ನವದೆಹಲಿ:ಭಾರತದ ಖ್ಯಾತ ಬ್ಯಾಡಿಂಟನ್ ಆಟಗಾರ್ತಿ ಪಿ ವಿ ಸಿಂಧು ಅವರು ಜಪಾನಿನ ಅಕಾನೆ ಯಮಾಗುಚಿ ಅವರನ್ನು 21-17, 15-21, 21-10 ಅಂತರದಲ್ಲಿ ಸೋಲಿಸುವ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಸಿಂಗಲ್ ಅಥವಾ ಡಬಲ್ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯಳು ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ.
ಇತ್ತಿಚೆಗೆ ಸಿಂಧು ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಯಮಾಗುಚಿ ಅವರನ್ನು ಸೋಲಿಸಿದ್ದರು. ಪ್ರಾರಂಭದಲ್ಲಿ ಹಲವು ತಪ್ಪು ಮಾಡಿದರು ಸಹಿತ ನಂತರ ಸರಿಪಡಿಸಿಕೊಂಡ ಅವರು ಯಮಾಗುಚಿ ಅವರ ಪ್ರತಿರೋಧವನ್ನು ತಡೆಯುವಲ್ಲಿ ಯಶಸ್ವಿಯಾದರು.
ಇನ್ನೊಂದೆಡೆಗೆ ಸೈನಾ ನೆಹ್ವಾಲ್ ಅವರು ಚೈನೀಸ್ ತೈಪೆಯ ತೈ ಜು ಯಿಂಗ್ ಎದುರು 17-21, 14-21 ಅಂತರದಲ್ಲಿ ಸೆಮಿಫೈನಲ್ ನಲ್ಲಿ ಸೋತರು.ಆ ಮೂಲಕ 36 ವರ್ಷಗಳ ಪದಕದ ಬರವನ್ನು ನೀಗಿಸಿದರು. ಕೊನೆಯ ಬಾರಿ 1982 ರಲ್ಲಿ ಪುರುಷರ ವಿಭಾಗದಲ್ಲಿ ಸೈಯದ್ ಮೋದಿ ಪದಕವನ್ನು ಗೆದ್ದಿದ್ದರು.