Venus Transit: ತಿಂಗಳಾಂತ್ಯದಲ್ಲಿ ಚಂದ್ರನ ರಾಶಿಗೆ ಶುಕ್ರನ ಪ್ರವೇಶ, ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ

Venus Transit: ಕಳೆದ ವಾರವಷ್ಟೇ ಮಿಥುನ ರಾಶಿಯನ್ನು ಪ್ರವೇಶಿಸಿರುವ ಸಂಪತ್ತು, ಐಷಾರಾಮಿ ಜೀವನಕಾರಕನಾದ ಶುಕ್ರನು ಈ ತಿಂಗಳಾಂತ್ಯದಲ್ಲಿ ಎಂದರೆ 30 ಮೇ 2023ರಂದು ಚಂದ್ರನ ರಾಶಿ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಮಯವನ್ನು ಕೆಲವು ರಾಶಿಯವರ ದೃಷ್ಟಿಯಿಂದ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 

Written by - Yashaswini V | Last Updated : May 9, 2023, 07:52 AM IST
  • ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶವು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ.
  • ಆದಾಗ್ಯೂ, ಈ ಸಂದರ್ಭದಲ್ಲಿ ಶಯನ ಭಾಗ್ಯ ನಿರ್ಮಾಣಗೊಳ್ಳಲಿದ್ದು ಅದು ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಕರುಣಿಸಲಿದೆ.
  • ಈ ಸಮಯದಲ್ಲಿ ಆ ನಾಲ್ಕು ರಾಶಿಯವರು ವೃತ್ತಿ, ವ್ಯವಹಾರದಲ್ಲಿ ಅಪಾರ ಪ್ರಗತಿ, ಕೀರ್ತಿಯನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Venus Transit: ತಿಂಗಳಾಂತ್ಯದಲ್ಲಿ ಚಂದ್ರನ ರಾಶಿಗೆ ಶುಕ್ರನ ಪ್ರವೇಶ, ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ  title=

Shukra Rashi Parivartane Effects: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ಗ್ರಹಕ್ಕೂ ಕೂಡ ತನ್ನದೇ ಆದ ಪ್ರಾಮುಖ್ಯತೆ ಇದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಸುಖ, ಸಂಪತ್ತು, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರನು ಈ ತಿಂಗಳ ಅಂತ್ಯದಲ್ಲಿ ಎಂದರೆ 30 ಮೇ 2023ರಂದು ಮಿಥುನ ರಾಶಿಯನ್ನು ತೊರೆದು ಚಂದ್ರನ ಮಾಲೀಕತ್ವದ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಬಳಿಕ 07 ಜುಲೈ 2023ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.  

ಮೇ 30ರಂದು ಕರ್ಕ ರಾಶಿಗೆ ಶುಕ್ರನ ಪ್ರವೇಶ: ಈ ನಾಲ್ಕು ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಭಾರೀ ಯಶಸ್ಸು :-
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶವು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. ಆದಾಗ್ಯೂ, ಈ ಸಂದರ್ಭದಲ್ಲಿ ಶಯನ ಭಾಗ್ಯ ನಿರ್ಮಾಣಗೊಳ್ಳಲಿದ್ದು ಅದು ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಕರುಣಿಸಲಿದೆ. ಈ ಸಮಯದಲ್ಲಿ ಆ ನಾಲ್ಕು ರಾಶಿಯವರು ವೃತ್ತಿ, ವ್ಯವಹಾರದಲ್ಲಿ ಅಪಾರ ಪ್ರಗತಿ, ಕೀರ್ತಿಯನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಮೇಷ ರಾಶಿ: 
ಶುಕ್ರನ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಮೋಷನ್ ಸೇರಿದಂತೆ ಹಲವು ಉತ್ತಮ ಅವಕಾಶಗಳನ್ನು ನೀಡಲಿದ್ದಾನೆ. ಇದಲ್ಲದೆ, ಮೇಷ ರಾಶಿಯವರು ಕೈ ಹಾಕುವ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ವೃತ್ತಿ ಬದುಕಿನಲ್ಲಿ ಉತ್ತುಂಗದ ಹೊಸ ಶಿಖರವನ್ನು ಏರುವಿರಿ. ಇದರೊಂಗಿದೆ ಹಣಕಾಸಿನ ಏಳ್ಗೆಯು ನಿಮ್ಮ ಕೌಟುಂಬಿಕ ಜೀವನದಲ್ಲಿ ಸುಖ- ಸಂತೋಷನ್ನು ತರಲಿದೆ. 

