IND vs SA: ಟೀಂ ಇಂಡಿಯಾದಲ್ಲಿ ಆಗುತ್ತಾ ಬದಲಾವಣೆ? ಅಥವಾ ದೆಹಲಿಯ ಈ ಆಟಗಾರನಿಗೆ ಸಿಗುತ್ತಾ ಅವಕಾಶ!

ಪ್ರಸಕ್ತ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಎರಡೂ ಪಂದ್ಯಗಳನ್ನು ಗೆದ್ದಿದೆ. ಅವರು ಸೂಪರ್-12 ಸುತ್ತಿನ ತಮ್ಮ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದರು. ನಂತರ ಸಿಡ್ನಿಯಲ್ಲಿ ನೆದರ್ಲೆಂಡ್ಸ್ ಅನ್ನು 56 ರನ್ಗಳಿಂದ ಸೋಲಿಸಿತು.

Written by - Bhavishya Shetty | Last Updated : Oct 30, 2022, 10:12 AM IST
    • ಟಿ20 ವಿಶ್ಚಕಪ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಲಿದೆ
    • ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ
    • ಪ್ಲೇಯಿಂಗ್ XI ಅನ್ನು ಬದಲಾಯಿಸುತ್ತಾರೋ ಎಂಬುದು ಕುತೂಹಲಕಾರಿಯಾಗಿದೆ
IND vs SA: ಟೀಂ ಇಂಡಿಯಾದಲ್ಲಿ ಆಗುತ್ತಾ ಬದಲಾವಣೆ? ಅಥವಾ ದೆಹಲಿಯ ಈ ಆಟಗಾರನಿಗೆ ಸಿಗುತ್ತಾ ಅವಕಾಶ! title=
Cricket

ಇಂದು ನಡೆಯಲಿರುವ ಟಿ20 ವಿಶ್ಚಕಪ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಲಿದೆ. ಅಕ್ಟೋಬರ್ 30 ರ ಸಂಜೆ 4.30ಕ್ಕೆ ಪರ್ತ್‌ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ತಂತ್ರವನ್ನು ಸಿದ್ಧಪಡಿಸಬೇಕು. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಹೀಗಿರುವಾಗ ಅವರ ಕಣ್ಣು ಹ್ಯಾಟ್ರಿಕ್ ಗೆಲುವಿನತ್ತ ನೆಟ್ಟಿದೆ. ರೋಹಿತ್ ಈ ಪಂದ್ಯಕ್ಕಾಗಿ ಪ್ಲೇಯಿಂಗ್ XI ಅನ್ನು ಬದಲಾಯಿಸುತ್ತಾರೋ ಅಥವಾ ಟಾಸ್ ನಂತರ ಯಾವುದೇ ಬದಲಾವಣೆ ಇಲ್ಲಾ ಎಂದು ಮಾತನಾಡುತ್ತಾರೋ ಎಂಬುದು ಕುತೂಹಲಕಾರಿಯಾಗಿದೆ

ಇದನ್ನೂ ಓದಿ: KL Rahul ಕಳಪೆ ಫಾರ್ಮ್‌ನಿಂದ ಕೊಹ್ಲಿ ಹಾದಿಯಲ್ಲಿ ನಡೆಯುತ್ತಿರುವ ಕೆ.ಎಲ್.ರಾಹುಲ್!

ಸೆಮಿಫೈನಲ್ ಹಾದಿ ಸುಲಭವಾಗಲಿದೆ:

ಪ್ರಸಕ್ತ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಎರಡೂ ಪಂದ್ಯಗಳನ್ನು ಗೆದ್ದಿದೆ. ಅವರು ಸೂಪರ್-12 ಸುತ್ತಿನ ತಮ್ಮ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದರು. ನಂತರ ಸಿಡ್ನಿಯಲ್ಲಿ ನೆದರ್ಲೆಂಡ್ಸ್ ಅನ್ನು 56 ರನ್ಗಳಿಂದ ಸೋಲಿಸಿತು. ರೋಹಿತ್ ಶರ್ಮಾ ನೇತೃತ್ವದ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆದ್ದರೆ, ಗ್ರೂಪ್ ಟಾಪರ್ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಇದರೊಂದಿಗೆ ಅವರ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಲಿದೆ.

