ. ಇವರಿಬ್ಬರು ಎರಡನೇ ವಿಕೆಟ್‌ಗೆ 266 ರನ್‌ಗಳ ಜೊತೆಯಾಟವಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News