Weekly Horoscope: ಮೂರು ರಾಶಿಯವರಿಗೆ ಈ ವಾರ ಅತ್ಯುತ್ತಮ ವಾರ

Weekly Horoscope From November 06th to November 12th: ಕಳೆದ ವಾರಾಂತ್ಯದಲ್ಲಿ ಕರ್ಮಫಲದಾತ ಶನಿ ದೇವನ ನೇರ ಸಂಚಾರ ಆರಂಭವಾಗಿದೆ. ಇಂದಿನಿಂದ ಬುಧ ವೃಶ್ಚಿಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇನ್ನು ವಾರದ ಕೊನೆಯಲ್ಲಿ ಧನ್ತೆರೇಸ್ ಆಚರಿಸಲಿದ್ದೇವೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಎಂದು ತಿಳಿಯೋಣ... 

Written by - Yashaswini V | Last Updated : Nov 6, 2023, 06:15 AM IST
  • ಮಿಥುನ ರಾಶಿಯವರು ಈ ವಾರ ಏನಾದರೂ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದರೆ ಜಾಗರೂಕರಾಗಿರಿ.
  • ತುಲಾ ರಾಶಿಯವರಿಗೆ ಈ ವಾರ ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ನಿಗಾವಹಿಸಿ.
  • ಮಕರ ರಾಶಿಯವರು ನಿಮ್ಮ ಜೀವನವನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳಬೇಡಿ.
Weekly Horoscope: ಮೂರು ರಾಶಿಯವರಿಗೆ ಈ ವಾರ ಅತ್ಯುತ್ತಮ ವಾರ  title=

Weekly Horoscope in  Kannada From November 06th to November 12th: ಎರಡು ದಿನಗಳ ಹಿಂದೆಯಷ್ಟೆ ಶನಿ ಮಾರ್ಗಿಯಾಗಿದ್ದಾನೆ. ಇಂದು ನವೆಂಬರ್ 6ರಂದು ಗ್ರಹಗಳ ರಾಜಕುಮಾರ ಬುಧ ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ವಾರಾಂತ್ಯದಲ್ಲಿ ದೀಪಗಳ ಹಬ್ಬ ದೀಪಾವಳಿ ಹಬ್ಬವೂ ಇರಲಿದೆ. ಈ ವಾರ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯೋಣ. 
 
ಮೇಷ ರಾಶಿಯವರ ವಾರ ಭವಿಷ್ಯ:  
ಮೇಷ ರಾಶಿಯವರು ಇಂದು ನಿಮ್ಮ ಮನೆಯವರಿಂದಲೇ ಮನೆ ಬದಲಾಯಿಸಬೇಕಾಗಬಹುದು. ಮೇಷ ರಾಶಿಯವರು ಯಾವಾಗಲೂ ತಮಗಾಗಿಯಲ್ಲ ತಮ್ಮವರಿಗಾಗಿ ಹೋರಾಡುತ್ತಾರೆ. ಈ ವಾರ ನೀವು ನಿಮ್ಮ ಕುಟುಂಬದವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆದರೆ, ನೆನಪಿಡಿ ಒಳ್ಳೆಯತನ ಯಾವಾಗಲೂ ಮೂರ್ಖತನವಾಗಲು ಬಿಡಬೇಡಿ.  ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲಿ ನೀವು ಕಾರ್ಯ ನಿರ್ವಹಿಸುತ್ತಿದ್ದರೆ ಸಾಧ್ಯವಾದಷ್ಟು ನ್ಯಾಯಕ್ಕಾಗಿ ಹೋರಾಡುವವರಿಗೆ ಬೆಂಬಲ ನೀಡಿ. 

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯವರಿಗೆ ಈ ವಾರ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡಬಹುದು. ಅದರಲ್ಲೂ ನೀವು ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ನೀವಷ್ಟೆ ಅಲ್ಲ ನಿಮ್ಮ ತಾಯಿ, ದೊಡ್ಡಮ್ಮ, ಚಿಕ್ಕಮ್ಮ ಅರ್ಥಾತ್ ನಿಮ್ಮ ತಾಯಿ ಸಮಾನರಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದಾದ ಸಾಧ್ಯತೆ ಇರುವುದರಿಂದ ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಆರೋಗ್ಯವೇ ಭಾಗ್ಯ ಎಂಬುದನ್ನೂ ನೆನಪಿನಲ್ಲಿಡಿ. 

ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರು ಈ ವಾರ ಏನಾದರೂ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದರೆ ಜಾಗರೂಕರಾಗಿರಿ. ಏಕೆಂದರೆ, ಇದೇ ನಿಮಗೆ ತಿರುಗುಬಾಣವಾಗಬಾರದು. ಈ ವಾರದ ಗ್ರಹಗತಿಗಳ ಪ್ರಕಾರ, ನೀವು ಊಹಿಸದೇ ಇರುವಂತಹ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ. ಅದೂ ಸಹ ನೀವು ಯಾರನ್ನು ಅತಿಯಾಗಿ ನಂಬಿರುತ್ತೀರೋ ಅವರಿಂದಲೇ ತೊಂದರೆಗೆ ಸಿಲುಕಬಹುದು. ಹಾಗಾಗಿ, ನೀವು ಯಾವುದೇ ನಿರ್ಧಾರ ಕೈಗೊಳ್ಳುವಾಗ ಎಚ್ಚರಿಕೆ ವಹಿಸಿ. ಆದಾಗ್ಯೂ, ಹಣಕಾಸಿನ ವಿಷಯಗಳು ಮಿಶ್ರಫಲಗಳನ್ನು ನೀಡಬಹುದು. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರಿಗೆ ಅಷ್ಟಮದಲ್ಲಿ ಶನಿ ಪ್ರಭಾವ ಇರುವುದರಿಂದ ಕೇವಲ ಸಮಸ್ಯೆಗಳಿದೆ ಎಂದುಕೊಳ್ಳಬೇಡಿ. ಸಮಸ್ಯೆಗಳ ಹಿಂದೆ ಒಳ್ಳೆಯ ಅವಕಾಶವೂ ಇರುತ್ತದೆ. ಇದನ್ನು ನೀವು ಸದುಪಯೋಗ ಪಡಿಸಿಕೊಳ್ಳಿ. ಯಾವುದೇ ವಿಚಾರದಲ್ಲಿ ನೀವು ಸಕಾರಾತ್ಮಕವಾಗಿ ಯೋಚಿಸುವುದರಿಂದ ಎಂತಹದ್ದೇ ಸಮಸ್ಯೆ ಇದ್ದರೂ ಪರಿಹಾರ ಸಿಕ್ಕೇ ಸಿಗುತ್ತದೆ. ಆದರೆ, ನೀವು ಸರಿಯಾದ ಮಾರ್ಗವನ್ನು ಆರಿಸಿಕೊಳ್ಳಿ. ಶನಿ ಮಹಾತ್ಮನನ್ನು ಪ್ರಾರ್ಥಿಸುವುದರಿಂದ ಶುಭವಾಗಲಿದೆ. ಇದಕ್ಕಾಗಿ, ನಿಮ್ಮ ಮನೆ ಹತ್ತಿರವಿರುವ ಶನಿ ದೇವಾಲಯಕ್ಕೆ ಪ್ರಸಾದವನ್ನು ಮಾಡಿ ಕೊಡುವುದರಿಂದ ಅಷ್ಟಮ ಶನಿ ಬಾಧೆ ಕಡಿಮೆಯಾಗುತ್ತದೆ. 

