Team India: ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟೀಂ ಇಂಡಿಯಾದ ನಾಯಕನಾಗೋದು ಈ ಸ್ಟಾರ್ ಬ್ಯಾಟ್ಸ್’ಮನ್!

Team India New Captain: ರೋಹಿತ್ ಶರ್ಮಾ ಅವರಿಗೆ ಭಾರತ ತಂಡದ ನಾಯಕನ ಜವಾಬ್ದಾರಿಯನ್ನು ಹೊರುವ ಶಕ್ತಿ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಶೀಘ್ರದಲ್ಲೇ ಭಾರತಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬಹುದು.

Written by - Bhavishya Shetty | Last Updated : May 16, 2023, 09:34 AM IST
    • ಟೀಂ ಇಂಡಿಯಾದ ಹೊಸ ನಾಯಕನಾಗಿ ಈ ಅಪಾಯಕಾರಿ ಆಟಗಾರ ಬರಬಹುದು
    • ರೋಹಿತ್ ಶರ್ಮಾ ಅವರಿಗೆ ಭಾರತ ತಂಡದ ನಾಯಕನ ಜವಾಬ್ದಾರಿಯನ್ನು ಹೊರುವ ಶಕ್ತಿ ಇಲ್ಲದಂತಾಗಿದೆ
    • 23ರ ಹರೆಯದ ಶುಭ್ಮನ್ ಗಿಲ್ ಅವರು ನಿರ್ಭೀತ ಬ್ಯಾಟಿಂಗ್‌’ಗೆ ಹೆಸರುವಾಸಿಯಾಗಿದ್ದಾರೆ
Team India: ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟೀಂ ಇಂಡಿಯಾದ ನಾಯಕನಾಗೋದು ಈ ಸ್ಟಾರ್ ಬ್ಯಾಟ್ಸ್’ಮನ್!  title=
Team India Captain

Team India New Captain: ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟೀಂ ಇಂಡಿಯಾದ ಮುಂದಿನ ನಾಯಕನಾಗಿ ಯಾರನ್ನ ಮಾಡಬೇಕು ಎಂದು ಬಿಸಿಸಿಐ ಈಗಾಗಲೇ ಯೋಚನೆ ಮಾಡುತ್ತಿದೆ. ಮಂಡಳಿ ಮುಂದೆ ಸಾಕಷ್ಟು ಆಯ್ಕೆಗಳಿದ್ದರೂ ಸಹ ಈ ಆರಂಭಿಕ ಆಟಗಾರನ ಮೇಲೆ ಒಲವು ಕೊಂಚ ಹೆಚ್ಚಿದೆ.

36ರ ಹರೆಯದ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವವನ್ನು ಹೆಚ್ಚು ಕಾಲ ನಿರ್ವಹಿಸುವುದು ಸಾಧ್ಯವಿಲ್ಲ. ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಹೊಸ ನಾಯಕನಾಗಿ ಈ ಅಪಾಯಕಾರಿ ಆಟಗಾರ ಬರಬಹುದು. ಭಾರತ ತಂಡದ ಈ ಆಟಗಾರ ಎಷ್ಟು ಅಪಾಯಕಾರಿ ಎಂದರೆ ಎದುರಾಳಿಗಳು ಸಹ ಈತನಿಗೆ ಭಯಪಡುತ್ತಾರೆ.

ಇದನ್ನೂ ಓದಿ: Cricket: ಕ್ರಿಕೆಟ್ ಫ್ಯಾನ್ಸ್’ಗೆ ಆಘಾತಕಾರಿ ಸುದ್ದಿ! ಗಾಯದ ಕಾರಣ ಈ ಆಟಗಾರ ತಂಡದಿಂದ ಔಟ್

ರೋಹಿತ್ ಶರ್ಮಾ ಅವರಿಗೆ ಭಾರತ ತಂಡದ ನಾಯಕನ ಜವಾಬ್ದಾರಿಯನ್ನು ಹೊರುವ ಶಕ್ತಿ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಶೀಘ್ರದಲ್ಲೇ ಭಾರತಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬಹುದು.

