ನವದೆಹಲಿ: ಅಫ್ಘಾನಿಸ್ತಾನ ತಂಡವು ಸೋಮವಾರದಂದು ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಗೆದ್ದಿದೆ.ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಗೆಲುವು ಸಾಧಿಸುವ ಮೂಲಕ ಟೆಸ್ಟ್ ಗೆದ್ದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಡೆಹ್ರಾಡೂನ್ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗಳಿಸಿತು.ವಿಶೇಷವಾಗಿ ಟೀಮ್ ಮುರ್ತಾಗ್ ಅವರು 11ನೇ ಆಟಗಾರನಾಗಿ ಬಂದು ಅಜೇಯ 54 ರನ್ ಗಳನ್ನು ಗಳಿಸಿದರು. ಇದಕ್ಕೂ ಮೊದಲು ಜಾರ್ಜ್ ದಾಕ್ರೆಲ್ 39 ರನ್ ಗಳಿಸುವ ಐರ್ಲೆಂಡ್ ತಂಡಕ್ಕೆ ಆಸರೆಯಾದರು.
ಇದಾದ ನಂತರ ಅಫ್ಘಾನಿಸ್ತಾನ ತಂಡವು ತನ್ನ ಮೊದಲ ಇನ್ನಿಂಗ್ಸ್ ನಲಿ ರಹಮತ್ ಷಾ (98) ಹಸ್ಹಮತುಲ್ಲಾ ಶಾಹಿದಿ (61) ಅಸಗರ್ ಆಫ್ಘಾನ್ (67) ರವರ ಬ್ಯಾಟಿಂಗ್ ನೆರವಿನಿಂದ 314 ರನ್ ಗಳಿಸುವ ಮೂಲಕ ಮುನ್ನಡೆ ಸಾಧಿಸಿತು.
Afghanistan make history! 👏👏
They get their first Test win in only their second ever Test, beating Ireland by seven wickets in Dehradun! #AFGvIRE SCORECARD ➡️ https://t.co/mV1o12EBt1 pic.twitter.com/TcFgOTE3pB
— ICC (@ICC) March 18, 2019
ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್ ತಂಡವು 288 ರನ್ ಗಳನ್ನು ಗಳಿಸಿತು.147 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು ಇಸಾನುಲ್ಲಾ ಜನತ್ ಹಾಗೂ ರಹಮತ್ ಷಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 149 ರನ್ ಗಳನ್ನು ಗಳಿಸಿ ಗೆಲುವಿನ ಗಡಿ ತಲುಪಿತು. ಆ ಮೂಲಕ ನೂತನವಾಗಿ ಟೆಸ್ಟ್ ಪಂದ್ಯವನ್ನು ಗೆದ್ದ ತಂಡ ಎನ್ನುವ ಶ್ರೆಯವನ್ನು ಅಫ್ಘಾನಿಸ್ತಾನ್ ತನ್ನದಾಗಿಸಿಕೊಂಡಿತು.