ನವದೆಹಲಿ: ಕ್ರಿಕೆಟ್ ಆಟಕ್ಕೆ ಜಗತ್ತಿನಾದ್ಯಂತ ಸುಮಾರು ಒಂದು ಶತಕೋಟಿ ಅಭಿಮಾನಿಗಳು ಎನ್ನುವ ಹೊಸ ಸಂಗತಿಯನ್ನು ಐಸಿಸಿ ಕಂಡು ಹಿಡಿದಿದೆ.
ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ, ತಿಳಿಸುವ ಐಸಿಸಿ ತನ್ನ ಸಮೀಕ್ಷೆಯಲ್ಲಿ 16 ಮತ್ತು 69 ವರ್ಷ ವಯಸ್ಸಿನ ಜನರ ಗಣನೆಗೆ ತೆಗೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಶತಕೋಟಿ ಕ್ರಿಕೆಟ್ ಅಭಿಮಾನಿಗಳ ಸರಾಸರಿ ವಯಸ್ಸು 34 ಎಂದು ತಿಳಿದುಬಂದಿದ್ದು ಅದರಲ್ಲಿ ಶೇ 39%ರಷ್ಟು ಮಹಿಳೆಯರು ಎಂದು ಐಸಿಸಿ ತಿಳಿಸಿದೆ.
ಮಹಿಳೆಯರನ್ನು ಈ ಕುರಿತಾಗಿ ಸಂದರ್ಶಿಸಿದಾಗ ಮೂರನೇ ಎರಡು ಭಾಗದಷ್ಟು ಮಹಿಳೆಯರು ಕ್ರಿಕೆಟ್ ನಲ್ಲಿ ಆಸಕ್ತರಾಗಿದ್ದಾರೆ ಮತ್ತು 70% ರಷ್ಟು ಮಹಿಳೆಯರು ಮಹಿಳಾ ಕ್ರಿಕೆಟನ್ನು ಲೈವ್ ಕವರೇಜ್ ನೋಡಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು ಕ್ರೀಡೆಯ ವಿಭಿನ್ನ ಸ್ವರೂಪಗಳ ವಿಚಾರವಾಗಿ ಕೇಳಿದಾಗ 16 ವರ್ಷಕ್ಕಿಂತಲೂ ಹೆಚ್ಚು ವಯಸ್ಸಿನವರು ಮೂರನೇಯ ಎರಡು ಭಾಗದಷ್ಟು ಜನರು ತಾವು ಸಮಗ್ರವಾಗಿ ಎಲ್ಲರೂ ನೋಡಲು ಇಚ್ಚಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟ್ವೆಂಟಿ 20 ನಂತಹ ಅಂತರರಾಷ್ಟ್ರೀಯ ಪಂದ್ಯಾವಳಿ ತಮ್ಮ ನೆಚ್ಚಿನದು ಎಂದು ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ ಎಂದು ಐಸಿಸಿ ಕಂಡುಕೊಂಡಿದೆ. ದಕ್ಷಿಣ ಆಫ್ರಿಕನ್ನರಲ್ಲಿ ಏಕದಿನ ಪಂದ್ಯಕ್ಕೆ 91% ರಷ್ಟು ಜನರು ಪ್ರಾಧ್ಯಾನತೆ ನೀಡಿದರೆ ಮತ್ತು ಪಾಕಿಸ್ತಾನವು T20I ಪಂದ್ಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ .T20I ಪಂದ್ಯಗಳು ವಿಶ್ವದಾದ್ಯಂತದ ಅತ್ಯಂತ ಜನಪ್ರಿಯ ಪಂದ್ಯಗಳಾಗಿದ್ದರೆ,ಏಕದಿನ ಪಂದ್ಯಗಳು ಎರಡನೇ ಸ್ಥಾನದಲ್ಲಿವೆ ಎಂದು ತಿಳಿದುಬಂದಿದೆ.