Vastu Tips: ಗ್ರಹ ದೋಷಕ್ಕೆ ಕಾರಣವಾಗುವ ಈ ಹಳೆಯ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಡಲೇಬಾರದು

Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಕೆಲವು ಹಳೆಯ, ಬಳಕೆಯಾಗದ ವಸ್ತುಗಳಿಂದ ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ. ಮಾತ್ರವಲ್ಲ, ಇಂತಹ ವಸ್ತುಗಳು ಮನೆಯಲ್ಲಿದ್ದರೆ ಕೆಲವು ಗ್ರಹಗಳ ದೋಷವೂ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಮನೆಯಲ್ಲಿ ಎಂತಹ ವಸ್ತುಗಳನ್ನು ಇಡಬೇಕು? ಯಾವ ರೀತಿಯ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.  

Written by - Yashaswini V | Last Updated : Dec 5, 2022, 03:23 PM IST
  • ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ಮನೆಯಲ್ಲಿರುವ ವಸ್ತುಗಳು ಮನೆಗೆ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯನ್ನು ತರುತ್ತವೆ.
  • ಮಾತ್ರವಲ್ಲ, ಮನೆಯ ಸುಖ-ಶಾಂತಿಗೂ ಮನೆಯಲ್ಲಿರುವ ವಸ್ತುಗಳಿಗೂ ಒಂದಕ್ಕೊಂದು ಸಂಬಂಧವಿದೆ.
  • ಕೆಲವು ವಸ್ತುಗಳನ್ನು ಮನೆಯಲ್ಲಿಡುವುದು ಅಮಂಗಳಕರ. ಇವುಗಳಿಂದ ಗ್ರಹ ದೋಷಗಳು ಕೂಡ ಉಂಟಾಗಬಹುದು
Vastu Tips: ಗ್ರಹ ದೋಷಕ್ಕೆ ಕಾರಣವಾಗುವ ಈ ಹಳೆಯ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಡಲೇಬಾರದು title=
Vastu Tips

Vastu Tips: ನಮ್ಮಲ್ಲಿ ಕೆಲವರು ತಾವು ಕೆಲವು ವಸ್ತುಗಳನ್ನು ಬಳಸದಿದ್ದರೂ ಕೂಡ ಯಾವುದೋ ಒಂದು ಕಾರಣಕ್ಕೆ ಅವುಗಳನ್ನು ಬಿಸಾಡದೆ ಹಾಗೆಯೇ ಮನೆಯಲ್ಲಿ ಇಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಹಳೆಯ, ಮುರುಕಲು ವಸ್ತುಗಳು ಹಲವು ರೀತಿಯ ಸಮಸ್ಯೆಗಳನ್ನು ಉಂಟು ಮಾಡಬಲ್ಲವು. ಮನೆಯಲ್ಲಿ ನಕಾರಾತ್ಮಕತೆಯನ್ನು ಹರಡಿ, ಮನೆಯ ಸುಖ-ಶಾಂತಿ, ನೆಮ್ಮದಿಯನ್ನು ಕಸಿದುಕೊಳ್ಳಬಹುದು ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ಮನೆಯಲ್ಲಿರುವ ವಸ್ತುಗಳು ಮನೆಗೆ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಮಾತ್ರವಲ್ಲ, ಮನೆಯ ಸುಖ-ಶಾಂತಿಗೂ ಮನೆಯಲ್ಲಿರುವ ವಸ್ತುಗಳಿಗೂ ಒಂದಕ್ಕೊಂದು ಸಂಬಂಧವಿದೆ. ಕೆಲವು ವಸ್ತುಗಳನ್ನು ಮನೆಯಲ್ಲಿಡುವುದು ಅಮಂಗಳಕರ. ಇವುಗಳಿಂದ ಗ್ರಹ ದೋಷಗಳು ಕೂಡ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮನೆಯಲ್ಲಿ ಎಂತಹ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...

ಮನೆಯಲ್ಲಿರುವ ಈ ಹಳೆಯ ವಸ್ತುಗಳಿಂದ ಗ್ರಹ ದೋಷದ ಜೊತೆಗೆ ನಕಾರಾತ್ಮಕ ಶಕ್ತಿಯೂ ಹರಡುತ್ತದೆ, ಎಚ್ಚರ!
ತುಕ್ಕು ಹಿಡಿದ ಪದಾರ್ಥಗಳು:

