Racial attack : ಟೀಂ ಇಂಡಿಯಾ ಆಟಗಾರರ ವಿರುದ್ಧ ಜನಾಂಗೀಯ ನಿಂದನೆಗೆ ಕ್ಷಮೆಯಾಚಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ಟೀಂ ಇಂಡಿಯಾ ಆಟಗಾರರ ವಿರುದ್ದದ ಜನಾಂಗೀಯ ನಿಂದನೆ ಪ್ರಕರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆಯಾಚಿಸಿದೆ.

Written by - Zee Kannada News Desk | Last Updated : Jan 10, 2021, 03:13 PM IST
  • ಟೀಂ ಇಂಡಿಯಾ ಆಟಗಾರರ ವಿರುದ್ದ ಜನಾಂಗೀಯ ನಿಂದನೆ
  • ಘಟನೆಯ ಬಗ್ಗೆ ದೂರು ನೀಡಿದ ಟೀಂ ಇಂಡಿಯಾ
  • ಎಲ್ಲಾ ಬೆಳವಣಿಗೆಗೆ ಬಗ್ಗೆ ಕ್ಷಮೆಯಾಚಿಸಿದ ಕ್ರಿಕೆಟ್ ಆಸ್ಟ್ರೇಲಿಯಾ
Racial attack : ಟೀಂ ಇಂಡಿಯಾ ಆಟಗಾರರ ವಿರುದ್ಧ ಜನಾಂಗೀಯ ನಿಂದನೆಗೆ ಕ್ಷಮೆಯಾಚಿಸಿದ ಕ್ರಿಕೆಟ್ ಆಸ್ಟ್ರೇಲಿಯಾ title=
ಜನಾಂಗೀಯ ನಿಂದನೆ ವಿರುದ್ಧ ಟೀಂ ಇಂಡಿಯಾ ಕ್ಷಮೆಯಾಚಿಸಿದ ಕ್ರಿಕೆಟ್ ಆಸ್ಟ್ರೇಲಿಯಾ(photo PTI)

ಸಿಡ್ನಿ:  ಟೀಂ ಇಂಡಿಯಾ (Team India) ಆಟಗಾರರ ವಿರುದ್ದದ ಜನಾಂಗೀಯ ನಿಂದನೆ ಪ್ರಕರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಕ್ಷಮೆಯಾಚಿಸಿದೆ.  ಇಂಥಹ ನಡವಳಿಕೆಯನ್ನು ಖಂಡಿಸಿದ್ದು, ದುರ್ವತನೆ ತೋರಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದೆ. 

ಸಿಡ್ನಿ(Sydney) ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡದ ಆಟಗಾರರಾದ ಜಸ್ ಪ್ರೀತ್ ಬೂಮ್ರಾ (Jasprit Bumrah )ಮತ್ತು ಮಹಮ್ಮದ್ ಸಿರಾಜ್ (Mohammed Siraj)ವಿರುದ್ಧ ಜನಾಂಗೀಯ ನಿಂದನೆ ಕೇಳಿ ಬಂದಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೆಲವರು ಕುಡಿದ ಅಮಲಿನಲ್ಲಿ ಜಸ್ ಪ್ರೀತ್ ಬೂಮ್ರಾ ಮತ್ತು ಮಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು.

