ಐಸಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನವಾದ ಈ ಸ್ಟಾರ್ ಆಟಗಾರ..!

ಮಾರ್ಕೊ ಜಾನ್ಸೆನ್, ಫಿನ್ ಅಲೆನ್ ಮತ್ತು ಇಬ್ರಾಹಿಂ ಜದ್ರಾನ್ ಅವರೊಂದಿಗೆ ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಗೌರವಕ್ಕೆ ಭಾರತದ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ನಾಮನಿರ್ದೇಶನಗೊಂಡಿದ್ದಾರೆ. ಈ ಪ್ರಶಸ್ತಿಗಾಗಿ ಮತದಾನ ಜನವರಿಯಲ್ಲಿ ಆರಂಭವಾಗಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Written by - Zee Kannada News Desk | Last Updated : Dec 28, 2022, 05:00 PM IST
  • ಅರ್ಶ್‌ದೀಪ್ ಅವರು ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ ಆರು ತಿಂಗಳ ನಂತರ ಶಾರ್ಟ್‌ಲಿಸ್ಟ್ ಮಾಡಿದ್ದಾರೆ.
  • 33 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೀಮ್ ಇಂಡಿಯಾದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ್ದಾರೆ
  • ನ್ಯೂಜಿಲೆಂಡ್ ಪ್ರವಾಸದಲ್ಲಿ ಅರ್ಶ್‌ದೀಪ್‌ಗೆ ಅವರಿಗೆ ಏಕದಿನ ಪಂದ್ಯದಲ್ಲಿಯೂ ಅವಕಾಶ ನೀಡಲಾಯಿತು
ಐಸಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನವಾದ ಈ ಸ್ಟಾರ್ ಆಟಗಾರ..! title=

ಲಂಡನ್: ಮಾರ್ಕೊ ಜಾನ್ಸೆನ್, ಫಿನ್ ಅಲೆನ್ ಮತ್ತು ಇಬ್ರಾಹಿಂ ಜದ್ರಾನ್ ಅವರೊಂದಿಗೆ ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಗೌರವಕ್ಕೆ ಭಾರತದ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ನಾಮನಿರ್ದೇಶನಗೊಂಡಿದ್ದಾರೆ. ಈ ಪ್ರಶಸ್ತಿಗಾಗಿ ಮತದಾನ ಜನವರಿಯಲ್ಲಿ ಆರಂಭವಾಗಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕಾರು ಅಪಘಾತ: ಮೋದಿ ಸಹೋದರನ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು

ಅರ್ಶ್‌ದೀಪ್ ಅವರು ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ ಆರು ತಿಂಗಳ ನಂತರ ಶಾರ್ಟ್‌ಲಿಸ್ಟ್ ಮಾಡಿದ್ದಾರೆ. 21 ಟಿ20 ಪಂದ್ಯಗಳಲ್ಲಿ ಅವರು 18.12 ರ ಸರಾಸರಿಯಲ್ಲಿ 33 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೀಮ್ ಇಂಡಿಯಾದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ್ದಾರೆ.

ಇದನ್ನೂ ಓದಿ: WATCH : ಹೆತ್ತವ್ವನ ಕೊನೆಯಾಸೆ ಈಡೇರಿಸಲು ICUನಲ್ಲಿ ಮದುವೆಯಾದ ಮಗಳು, ಕಣ್ಣೀರು ತರಿಸುತ್ತೆ ವಿಡಿಯೋ

ಭಾರತದ ಇತ್ತೀಚಿನ ನ್ಯೂಜಿಲೆಂಡ್ ಪ್ರವಾಸದಲ್ಲಿ ಅರ್ಶ್‌ದೀಪ್‌ಗೆ ಅವರಿಗೆ ಏಕದಿನ ಪಂದ್ಯದಲ್ಲಿಯೂ ಅವಕಾಶ ನೀಡಲಾಯಿತು.ಅಲ್ಪಾವಧಿಯಲ್ಲಿಯೇ ಮೆಲ್ಬೋರ್ನ್ ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನದ ಮೂಲಕ ಆರ್ಸ್ದೀಪ್ ಗಮನ ಸೆಳೆದರು.

ತಮ್ಮ ಸ್ವಿಂಗ್ ಹಾಗೂ ಲಯದ ಬೌಲಿಂಗ್ ಗೆ ಹೆಸರಾಗಿರುವ ಆರ್ಶ್ದೀಪ್ ಪಾಕ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಜೋಡಿಯನ್ನು ಔಟ್ ಮಾಡುವ ಮೂಲಕ ಗಮನ ಸೆಳೆದರು.ಈಗ ಅವರು ಐಸಿಸಿ ಉದಯೋನ್ಮುಖ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾದ ಜಾನ್ಸೆನ್, ನ್ಯೂಜಿಲೆಂಡ್ ಆರಂಭಿಕ ಆಟಗಾರ ಅಲೆನ್ ಮತ್ತು ಅಫ್ಘಾನಿಸ್ತಾನ ಬ್ಯಾಟರ್ ಝದ್ರಾನ್ ಅವರೊಂದಿಗೆ ಅರ್ಶ್ದೀಪ್ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News