ಒಂದೇ ಒಂದು ರನ್ ನೀಡದೆ 7 ವಿಕೆಟ್ ಉಡೀಸ್: ಟಿ20 ಕ್ರಿಕೆಟ್’ನಲ್ಲಿ ವಿಶ್ವದಾಖಲೆ ಬರೆದ 17ರ ಹರೆಯದ ಬೌಲರ್

Indonesian bowler Rohmalia Rohmalia: 2021 ರಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4-2-3-7 ರಿಂದ ಅದ್ಭುಯ ಬೌಲಿಂಗ್ ಮಾಡಿದ ನೆದರ್ಲೆಂಡ್ಸ್‌’ನ ಫ್ರೆಡೆರಿಕ್ ಓವರ್‌ಡಿಕ್ ಹೆಸರಿನಲ್ಲಿ ಈ ದಾಖಲೆ ಇತ್ತು.

Written by - Bhavishya Shetty | Last Updated : Apr 26, 2024, 04:02 PM IST
    • ಇಂಡೋನೇಷ್ಯಾದ ಬೌಲರ್ ರೊಹ್ಮಾಲಿಯಾ ರೊಹ್ಮಾಲಿಯಾ
    • ಟಿ20 ಕ್ರಿಕೆಟ್‌’ನಲ್ಲಿ ಅಸಾಧಾರಣ ಬೌಲಿಂಗ್ ಮಾಡುವ ಮೂಲಕ ಹೊಸ ಇತಿಹಾಸ
    • 3.2 ಓವರ್‌’ಗಳಲ್ಲಿ ಯಾವುದೇ ರನ್ ನೀಡದೆ 7 ವಿಕೆಟ್ ಪಡೆದು ವಿಶ್ವದಾಖಲೆ
ಒಂದೇ ಒಂದು ರನ್ ನೀಡದೆ 7 ವಿಕೆಟ್ ಉಡೀಸ್: ಟಿ20 ಕ್ರಿಕೆಟ್’ನಲ್ಲಿ ವಿಶ್ವದಾಖಲೆ ಬರೆದ 17ರ ಹರೆಯದ ಬೌಲರ್ title=
Rohmalia Rohmalia

Indonesian bowler Rohmalia Rohmalia: ಇಂಡೋನೇಷ್ಯಾದ ಬೌಲರ್ ರೊಹ್ಮಾಲಿಯಾ ರೊಹ್ಮಾಲಿಯಾ ಟಿ20 ಕ್ರಿಕೆಟ್‌’ನಲ್ಲಿ ಅಸಾಧಾರಣ ಬೌಲಿಂಗ್ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. 17 ವರ್ಷದ ರೊಹ್ಮಾಲಿಯಾ 3.2 ಓವರ್‌’ಗಳಲ್ಲಿ ಯಾವುದೇ ರನ್ ನೀಡದೆ 7 ವಿಕೆಟ್ ಪಡೆದು ವಿಶ್ವದಾಖಲೆ ಮಾಡಿದ್ದಾರೆ.

ಇದನ್ನೂ ಓದಿ: ಒಂದು ಕಾಲದಲ್ಲಿ ಕುಟುಂಬ ನಿರ್ವಹಣೆಗೆ ಮೀಸಲಾಗಿದ್ದ ಮಹಿಳೆ ಇಂದು 800 ಕೋಟಿ ವ್ಯವಹಾರದ ಒಡತಿ ! ಇವರೇ ಎಂ ಎಸ್ ಧೋನಿ ಅತ್ತೆ ಶೀಲಾ ಸಿಂಗ್!

2021 ರಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4-2-3-7 ರಿಂದ ಅದ್ಭುಯ ಬೌಲಿಂಗ್ ಮಾಡಿದ ನೆದರ್ಲೆಂಡ್ಸ್‌’ನ ಫ್ರೆಡೆರಿಕ್ ಓವರ್‌ಡಿಕ್ ಹೆಸರಿನಲ್ಲಿ ಈ ದಾಖಲೆ ಇತ್ತು.

ಉದಯನ್ ಕ್ರಿಕೆಟ್ ಗ್ರೌಂಡ್‌’ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಕೊನೆಯ T20I ನಲ್ಲಿ ರೊಹ್ಮಾಲಿಯಾ ರೊಹ್ಮಾಲಿಯಾ ಮಂಗೋಲಿಯಾ ವಿರುದ್ಧ ಬೌಲಿಂಗ್ ಮಾಡಿದರು. ರೊಹ್ಮಾಲಿಯಾ 3.2 ಓವರ್’ನಲ್ಲಿ 3 ಮೇಡನ್ ಸಹಿತ ಶೂನ್ಯ ರನ್ ಕೊಡುಗೆ ನೀಡಿ 7 ವಿಕೆಟ್ ಕಬಳಿಸಿದ್ದಾರೆ. ಅವರ ಅಸಾಮಾನ್ಯ ಪ್ರದರ್ಶನದೊಂದಿಗೆ ಇತಿಹಾಸವನ್ನು ಸೃಷ್ಟಿಸಿದರು.

ಇದನ್ನೂ ಓದಿ: Loksabha Election 2024 : ಬೆಂಗಳೂರಿನಲ್ಲಿ 20ನೇ ಬಾರಿ ಮತ ಚಲಾಯಿಸಿದ 86 ವೃದ್ಧ

ರೊಹ್ಮಾಲಿಯಾ ರೊಹ್ಮಾಲಿಯಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌’ನಲ್ಲಿ 7 ವಿಕೆಟ್ ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. 2019 ರಲ್ಲಿ ಮಾಲ್ಡೀವ್ಸ್ ವಿರುದ್ಧ ನೇಪಾಳದ ಅಂಜಲಿ ಚಂದ್  2.1 ಓವರ್’ನಲ್ಲಿ ಶೂನ್ಯ ರನ್ ನೀಡಿ 6 ವಿಕೆಟ್ ಕಿತ್ತಿದ್ದರು.

T20I ನಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶ (ಪುರುಷರು ಮತ್ತು ಮಹಿಳೆಯರು)

ರೊಹ್ಮಾಲಿಯಾ ರೊಹ್ಮಾಲಿಯಾ (ಇಂಡೋನೇಷ್ಯಾ ಮಹಿಳೆಯರು): 3.2 ಓವರ್, 3 ಮೇಡನ್, ಶೂನ್ಯ ರನ್, 7 ವಿಕೆಟ್ vs  ಮಂಗೋಲಿಯಾ, 2024

ಫ್ರೆಡ್ರಿಕ್ ಓವರ್ಡಿಜ್ಕ್ (ನೆದರ್ಲ್ಯಾಂಡ್ಸ್ ಮಹಿಳೆಯರು): ಫ್ರಾನ್ಸ್ ವಿರುದ್ಧ 4 ಓವರ್ -2 ಮೇಡನ್ -3 ರನ್ -7 ವಿಕೆಟ್, 2021

ಅಲಿಸನ್ ಸ್ಟಾಕ್ಸ್ (ಅರ್ಜೆಂಟೀನಾ ಮಹಿಳೆಯರು): 3.4 ಓವರ್ -0 ಮೇಡನ್ -3 ರನ್ -7 ವಿಕೆಟ್ ಪೆರು ವಿರುದ್ಧ, 2022

ಸೈಜ್ರುಲ್ ಎಜತ್ ಇದ್ರಾಸ್ (ಮಲೇಷ್ಯಾ ಪುರುಷರು): 4 ಓವರ್ -1 ಮೇಡನ್ -8 ರನ್ -7 ವಿಕೆಟ್ ಚೀನಾ ವಿರುದ್ಧ, 2023

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News