ರೋಹಿತ್ ಪ್ಲೇಯಿಂಗ್ XI ಬದಲಾಯಿಸುತ್ತಾರಾ?

ಭಾರತದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಪ್ಲೇಯಿಂಗ್ XI ಅನ್ನು ಬದಲಾಯಿಸಬಹುದು. ರೋಹಿತ್ ಅವರ ಆರಂಭಿಕ ಜೊತೆಗಾರ ಕೆಎಲ್ ರಾಹುಲ್ ಅವರ ಬ್ಯಾಟ್ ಇನ್ನೂ ರನ್ ಹೊಡೆಯಲು ಶುರು ಮಾಡಿಲ್ಲ. ಸದ್ಯ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿ ಪರ ದೇಶೀಯ ಕ್ರಿಕೆಟ್ ಆಡುತ್ತಿರುವ ರಿಷಬ್ ಪಂತ್, ರಾಹುಲ್ ಜಾಗಕ್ಕೆ ಬರುವ ಸಾಧ್ಯತೆಯಿದೆ. ರವಿಚಂದ್ರನ್ ಅಶ್ವಿನ್ ಸ್ಪಿನ್ನರ್ ಆಗಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪರ್ತ್ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಸಿಕಂದರ್ ರಜಾ ಅವರ ಬಲಿಷ್ಠ ಬೌಲಿಂಗ್ ಆಧಾರದ ಮೇಲೆ ಜಿಂಬಾಬ್ವೆ ಪಾಕಿಸ್ತಾನವನ್ನು ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ ಅಶ್ವಿನ್ ಸ್ಪಿನ್ನರ್ ಸ್ಥಾನ ಖಚಿತ ಎಂಬ ನಂಬಿಕೆ ಇದೆ. ಯುಜ್ವೇಂದ್ರ ಚಹಾಲ್ ಈಗ ವಿಶ್ರಾಂತಿ ಪಡೆಯಬೇಕಾಗಿದೆ.

ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠವಾಗಿದೆ:

ಬವುಮಾ ನಾಯಕತ್ವದಲ್ಲಿ ಆಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಪ್ರಸಕ್ತ ಟೂರ್ನಿಯಲ್ಲಿ ಪ್ರಬಲ ಸ್ಪರ್ಧಿಯಾಗುವ ಇರಾದೆ ವ್ಯಕ್ತಪಡಿಸಿದೆ. ದಕ್ಷಿಣ ಆಫ್ರಿಕಾ ಯಾವುದೇ ಪಂದ್ಯವನ್ನು ಸೋತಿಲ್ಲ. ಈ ತಂಡ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 104 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಜಿಂಬಾಬ್ವೆ ವಿರುದ್ಧದ ಅವರ ಪಂದ್ಯ ಮಳೆಯಿಂದಾಗಿ ರದ್ದಾಯಿತು.

ಇದನ್ನೂ ಓದಿ: Virat Kohli: ವಿಶ್ವದಾಖಲೆ ಹೊಸ್ತಿಲಲ್ಲಿ ವಿರಾಟ್: ಈ ರೆಕಾರ್ಡ್ ಮಾಡಲು ಬೇಕಾಗಿರೋದು ಕೇವಲ 27 ರನ್!

ಭಾರತದ ಸಂಭಾವ್ಯ ಆಟಗಾರರ ಪಟ್ಟಿ: ಕೆಎಲ್ ರಾಹುಲ್, ರೋಹಿತ್ ಶರ್ಮಾ (c), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (WK), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News