Weekly Horoscope: ನವೆಂಬರ್ ಮೊದಲ ವಾರ ಐದು ರಾಶಿಯವರಿಗೆ ಹಣದ ಸುರಿಮಳೆ, ಭಾರೀ ಅದೃಷ್ಟ

Weekly Horoscope From October 30th to November 05th: ಅಕ್ಟೋಬರ್ ಅಂತ್ಯ ಹಾಗೂ ನವೆಂಬರ್ ಮೊದಲ ವಾರ ಕೆಲವು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಈ ವಾರ ಕೆಲವರಿಗೆ ಆದಾಯ ಹೆಚ್ಚಾಗಲಿದ್ದು, ನಿಮ್ಮ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. 

Written by - Yashaswini V | Last Updated : Oct 30, 2023, 07:28 AM IST
  • ಕನ್ಯಾ ರಾಶಿಯವರಿಗೆ ಈ ವಾರ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಲಿವೆ.
  • ವಾರದ ಮೊದಲಾರ್ಧದಲ್ಲಿ ತುಲಾ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ.
  • ಕುಂಭ ರಾಶಿಯವರು ಈ ವಾರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಿ.
Weekly Horoscope: ನವೆಂಬರ್ ಮೊದಲ ವಾರ ಐದು ರಾಶಿಯವರಿಗೆ ಹಣದ ಸುರಿಮಳೆ, ಭಾರೀ ಅದೃಷ್ಟ  title=

Weekly Horoscope in  Kannada From October 30th to November 05th: ಇನ್ನೇನು ಅಕ್ಟೋಬರ್ ಕಳೆದು ನವೆಂಬರ್ ಆರಂಭವಾಗಲಿ ಎರಡು ದಿನವಷ್ಟೇ ಬಾಕಿ ಉಳಿದಿದೆ. ಅಕ್ಟೋಬರ್ ಅಂತ್ಯ ಹಾಗೂ ನವೆಂಬರ್ ಮೊದಲ ವಾರವಾದ ಈ ವಾರ ಕೆಲವು ರಾಶಿಯ ಜನರಿಗೆ ಅದೃಷ್ಟದ ವಾರ ಎಂದು ಸಾಬೀತುಪಡಿಸಲಿದೆ. ಈ ವಾರದ ದ್ವಾದಶ ರಾಶಿಯವರ ಫಲಾಫಲ ಹೇಗಿದೆ ಎಂದು ತಿಳಿಯೋಣ... 

ಮೇಷ ರಾಶಿಯವರ ವಾರ ಭವಿಷ್ಯ:  
ಈ ವಾರ ಅದೃಷ್ಟ ಮೇಷ ರಾಶಿಯವರ ಪಾಲಿಗಿದೆ. ಇದರಿಂದಾಗಿ ನೀವು ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ಹೊಸ ಬಟ್ಟೆ, ಆಭರಣ ಖರೀದಿಸಲು ಯೋಚಿಸುತ್ತಿರುವವರಿಗೆ ಈ ವಾರ ಅತ್ಯಂತ ಪ್ರಾಶಸ್ತ್ಯವಾಗಿದೆ. ವಾರದ ಉತ್ತರಾರ್ಧ ರಾಜಕೀಯ ರಂಗದಲ್ಲಿರುವವರಿಗೆ ಮಂಗಳಕರ ಸಮಯ ಎಂದು ಸಾಬೀತುಪಡಿಸಲಿದೆ. ಆದಾಗ್ಯೂ, ವಿವಾಹಿತರು ನಿಮ್ಮ ಕೋಪಕ್ಕೆ ಕಡಿವಾಣ ಹಾಕದಿದ್ದರೆ ಕೌಟುಂಬಿಕ ಸಲಹೆಗಳಿಗೆ ಕಾರಣವಾಗಬಹುದು, ಎಚ್ಚರ. 

ವೃಷಭ ರಾಶಿಯವರ ವಾರ ಭವಿಷ್ಯ:  
ಈ ವಾರ ವೃಷಭ ರಾಶಿಯವರು ಯಾವುದೇ ರೀತಿಯ ಹೂಡಿಕೆಗಳ ಬಗ್ಗೆ ತುಂಬಾ ಜಾಗರೂಕರಾಗಿರಿ. ಇಲ್ಲವೇ, ಕೈ ಸುಟ್ಟಿಕೊಳ್ಳುವ ಸಾಧ್ಯತೆ ಇರಲಿದೆ. ಇದಲ್ಲದೆ, ವೃತ್ತಿ ರಂಗದಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಮುಂದುವರೆಯಿರಿ. ಚರ್ಮಕ್ಕೆ ಸಂಬಂಧಿತ ಸಮಸ್ಯೆ ಇರುವವರು ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. ಬಿಸಿನೆಸ್ ಸಂಬಂಧ ಪ್ರಯಾಣಗಳು ಪ್ರಯೋಜನಕಾರಿ ಆಗಿರಲಿವೆ.  
 
ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರಿಗೆ ಈ ವಾರ ಸಕಾರಾತ್ಮಕವಾಗಿ ಆರಂಭವಾಗಲಿದೆ. ವಾರದ ಆರಂಭದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಜಯ ಪ್ರಾಪ್ತಿಯಾಗಲಿದೆ. ಆದರೆ, ವಾರದ ಮಧ್ಯ ಭಾಗದಲ್ಲಿ ನಿಮಗೆ ಸವಾಲುಗಳು ಹೆಚ್ಚಾಗಬಹುದು. ಕೆಲವು ಕೆಟ್ಟ ಸುದ್ದಿಗಳನ್ನು ಕೂಡ ಕೇಳುವ ಸಾಧ್ಯತೆ ಇರುವುದರಿಂದ ಮಾನಸಿಕವಾಗಿ ಸಿದ್ಧರಾಗಿರಿ. ಆದಾಗ್ಯೂ, ಆಸ್ತಿ ಸಂಬಂಧಿತ ವಿಷಯಗಳು ಧನಾತ್ಮಕವಾಗಿರುತ್ತವೆ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಉನ್ನತ ವಿದ್ಯಾಭ್ಯಾಸ, ಇಲ್ಲವೇ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರಿಗೆ ಈ ವಾರ ಸಕಾಲ. ನಿಮ್ಮ ಕೆಲಸಗಳನ್ನು ಪೂರೈಸಲು ಕಠಿಣ ಪರಿಶ್ರಮ ವಹಿಸಬೇಕಾಗುತ್ತದೆ. ಇದರಿಂದ ಆದಾಯದ ಹೊಸ ಮೂಲಗಳು ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆಯೂ ಇದೆ. ಒಟ್ಟಾರೆ ಈ ವಾರ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 
 
ಇದನ್ನೂ ಓದಿ- Ketu Gochar 2023: ಮುಂದಿನ ಒಂದೂವರೆ ವರ್ಷ ಈ ರಾಶಿಯವರಿಗೆ ಹೆಚ್ಚಾಗಲಿದೆ ಸಂಕಷ್ಟ

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರಿಗೆ ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲವಿದ್ದು ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಕಾಣುವಿರಿ. ಆದಾಯದಲ್ಲಿಯೂ ಹೆಚ್ಚಳವಾಗಲಿದೆ. ಆಸ್ತಿ ಖರೀದಿಸಲು ಯೋಜಿಸುತ್ತಿರುವವರಿಗೆ ಅತ್ಯುತ್ತಮ ಸಮಯ ಇದಾಗಿದೆ. ಬೇರೆಡೆ ಸಿಲುಕಿರುವ ನಿಮ್ಮ ಹಣವೂ ಕೈ ಸೇರಲಿದೆ. ಆದರೆ, ಬೇರೆಯವರು ನಿಮ್ಮ ಜೀವನದಲ್ಲಿ ಅಸ್ತಕ್ಷೇಪ ಮಾಡುವುದನ್ನು ತಡೆಯಿರಿ. 
 
ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ಈ ವಾರ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಲಿವೆ. ಇದು ನಿಮ್ಮ ಕಳವಳಕ್ಕೆ ಕಾರಣವಾಗಬಹುದು. ಆದಾಗ್ಯೂ, ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ. ಆದಾಯದಲ್ಲಿ ಹೆಚ್ಚಳವಾಗಲಿದ್ದು  ಸಾಲಗಳಿಂದಲೂ ಪರಿಹಾರವನ್ನು ಪಡೆಯುವಿರಿ.  ವಿವಾಹಿತರಿಗೆ ಕೌಟುಂಬಿಕ ಜೀವನ ಆನಂದದಾಯಕವಾಗಿರುತ್ತದೆ. 
 
ತುಲಾ ರಾಶಿಯವರ ವಾರ ಭವಿಷ್ಯ: 
ವಾರದ ಮೊದಲಾರ್ಧದಲ್ಲಿ ತುಲಾ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಕೆಲವು ಅಪರಿಚಿತ ಚಿಂತೆಗಳು ನಿಮ್ಮನ್ನು ಉದ್ವಿಗ್ನಗೊಳಿಸುತ್ತವೆ. ಈ ಸಮಯದಲ್ಲಿ ನಿಮ್ಮ ಕುಟುಂಬದ ಬೆಂಬಲವೇ ನಿಮಗೆ ಅಮೃತವಿದ್ದಂತೆ. ಆದರೆ, ವಾರದ ದ್ವಿತೀಯಾರ್ಧದಲ್ಲಿ ಅದೃಷ್ಟ ಮತ್ತೆ ನಿಮ್ಮ ಪರವಾಗಿ ಇರುತ್ತದೆ.  ಹೂಡಿಕೆಯಿಂದ ನೀವು ಲಾಭ ಗಳಿಸುವಿರಿ. ಸಂಗಾತಿಯಿಂದ ಉಡುಗೊರೆಯನ್ನು ಸ್ವೀಕರಿಸಬಹುದು. 
 
ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯವರಿಗೆ ಈ ವಾರ ಬೇಡದ ಚಿಂತೆಗಳು ಬಾಧಿಸಲಿವೆ. ನಿಮ್ಮ ವಿರೋಧಿಗಳೊಂದಿಗೆ ವ್ಯವಹರಿಸುವಾಗ ತುಂಬಾ ಎಚ್ಚರಿಕೆಯಿಂದ ಮುಂದುವರೆಯುವುದು ಒಳ್ಳೆಯದು. ನಿಮ್ಮ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುವುದು ನಿಮ್ಮನ್ನು ಬಾಧಿಸಬಹುದು. ಇದಲ್ಲದೆ, ಉದಾರ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ತೊಂದರೇಗೀಡುಮಾಡುವ ಸಾಧ್ಯತೆ ಇರುವುದರಿಂದ ನೀವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. 

ಇದನ್ನೂ ಓದಿ- ದೀಪಾವಳಿಗೂ ಮುನ್ನ ಈ ರಾಶಿಗೆ ಶುಕ್ರದೆಸೆ ಶುರು: ಕನಸೆಲ್ಲಾ ನನಸಾಗಿಸಿ ಒಂದೂವರೆ ವರ್ಷ ಸಂಪತ್ತಿನ ಮಳೆ ಸುರಿಸಲಿದ್ದಾನೆ ಶನಿ

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯವರಿಗೆ ವಾರದ ಮೊದಲ ದಿನ ಆನಂದಮಯವಾಗಿರುತ್ತದೆ. ಈ ಸಮಯದಲ್ಲಿ ನೀವು ಕೈ ಹಾಕುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದ್ದು, ಆದಾಯವೂ ಹೆಚ್ಚಾಗಲಿದೆ. ಆದರೆ,  ವಾರಾಂತ್ಯದಲ್ಲಿ ನೀವು ಮೋಜು ಮಸ್ತಿಗಾಗಿ ಹೆಚ್ಚಿನ ಹಣ ವ್ಯಯಮಾಡದೇ ಇರುವುದರ ಬಗ್ಗೆ ನಿಗಾವಹಿಸಿ. 

ಮಕರ ರಾಶಿಯವರ ವಾರ ಭವಿಷ್ಯ:  
ಈ ವಾರ ಮಕರ ರಾಶಿಯವರಿಗೆ ಒತ್ತಡದ ವಾರ ಎಂತಲೇ ಹೇಳಬಹುದು. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದಾಗ್ಯೂ, ವಾರದ ಮಧ್ಯದಲ್ಲಿ ನಿಮ್ಮ ಸಮಸ್ಯೆಗಳು ಬಗೆಹರೆದು ನಿಮ್ಮ ಜೀವನದಲ್ಲಿ ಧನಾತ್ಮಕತೆ ಹೆಚ್ಚಾಗಲಿದೆ. ವಾರಾಂತ್ಯವು ನಿಮಗೆ ಅದೃಷ್ಟವನ್ನು ಹೊತ್ತು ತರಲಿದ್ದು ಬಂಪರ್ ಧನಲಾಭವನ್ನು ಕಾಣುವಿರಿ. 

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯವರು ಈ ವಾರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಿ. ಆದರೂ, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುವಿರಿ. ನಿಮ್ಮ ಸಂಗಾತಿಯ ಬೆಂಬಲದಿಂದ ನೀವು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಕೈ ಬಿಗಿ ಹಿಡಿದು ಖರ್ಚು ಮಾಡುವುದು ಒಳ್ಳೆಯದು ಎಂದು ಸಾಭೀತುಪಡಿಸಲಿದೆ. 

ಮೀನ ರಾಶಿಯವರ ವಾರ ಭವಿಷ್ಯ: 
ವಾರದ ಆರಂಭದಲ್ಲಿ ನೀವು ನಿಮ್ಮ ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಇದು ನಿಮ್ಮ ಕೋಪ, ಉದ್ವಿಗ್ನತೆಗೂ ಕಾರಣವಾಗಬಹುದು. ವಾರದ ಮಧ್ಯದಲ್ಲಿ ವ್ಯಾಪಾರಸ್ಥರು ಮೋಸ ಹೋಗುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಿ. ಆದಾಗ್ಯೂ, ವಾರಾಂತ್ಯವು ಮೀನ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News