ಮಳೆಯಿಂದ ರದ್ದಾದ ದ್ವಿತೀಯ ಟ್ವೆಂಟಿ-20 ಪಂದ್ಯ, ಆಸೀಸ್ ಗೆ 1-0 ಮುನ್ನಡೆ

ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ಪಂದ್ಯವನ್ನು ಮಳೆಯ ಕಾರಣದಿಂದ ರದ್ದು ಗೊಳಿಸಲಾಗಿದೆ.ಆ ಮೂಲಕ ಮೂರು ಟ್ವೆಂಟಿ ಪಂದ್ಯದ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಗೆಲುವಿನ ದ್ವಿತೀಯ ಪಂದ್ಯದಲ್ಲಿ ಗೆಲ್ಲುವ ನೀರಿಕ್ಷೆಯನ್ನಿಟ್ಟುಕೊಂಡಿದ್ದ ಭಾರತಕ್ಕೆ ನಿರಾಸೆಯಾಗಿದೆ.

Last Updated : Nov 23, 2018, 05:14 PM IST
ಮಳೆಯಿಂದ ರದ್ದಾದ ದ್ವಿತೀಯ ಟ್ವೆಂಟಿ-20 ಪಂದ್ಯ, ಆಸೀಸ್ ಗೆ 1-0 ಮುನ್ನಡೆ  title=

ಮೆಲ್ಬೋರ್ನ್‌: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ಪಂದ್ಯವನ್ನು ಮಳೆಯ ಕಾರಣದಿಂದ ರದ್ದು ಗೊಳಿಸಲಾಗಿದೆ.ಆ ಮೂಲಕ ಮೂರು ಟ್ವೆಂಟಿ ಪಂದ್ಯದ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಗೆಲುವಿನ ದ್ವಿತೀಯ ಪಂದ್ಯದಲ್ಲಿ ಗೆಲ್ಲುವ ನೀರಿಕ್ಷೆಯನ್ನಿಟ್ಟುಕೊಂಡಿದ್ದ ಭಾರತಕ್ಕೆ ನಿರಾಸೆಯಾಗಿದೆ.

ಇದರಿಂದ ಮುಂದಿನ ಪಂದ್ಯದಲ್ಲಿ ಟ್ವೆಂಟಿ ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಗೆಲ್ಲಲೇಬೇಕಾದ ಅನಿವಾರ್ಯತೆ ಭಾರತ ತಂಡಕ್ಕೆ ಎದುರಾಗಿದೆ.ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ  ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ನ್ನು ಆಯ್ದುಕೊಂಡಿತು. ನಂತರ ಇದಕ್ಕೆ ಅನುಗುಣುವಾಗಿ ಬೌಲಿಂಗ್ ಮಾಡಿದ ಭಾರತ ತಂಡವು ಆಸೀಸ್ ತಂಡವನ್ನು 19 ಓವರ್ ಗಳಲ್ಲಿ ಕೇವಲ 132 ರನ್ ಗಳಿಗೆ ಕಟ್ಟಿಹಾಕಿತು.

ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಈಗ ಮಳೆಯ ಅಡ್ಡಿಯಿಂದಾಗಿ ಪಂದ್ಯವನ್ನೇ ರದ್ದುಗೊಳಿಸಲಾಗಿದೆ.

Trending News