ಇದನ್ನೂ ಓದಿ : Australia vs India, 3rd Test : ಮಿಂಚಿದ ರವೀಂದ್ರ ಜಡೇಜಾ, ಶುಬ್ಮನ್ ಗಿಲ್

ಇದೀಗ ಎಲ್ಲಾ ಬೆಳವಣಿಗೆಗಳ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಕ್ಷಮೆಯಾಚಿಸಿದೆ. ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ತಾವು ಟೀಂಇಂಡಿಯಾದ (Team India)ಕ್ಷಮೆಯಾಚಿಸುವುದಾಗಿ ಹೇಳಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸುವುದಾಗಿ ಹೇಳಿದೆ. ಈಗಾಗಲೇ ತಪ್ಪಿತಸ್ಥರನ್ನು ಹುಡುಕುವ ಕಾರ್ಯ ನಡೆದಿದ್ದು, ತಪ್ಪಿತಸ್ಥರು ಪತ್ತೆಯಾದ ಕೂಡಲೇ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ಈಗಾಗಲೇ ಕ್ರೀಡಾಂಗಣದ ಸಿಸಿಟಿವಿ (CCTV)ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ತಪ್ಪಿತಸ್ಥರನ್ನು ಗುರುತಿಸಿದ ಕೂಡಲೇ , ತಪ್ಪಿತಸ್ಥರಿಗೆ ಎಸ್ ಸಿಜಿ (SCG) ಮತ್ತು ಎನ್ ಎಸ್ ಡಬ್ಲ್ಯು (NSW)   ಪ್ರದೇಶಗಳಿಗೆ ನಿಷೇಧ ಹೇರುವುದಾಗಿ  ಎನ್ ಎಸ್ ಡಬ್ಲ್ಯು ಮುಖ್ಯ ಅಧಿಕಾರಿ ಕೆರಿ ಮಾಥೆರ್ ಹೇಳಿದ್ದಾರೆ.

 

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೆಲವರು ಕುಡಿದ ಅಮಲಿನಲ್ಲಿ ಜಸ್ ಪ್ರೀತ್ ಬೂಮ್ರಾ ಮತ್ತು ಮಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು. ಈ ಬಗ್ಗೆ ಮೂರನೇ ದಿನದಾಟ ಮುಕ್ತಾಯದ ವೇಳೆ ತಂಡದ ನಾಯಕ ಅಜಿಂಕ್ಯಾ ರಹಾನೆ (Ajinkya Rahane) ಅಂಪಾಯರ್ ಗಳೊಂದಿಗೆ ಚರ್ಚೆ ನಡೆಸಿದ್ದರು. ಅಲ್ಲದೆ ಈ ಬಗ್ಗೆ ಪಂದ್ಯದ ಅಧಿಕಾರಿಗಳ ಎದುರು ಟಿಂ ಇಂಡಿಯಾ ಅಧಿಕೃತ ದೂರು ನೀಡಿತ್ತು.  

ಇದನ್ನೂ ಓದಿ : "ಅವನು ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಅತಿ ಹೆಚ್ಚು ಕ್ಯಾಚ್ ಡ್ರಾಪ್ ಮಾಡಿದ್ದಾನೆ"

ಮತ್ತೊಂದೆಡೆ ಘಟನೆಯನ್ನು ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ (Veerendra Sehwag) ಖಂಡಿಸಿದ್ದಾರೆ. ನೀವು ಮಾಡಿದರೆ ಹಾಸ್ಯ. ಬೇರೆಯವರು ಮಾಡಿದರೆ ಜನಾಂಗೀಯ ನಿಂದನೆ. ಸಿಡ್ನಿಯಲ್ಲಿ ಭಾರತೀಯ ಆಟಗಾರರೊಂದಿಗೆ  ನಡೆದುಕೊಂಡಿರುವ ರೀತಿ ದೌರ್ಭಾಗ್ಯವೇ ಸರಿ ಎಂದು ಹೇಳಿದ್ದಾರೆ. 

 

ಆಟಗಾರರ ವಿರುದ್ಧ ಈ ರೀತಿಯ ವರ್ತನೆ ಸಹಿಸಲು ಸಾಧ್ಯವಿಲ್ಲ, ಎಂದು  ಹೇಳಿದ್ದಾರೆ.  ಶೇನ್‌ ವಾರ್ನ್‌ ಕೂಡ ಘಟನೆಯನ್ನುಖಂಡಿಸಿದ್ದು, ಈ ರೀತಿ ನಡೆದುಕೊಂಡಿರುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News