ಇದನ್ನೂ ಓದಿ- Diwali Vastu: ಸುಖ-ಸಂಪತ್ತಿಗಾಗಿ ದೀಪಾವಳಿ ಪೂಜೆಯಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರಿಗೆ ಎರಡನೇ ಮನೆಯಲ್ಲಿ ಕೇತು ಇರುವುದರಿಂದ ನಿಮ್ಮ ಕಣ್ಣಿನ ಬಗ್ಗೆ ಹುಷಾರಾಗಿರಿ. ಇದಲ್ಲದೆ, ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವುದರಿಂದ ಸಾಧ್ಯವಾದಷ್ಟು ಸಂಯಮದಿಂದ ಇರಿ. ಅನಾವಶ್ಯಕ ಸಾಲದ ಸುಳಿಯಲ್ಲಿ ಸಿಲುಕಬೇಡಿ. ನೀವು ನಿಮಗೋಸ್ಕರ, ನಿಮ್ಮ ಸಾಮರ್ಥಕ್ಕೆ ಅನುಗುಣವಾಗಿಯೇ ಬದುಕುವುದನ್ನು ಕಲಿಯಿರಿ. ನಿಮ್ಮ ಪರಾಕ್ರಮವೇ ನಿಮಗೆ ಸಮಸ್ಯೆ ಆಗಬಹುದು. ಸಾಧ್ಯವಾದರೆ, ರಾಹು-ಕೇತು ಶಾಂತಿಯನ್ನು ಮಾಡಿಕೊಳ್ಳಿ. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ಈಗ ಒಳ್ಳೆಯ ಸಮಯ ಆರಂಭವಾಗಲಿದೆ. ಆದರೂ, ನೀವು ಬುದ್ದಿವಂತಿಕೆಯಿಂದ ಇದ್ದರೆ ನೀವು ಋಣಮುಕ್ತರಾಗಬಹುದು. ಇದರಿಂದ ಒಳ್ಳೆಯ ಯೋಗಗಳು ನಿಮಗೆ ಶುಭಫಲಗಳನ್ನು ನೀಡಲಿವೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ಸರಿಯಾಗಿ ಯೋಚಿಸಿ, ಕೆಲಸ ಮಾಡಿ. ಇಲ್ಲದಿದ್ದರೆ, ಕೈ ಹಾಕುವ ಕೆಲಸದಲ್ಲಿ ಜಯ ಸಿಗುವುದು ಕಷ್ಟವಾಗುತ್ತದೆ. ನೀವು ಯಾರಿಗಾದರೂ ಸಹಾಯ ಮಾಡುವಾಗ ಒಳ್ಳೆಯ/ಕೆಟ್ಟ ಫಲಗಳ ಬಗ್ಗೆ ಚಿಂತಿಸಿ ನಿರ್ಧರಿಸಿ. ಸಾಧ್ಯವಾದಷ್ಟೂ ಪಾಸಿಟಿವ್ ಆಗಿ ಮುಂದುವರೆಯಿರಿ. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರಿಗೆ ಈ ವಾರ ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ನಿಗಾವಹಿಸಿ. ಜ್ವರ, ಕೆಮ್ಮು ಜೊತೆಗೆ ಸಣ್ಣಪುಟ್ಟ ಅಪಘಾತ ಪೆಟ್ಟಾಗುವ ಸಾಧ್ಯತೆ ಇದೆ. ನಿದ್ರಾಹೀನತೆ ಸಮಸ್ಯೆಯೂ ನಿಮ್ಮನ್ನು ಕಾಡಬಹುದು. ಆದರೂ, ನೀವು ಮಾಡುವ ಧಾರ್ಮಿಕ ಕೆಲಸಗಳು ನಿಮ್ಮನ್ನು ಕಾಪಾಡಲಿವೆ. ನಿಮ್ಮ ಕೆಟ್ಟ ದಿನಗಳು ಕಳೆದಿವೆ. ಮುಂದಿನ ದಿನಗಳಲ್ಲಿ ನೀವು ನಿಮ್ಮ ಕುಟುಂಬ, ಮಕ್ಕಳು, ನಿಮ್ಮ ಸಹೋದರ ವರ್ಗದವರು ಒಳ್ಳೆಯ ಸಮಯವನ್ನು ಆನಂದಿಸುವಿರಿ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯವರಿಗೆ ಈ ವಾರ ಅನಿರೀಕ್ಷಿತ ಅವಕಾಶಗಳು ಬರಬಹುದು. ಈ ಸಮಯದಲ್ಲಿ ನೀವು ಯೋಚಿಸಿ ಸರಿಯಾದ ನಿರ್ಧಾರ ಕೈಗೊಳ್ಳಿ. ಇದಕ್ಕಾಗಿ ಉತ್ತಮರಿಂದ ಮಾರ್ಗದರ್ಶನ ಪಡೆಯಿರಿ. ನೆನಪಿಡಿ, ಜೀವನದಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಕಠಿಣ ಪರಿಶ್ರಮಕ್ಕೆ ಖಂಡಿತ ಫಲ ಸಿಕ್ಕೇ ಸಿಗುತ್ತದೆ. ಈ ಸಮಯ ನಿಮಗೆ ಚೆನ್ನಾಗಿರುವುದರಿಂದ ನೀವು ಕೈ ಹಾಕಿದ ಕೆಲಸಗಳಲ್ಲಿ ಜಯ ನಿಮ್ಮದಾಗಲಿದೆ. 