ಟೆಸ್ಟ್, ಏಕದಿನ ಮತ್ತು T20 ಎಲ್ಲಾ ಮೂರು ಫಾರ್ಮ್ಯಾಟ್‌ ಗಳಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್, ಭಾರತೀಯ ಕ್ರಿಕೆಟ್ ತಂಡದ ಹೊಸ ನಾಯಕನಾಗಲು ಅತಿದೊಡ್ಡ ಸ್ಪರ್ಧಿಯಾಗಿದ್ದಾರೆ. ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರನ್ನು ಭಾರತದ ಮುಂದಿನ ನಾಯಕರನ್ನಾಗಿ ಮಾಡಬಹುದು.

23ರ ಹರೆಯದ ಶುಭ್ಮನ್ ಗಿಲ್ ಅವರು ನಿರ್ಭೀತ ಬ್ಯಾಟಿಂಗ್‌’ಗೆ ಹೆಸರುವಾಸಿಯಾಗಿದ್ದಾರೆ. ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನ ಹೆಚ್ಚು ಕಾಲ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ 23 ವರ್ಷದ ಶುಭ್ಮನ್ ಗಿಲ್‌ ಗೆ ಓಪನಿಂಗ್ ಜೊತೆಗೆ ಭಾರತದ ನಾಯಕನ ಜವಾಬ್ದಾರಿಯನ್ನು ನೀಡಬಹುದು.

ಕೇವಲ 23 ನೇ ವಯಸ್ಸಿನಲ್ಲಿ, ಶುಭ್ಮನ್ ಗಿಲ್ ಟೆಸ್ಟ್, ಏಕದಿನ ಮತ್ತು T20 ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಭ್ಮನ್ ಗಿಲ್ ಇದುವರೆಗೆ ಭಾರತದ ಪರ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 40.4 ಸರಾಸರಿಯಲ್ಲಿ ಶತಕ ಸೇರಿದಂತೆ 202 ರನ್ ಗಳಿಸಿದ್ದಾರೆ. ಇನ್ನು ದೀರ್ಘಕಾಲದವರೆಗೆ ಟೀಮ್ ಇಂಡಿಯಾದ ಪರ ಓಪನರ್ ಆಗಿ ಕಣಕ್ಕಿಳಿಯಬಹುದು.  

ಇದನ್ನೂ ಓದಿ: ಜಡೇಜಾ ರೀತಿಯೇ Team Indiaದ ಸರ್ವಶ್ರೇಷ್ಠ ಆಟಗಾರನೀತ! ಆದ್ರೆ ವೃತ್ತಿಜೀವನ ಅಂತ್ಯಗೊಳಿಸಿದ್ದು ಅಕ್ಷರ್ ಪಟೇಲ್!

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿಂಗ್‌ ನ ಒಂದು ನೋಟವನ್ನು ಶುಭ್ಮನ್ ಗಿಲ್ ಅವರ ಬ್ಯಾಟಿಂಗ್‌ ನಲ್ಲಿ ಕಾಣಬಹುದು. ಶುಭ್ಮನ್ ಗಿಲ್ ಮುಂದಿನ 10 ರಿಂದ 15 ವರ್ಷಗಳ ಕಾಲ ಭಾರತ ಪರ ಕ್ರಿಕೆಟ್ ಆಡಬಹುದು ಎಂದು ಹೇಳಲಾಗುತ್ತಿದೆ. ಇದುವರೆಗೆ 24 ಏಕದಿನ ಪಂದ್ಯಗಳಲ್ಲಿ 1 ದ್ವಿಶತಕ, 4 ಶತಕ ಮತ್ತು 5 ಅರ್ಧ ಶತಕ ಸೇರಿದಂತೆ 65.55 ಸರಾಸರಿಯಲ್ಲಿ 1311 ರನ್ ಗಳಿಸಿದ್ದಾರೆ. 15 ಟೆಸ್ಟ್ ಪಂದ್ಯಗಳಲ್ಲಿ 2 ಶತಕ ಮತ್ತು 4 ಅರ್ಧ ಶತಕ ಸೇರಿದಂತೆ 890 ರನ್ ಗಳಿಸಿದ್ದಾರೆ. ಇನ್ನು 87 ಐಪಿಎಲ್ ಪಂದ್ಯಗಳಲ್ಲಿ 1 ಶತಕ ಮತ್ತು 18 ಅರ್ಧ ಶತಕ ಸೇರಿದಂತೆ 2476 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News