ICC : ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಭಾರಿ ದಂಡ ವಿಧಿಸಿದ ಐಸಿಸಿ!

ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳಿಗೆ ಭಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ದಂಡ ವಿಧಿಸಿದೆ. ಹೌದು, ಈ ಎರಡು ತಂಡಗಳ ಮೇಲೆ ಸ್ಲೋ-ಓವರ್‌ರೇಟ್‌ ಆಪಾದನೆ ಪ್ರಕಾರ ದಂಡವಿಧಿಸಿದೆ.

Written by - Channabasava A Kashinakunti | Last Updated : Aug 31, 2022, 05:54 PM IST
  • ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)
  • ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳಿಗೆ ಭಾರಿ ದಂಡ
  • ಆಟಗಾರರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ

Trending Photos

ICC : ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಭಾರಿ ದಂಡ ವಿಧಿಸಿದ ಐಸಿಸಿ! title=

ದುಬೈ : ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳಿಗೆ ಭಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ದಂಡ ವಿಧಿಸಿದೆ. ಹೌದು, ಈ ಎರಡು ತಂಡಗಳ ಮೇಲೆ ಸ್ಲೋ-ಓವರ್‌ರೇಟ್‌ ಆಪಾದನೆ ಪ್ರಕಾರ ದಂಡವಿಧಿಸಿದೆ.

ಆಗಸ್ಟ್ 28 ರಂದು ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆದರೆ, ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಸ್ಲೋ-ಓವರ್‌ರೇಟ್‌ ಪೂರೈಸಿದ ಆಪಾದನೆ ಕೇಳಿ ಬಂದಿದೆ. 

ಇದನ್ನೂ ಓದಿ : India vs Hong Kong : ಹಾಂಕಾಂಗ್ ವಿರುದ್ಧ ರಾಹುಲ್ ಬದಲಿಗೆ ಈ ಆಟಗಾರ : ರೋಹಿತ್ ಜೊತೆ ಹೊಸ ಓಪನರ್!

ಐಸಿಸಿ ನೀಡಿದ ದಂಡ ಏನು?

ಐಸಿಸಿ ನೀತಿ ಸಂಹಿತೆಯ ಕಲಂ 2.22ರ ಪ್ರಕಾರ ಆಟಗಾರರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ. ವಾಸ್ತವವಾಗಿ, ಜನವರಿ 1, 2022 ರಿಂದ, ಐಸಿಸಿ ಸ್ಲೋ-ಓವರ್‌ರೇಟ್‌ ನಿಯಮಕ್ಕೆ ತಿದ್ದುಪಡಿಯನ್ನು ಜಾರಿಗೆ ತಂದಿತು, ಇದರಲ್ಲಿ ಪ್ರತಿ ತಂಡವು 85 ನಿಮಿಷಗಳಲ್ಲಿ ತಮ್ಮ 20 ಓವರ್‌ಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿತ್ತು, ಹೀಗಾಗಿ, ಒಂದು ತಂಡವು ಕೇವಲ 17 ಆಗಿದ್ದರೆ 85 ನಿಮಿಷಗಳಲ್ಲಿ, ಕೇವಲ ಓವರ್ ಬೌಲ್ ಆಗಿದ್ದರೆ, ಉಳಿದ ಮೂರು ಓವರ್‌ಗಳಲ್ಲಿ, ಐವರ ಬದಲಿಗೆ, ನಾಲ್ಕು ಆಟಗಾರರಿಗೆ ಮಾತ್ರ ಪೆನಾಲ್ಟಿಯಾಗಿ 30 ಗಜಗಳ ವೃತ್ತದ ಹೊರಗೆ ನಿಲ್ಲಲು ಅವಕಾಶವಿರುತ್ತದೆ.

ಐಸಿಸಿ ಎಲೈಟ್‌ ಪ್ಯಾನೆಲ್‌ ಮ್ಯಾಚ್‌ ರೆಫ್ರಿ ಆಗಿರುವ ಜೆಫ್‌ ಕ್ರೋವ್‌, ಭಾರತ ಮತ್ತು ಪಾಕಿಸ್ತಾನ ತಂಡಕ್ಕೆ ಈ ಪಂದ್ಯದ ಸಂಭಾವನೆಯಲ್ಲಿನ ಶೇ. 40ರಷ್ಟನ್ನು ದಂಡವಾಗಿ ವಿಧಿಸಿದೆ. ಎರಡೂ ತಂಡಗಳು ನಿಗದಿತ ಸಮಯದ ಅಂತ್ಯಕ್ಕೆ 2 ಓವರ್‌ಗಳನ್ನು ಹಾಕುವುದು ಬಾಕಿಯಿತ್ತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡುತ್ತಿದ್ದ ಪಾಕಿಸ್ತಾನ ತಂಡ ಇದೇ ಸ್ಲೋ-ಓವರ್‌ರೇಟ್‌ ಕಾರಣಕ್ಕೆ ಕೊನೇ ಓವರ್‌ಗಳಲ್ಲಿ ಬೌಂಡರಿ ಗೆರೆ ಬಳಿ 5 ಫೀಲ್ಡರ್‌ಗಳ ಬದಲು ಕೇವಲ 4 ಫೀಲ್ಡರ್‌ಗಳನ್ನು ನಿಲ್ಲಿಸಿತ್ತು.

ಇದನ್ನೂ ಓದಿ : Ind vs HK : ಹಾಂಕಾಂಗ್ ಟೀಂಗೆ ಶತ್ರುವಾಗಿ ಕಾಡಲಿದ್ದಾರೆ ಭಾರತದ ಈ 3 ಆಟಗಾರರು! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News