5 ವರ್ಷ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡಿದ್ದೆ, ಆದ್ರೆ ಗಂಭೀರ್ ಯಾವಾಗಲೂ ನನಗೆ ಮಿಸ್ಡ್ ಕಾಲ್ ನೀಡುತ್ತಿದ್ದರು: ಖ್ಯಾತ ನಟಿಯ ಹೇಳಿಕೆ

Payal Ghosh statement about Gautam Gambhir and Irfan Pathan: ಐದು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಆಗ ಗಂಭೀರ್ ಯಾವಾಗಲೂ ನನಗೆ ಮಿಸ್ ಕಾಲ್ ನೀಡುತ್ತಿದ್ದರು ಎಂದು ನಟಿ ಪಾಯಲ್ ಘೋಷ್ ಹೇಳಿಕೆ ನೀಡಿದ್ದಾರೆ

Written by - Bhavishya Shetty | Last Updated : Dec 2, 2023, 09:03 PM IST
    • ಗೌತಮ್ ಗಂಭೀರ್ ಮತ್ತು ಇರ್ಫಾನ್ ಪಠಾಣ್ ಬಗ್ಗೆ ನಟಿ ಪಾಯಲ್ ಘೋಷ್ ಹೇಳಿಕೆ
    • ಐದು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದೆ ಎಂದ ನಟಿ
    • ಹಲವಾರು ಟ್ವೀಟ್‌’ಗಳ ಮೂಲಕ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ
5 ವರ್ಷ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡಿದ್ದೆ, ಆದ್ರೆ ಗಂಭೀರ್ ಯಾವಾಗಲೂ ನನಗೆ ಮಿಸ್ಡ್ ಕಾಲ್ ನೀಡುತ್ತಿದ್ದರು: ಖ್ಯಾತ ನಟಿಯ ಹೇಳಿಕೆ title=
Gautam Gambhir-Irfan Pathan

Payal Ghosh statement about Gautam Gambhir and Irfan Pathan: ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಇರ್ಫಾನ್ ಪಠಾಣ್ ಬಗ್ಗೆ ನಟಿ ಪಾಯಲ್ ಘೋಷ್ ಹೇಳಿಕೆ ನೀಡಿದ್ದಾರೆ. ಐದು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಆಗ ಗಂಭೀರ್ ಯಾವಾಗಲೂ ನನಗೆ ಮಿಸ್ ಕಾಲ್ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಿಂಗ್ ಕೋಬ್ರಾ ಹೆಡೆಯನ್ನು ನೆಕ್ಕುತ್ತಾ ಮುದ್ದಾಡಿದ ಗೋಮಾತೆ… ಅಸಾಮಾನ್ಯದ ಸ್ನೇಹದ ವಿಡಿಯೋ ವೈರಲ್

ಪಾಯಲ್ ಘೋಷ್ ಒಂದರ ನಂತರ ಒಂದರಂತೆ ಹಲವಾರು ಟ್ವೀಟ್‌’ಗಳ ಮೂಲಕ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. “ಗೌತಮ್ ಗಂಭೀರ್ ಯಾವಾಗಲೂ ನನಗೆ ಮಿಸ್ ಕಾಲ್ ನೀಡುತ್ತಿದ್ದರು. ಇರ್ಫಾನ್ ಅವರಿಗೆ ಇದು ಚೆನ್ನಾಗಿ ತಿಳಿದಿತ್ತು, ಅವರು ನನ್ನ ಎಲ್ಲಾ ಕರೆಗಳನ್ನು ನೋಡುತ್ತಿದ್ದರು. ಬರೋಡಾದ ತವರು ಪಂದ್ಯದ ವೇಳೆ ಪುಣೆಯಲ್ಲಿ ಇರ್ಫಾನ್ ಅವರನ್ನು ಭೇಟಿಯಾಗಲು ಹೋದಾಗ ಅವರು ನನ್ನ ಮುಂದೆ ಯೂಸುಫ್ ಭಾಯ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರಿಗೂ ಈ ವಿಷಯವನ್ನು ಹೇಳಿದ್ದರು” ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, “ಗೌತಮ್ ಗಂಭೀರ್, ಅಕ್ಷಯ್ ಕುಮಾರ್ ಎಲ್ಲರೂ ನನ್ನ ಹಿಂದೆ ಬಿದ್ದಿದ್ದರು. ಆದರೆ ನಾನು ಇರ್ಫಾನ್ ಪಠಾಣ್ ಅವರನ್ನು ಪ್ರೀತಿಸುತ್ತಿದ್ದೆ. ನಾನು ಅವನನ್ನು ಬಿಟ್ಟು ಬೇರೆ ಯಾರನ್ನೂ ನೋಡಿಲ್ಲ. ಇರ್ಫಾನ್‌’ಗೆ ಎಲ್ಲರ ಬಗ್ಗೆ ಹೇಳುತ್ತಿದ್ದೆ, ಎಲ್ಲರ ಮಿಸ್ಡ್ ಕಾಲ್‌’ಗಳನ್ನು ಸಹ ತೋರಿಸಿದ್ದೆ. ನಾನು ಇರ್ಫಾನ್ ಪಠಾಣ್ ಅನ್ನು ಮಾತ್ರ ಪ್ರೀತಿಸುತ್ತಿದ್ದೆ ಮತ್ತು ಬೇರೆ ಯಾರನ್ನೂ ಪ್ರೀತಿಸಲಿಲ್ಲ” ಎಂದಿದ್ದಾರೆ. ಅಂದಹಾಗೆ ಈ ಟ್ವೀಟ್’ನಲ್ಲಿ ನಾವಿಬ್ಬರು 2011 ರಲ್ಲಿ ಡೇಟಿಂಗ್ ಮಾಡುತ್ತಿದ್ದೆವು ಎಂದು ಬರೆದಿದ್ದಾರೆ.

ಮತ್ತೊಂದು ಟ್ವೀಟ್‌’ನಲ್ಲಿ, “ಇರ್ಫಾನ್ ಜೊತೆ ಬ್ರೇಕಪ್ ಮಾಡಿಕೊಂಡ ಬಳಿಕ ನಾನು ಅನಾರೋಗ್ಯಕ್ಕೆ ಒಳಗಾಗಿದ್ದೆ. ತುಂಬಾ ವರ್ಷಗಳ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಾನು ಪ್ರೀತಿಸಿದ ಏಕೈಕ ವ್ಯಕ್ತಿ ಅವನು, ನಂತರ ನಾನು ಯಾರನ್ನೂ ಪ್ರೀತಿಸಲಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಕೇವಲ 20 ರನ್ ಗಳಿಸಿದ್ರೆ ವಿರಾಟ್-ರೋಹಿತ್’ರ ಈ 3 ವಿಶ್ವದಾಖಲೆಗಳನ್ನೇ ಬ್ರೇಕ್ ಮಾಡಲಿದ್ದಾರೆ ಸೂರ್ಯ

ಈ ಪೋಸ್ಟ್’ನಿಂದಾಗಿ ಪಾಯಲ್ ಘೋಷ್ ಸಾಕಷ್ಟು ಟ್ರೋಲ್’ಗೆ ಒಳಗಾಗುತ್ತಿದ್ದರೂ ಟ್ರೋಲ್’ಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರವನ್ನೂ ಸಹ ನೀಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News