ಇದನ್ನೂ ಓದಿ- ಈ ರಾಶಿಯ ಜನರ ಬಾಳಲ್ಲಿ ದೀಪಾವಳಿ ಬೆಳಗಲಿದೆ ಅದೃಷ್ಟವೆಂಬ ನಂದಾದೀಪ: ಸಿರಿಸಂಪತ್ತಿನ ಸುಧೆಯನ್ನೇ ಧಾರೆ ಎರೆಯುವಳು ಸಾಕ್ಷಾತ್ ಮಹಾಲಕ್ಷ್ಮೀ

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯವರಿಗೆ ಒಂದು ರೀತಿಯಲ್ಲಿ ಹೊಸ ವ್ಯವಹಾರ ನಡೆಸುತ್ತಿರುವವರಿಗೆ ಬಂಪರ್ ಲಾಭ ಸಿಗಲಿದೆ. ವಿಶೇಷವೆಂದರೆ ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ಕುಟುಂಬದವರು, ಸ್ನೇಹಿತರು ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ನೀವು ಪ್ರವಾಸಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ವಾರ ಅತ್ಯುತ್ತಮ ವಾರ. ಸಾಧ್ಯವಾದರೆ, ಪ್ರತಿ ಗುರುವಾರ ಹತ್ತಿರದಲ್ಲಿರುವ ಔದುಂಬುರ ವೃಕ್ಷಕ್ಕೆ ಮೂರು ಪ್ರದಕ್ಷಿಣೆ ಹಾಕಿ. ಇದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು. 

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರು ನಿಮ್ಮ ಜೀವನವನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ, ಭವಿಷ್ಯದಲ್ಲಿ ಇದು ನಿಮಗೆ ಕಾಡಲಿದೆ. ವಾಸ್ತವಿಕೆಯನ್ನು ಅರಿತು ಮುಂದುವರೆದರೆ ಶುಭ ಫಲ ಖಂಡಿತ ಸಿಗಲಿದೆ. ಆದರೆ, ನೆನಪಿಡಿ ನಿಮ್ಮ ಪಾಪಗಳು ನಿಮ್ಮನ್ನು ಕಾಡದೆ ಬಿಡುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. 

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯವರಿಗೆ ಈ ವಾರ ಭಗವಂತ ಯಾವುದೋ ಒಂದು ರೂಪದಲ್ಲಿ ನಿಮ್ಮನ್ನು ಕಾಪಾಡಲಿದ್ದಾನೆ. ನೀವು ಯಾವುದೇ ದೊಡ್ಡ ಸಮಸ್ಯೆಗೆ ಸಿಲುಕಿದರೂ ಅದು ಮಂಜಿನಂತೆ ಕರಗಲಿದೆ. ಆದರೆ, ಇದಕ್ಕಾಗಿ ಸರಿಯಾದ ಮಾರ್ಗದರ್ಶನ ಅಗತ್ಯವಿದೆ. ಸಾಧ್ಯವಾದರೆ, ಸೂರ್ಯನ ಅನುಗ್ರಹಕ್ಕಾಗಿ ಸೂರ್ಯ ನಾರಾಯಣ ಅಷ್ಟೋತ್ತರವನ್ನು ಪಠಿಸಿ. ರಾಮನಾಮ ಜಪ ಮಾಡಿದರೆ ತುಂಬಾ ಶುಭವಾಗಲಿದೆ. 

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರಿಗೆ ಈಗಷ್ಟೇ ಶನಿ ಸಾಡೇ ಸಾತಿ ಆರಂಭವಾಗಿರುವುದರಿಂದ ಎಲ್ಲಾ ರೀತಿಯ ಒತ್ತಡಗಳು ಹೆಚ್ಚಾಗಲಿವೆ. ಆದರೆ, ಚಿಂತಿಸಬೇಡಿ. ಸದಾ ಒಳ್ಳೆಯದನ್ನು ಮಾಡುವವರಿಗೆ ಒಳ್ಳೆಯ ಫಲಗಳು ಸಿಕ್ಕೇ ಸಿಗುತ್ತವೆ.   ಸದಾ ಧನಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳಿ. ಜೊತೆಗೆ ನಿಮ್ಮಿಂದ ಬೇರೆಯವರಿಗೆ ನೋವಾಗದಂತೆ, ತೊಂದರೆಯಾಗದಂತೆ ನಿಗಾವಹಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News