ಇದನ್ನೂ ಓದಿ- ಒಂದೂವರೆ ವರ್ಷ ಈ ರಾಶಿಯವರಿಗೆ ರಾಹುವೇ ಶ್ರೀ ರಕ್ಷೆ !  ಧನಿಕರಾಗುವ ಯೋಗ   

ಕರ್ಕಾಟಕ ರಾಶಿ: 
ಚಂದ್ರನ ಅಧಿಪತಿ ರಾಶಿಯಾದ ಕರ್ಕಾಟಕ ರಾಶಿಯಲ್ಲಿಯೇ ಶುಕ್ರನು ಸಂಚರಿಸುವುದರಿಂದ  ಈ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಶುಕ್ರ ರಾಶಿ ಪರಿವರ್ತನೆಯ ಪರಿಣಾಮವಾಗಿ ಕರ್ಕಾಟಕ ರಾಶಿಯವರು ಉದ್ಯೋಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಯೋಗವೂ ಇದೆ. ನಿಮ್ಮ ಗುಣ ಸ್ವಭಾವ, ಕೆಲಸದ ಮುಖಾಂತರ ಇತರರನ್ನು ನಿಮ್ಮತ್ತ ಆಕರ್ಷಿಸುವಿರಿ. ನಿಮ್ಮ ಮೃದುವಾದ ಮಾತು ಜನರನ್ನು ಎಲ್ಲರನ್ನೂ ಮೂಖ ವಿಸ್ಮಿತರನ್ನಾಗಿಸುತ್ತದೆ. 

ವೃಶ್ಚಿಕ ರಾಶಿ: 
ಶುಕ್ರ ರಾಶಿ ಪರಿವರ್ತನೆಯು ವೃಶ್ಚಿಕ ರಾಶಿಯವರಿಗೂ ಕೂಡ ಅತ್ಯುತ್ತಮ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಕುಟುಂಬದಲ್ಲಿ, ವೃತ್ತಿ ವ್ಯವಹಾರದಲ್ಲಿ ಹೊಸ ಜವಾಬ್ಧಾರಿಗಳು ನಿಮ್ಮ ಹೆಗಲೇರಲಿದೆ. ಈ ಸಮಯದಲ್ಲಿ ನೀವು ಆಧ್ಯಾತ್ಮಕ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಯೂ ಇದೆ. ಇದಲ್ಲದೆ, ನೀವು ಭೂಮಿ, ಹೊಸ ವಾಹನವನ್ನು ಸಹ ಖರೀದಿಸುವ ಯೋಗವಿದೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ತುಂಬಾ ಅದೃಷ್ಟದ ಸಮಯ ಎಂದು ಸಾಬೀತು ಪಡಿಸಲಿದೆ. 

ಇದನ್ನೂ ಓದಿ- ಮುಂದಿನ ಒಂದೂವರೆ ತಿಂಗಳು ಈ ರಾಶಿಯವರ ಅದೃಷ್ಟ ತಡೆಯುವವರೇ ಇಲ್ಲ ! ಇಟ್ಟ ಹೆಜ್ಜೆಗೆ ಸೋಲೇ ಇಲ್ಲ 

ಮೀನ ರಾಶಿ: 
ಶುಕ್ರ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೂ ಕೂಡ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ವಿವಾಹಿತರಿಗೆ ಸಂತಾನ ಯೋಗವಿದೆ. ಹೊಸ ಉದ್ಯೋಗಕ್ಕಾಗಿ ಬಯಸುವವರಿಗೂ ಉತ್ತಮ ಸಮಯ ಇದಾಗಿದೆ. ಒಂದರ್ಥದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ನಿಮ್ಮ ಬಹು ದಿನಗಳ ಕನಸು ಈ ಸಮಯದಲ್ಲಿ ನನಸಾಗಲಿದೆ. ಈ ಸಂದರ್ಭದಲ್ಲಿ ನೀವು ಹೊಸ ಜನರನ್ನು ಭೇಟಿ ಆಗುವ ಸಾಧ್ಯತೆ ಇದ್ದು ಭವಿಷ್ಯದಲ್ಲಿ ಇವರು ನಿಮಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸಲಿದ್ದಾರೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News