ಸಾಮಾನ್ಯವಾಗಿ, ಉಪಯೋಗಕ್ಕೆ ಬಾರದ ಹಳೆ ಕಬ್ಬಿಣ ಅಥವಾ ಉಕ್ಕಿನ ವಸ್ತುಗಳನ್ನು ಮನೆಯ ಸ್ಟೋರ್ ರೂಂನಲ್ಲಿ ಇಡಲಾಗುತ್ತದೆ. ಆದರೆ, ಬಹಳ ದಿನಗಳವರೆಗೆ ಕಬ್ಬಿಣ ಅಥವಾ ಉಕ್ಕಿನ ವಸ್ತುಗಳನ್ನು ಬಳಸದೆ ಹಾಗೆಯೇ ಇದುವುದರಿಡ್ನ ಅವು ತುಕ್ಕು ಹಿಡಿಯುತ್ತವೆ. ಇಂಥ ವಸ್ತುಗಳು ಮನೆಯಲ್ಲಿ ಜಗಳಕ್ಕೆ ನಾಂದಿಯಾಡುತ್ತವೆ. ಇದಲ್ಲದೆ, ಮನೆಯಲ್ಲಿರುವ ತುಕ್ಕು ಹಿಡಿದ ಕಬ್ಬಿಣ, ಉಕ್ಕಿನ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ, ವಾಸ್ತು ಪ್ರಕಾರ, ಯಾವುದೇ ಕಾರಣಕ್ಕೂ ಮನೆಯಲ್ಲಿ ಉಪಯೋಗಕ್ಕೆ ಬಾರದ, ಹಾಳಾಗಿರುವ ಕಬ್ಬಿಣ ಅಥವಾ ಉಕ್ಕಿನ ವಸ್ತುಗಳನ್ನು ಇಡಲೇಬಾರದು.

ಇದನ್ನೂ ಓದಿ- Budh Gochar Effect: ಇನ್ನು 24ಗಂಟೆಗಳಲ್ಲಿ ಈ ನಾಲ್ಕು ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

ಹಿತ್ತಾಳೆ ಪಾತ್ರೆಗಳು:
ಕೆಲವರ ಮನೆಯಲ್ಲಿ ಹಿರಿಯರಿಂದ ಕೊಡುಗೆಯಾಗಿ ಬಂದಿರುವುದು ಅಥವಾ ಹಿರಿಯರ ನೆನಪಿಗಾಗಿ ಇರುವ ಪಾತ್ರೆಗಳು ಎಂದು ಹೇಳಿ ಹಳೆಯ ಹಿತ್ತಾಳೆಯ ಪಾತ್ರೆಗಳನ್ನು ಸಂಗ್ರಹಿಸಿಡುತ್ತಾರೆ. ಆದರೆ, ಅವುಗಳನ್ನು ಬಳಸುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಕತ್ತಲೆಯಲ್ಲಿರುವ ಹಿತ್ತಾಳೆ ಪಾತ್ರೆಗಳಲ್ಲಿ ಶನಿ ದೇವ ನೆಲೆಸಿರುತ್ತಾನೆ. ಹಾಗಾಗಿ, ಕತ್ತಲೆ ಕೋಣೆಯಲ್ಲಿ ಇರಿಸಲಾಗಿರುವ ಹಿತ್ತಾಳೆ ಪಾತ್ರೆಗಳು ಶನಿ ದೋಷಕ್ಕೆ ಕಾರಣವಾಗಬಹುದು ಎನ್ನಲಾಗುವುದು.

ರಾಹು ಮತ್ತು ಶನಿ ದೋಷಕ್ಕೆ ಕಾರಣವಾಗುತ್ತೆ ನಿಮ್ಮ ಮನೆಯಲ್ಲಿರುವ ಇಂತಹ ವಸ್ತು:
ನಮ್ಮಲ್ಲಿ ಕೆಲವರು ಹೊಲಿಗೆ ಕಲಿಯಲು, ಇಲ್ಲವೇ ಹಳೆಯ ಬಟ್ಟೆಗಳಿಗೆ ಹೊಲಿಗೆ ಹಾಕುವ ಸಲುವಾಗಿ ಹೊಲಿಗೆ ಯಂತ್ರಗಳನ್ನು ಖರೀದಿಸುತ್ತಾರೆ. ಆದರೆ, ಕಾಲಾನಂತರದಲ್ಲಿ ಅದನ್ನು ಬಳಸದೆ ಹಾಗೆಯೇ ಅಟ್ಟದ ಮೇಲೆ ಹಾಕಿರುತ್ತಾರೆ. ವಾಸ್ತು ಪ್ರಕಾರ, ಇಂತಹ, ಯಂತ್ರಗಳಿಂದ ಮನೆಗೆ ನಕಾರಾತ್ಮಕತೆ ಪ್ರವೇಶಿಸುತ್ತದೆ. ಮಾತ್ರವಲ್ಲ, ಈ ಹೊಲಿಗೆ ಯಂತ್ರಗಳು ರಾಹು ಮತ್ತು ಶನಿ ದೋಷಕ್ಕೂ ಕಾರಣವಾಗಬಹುದು.

ಇದನ್ನೂ ಓದಿ- ಮಂಗಳ, ಶನಿ, ರಾಹು-ಕೇತು ಗ್ರಹ ದೋಷ ನಿವಾರಣೆಗೆ ಒಂದೇ ರಾಮಬಾಣ ಕಣ್ಕಪ್ಪು!

ಹಳೆಯ ಕೊಳಕು ಹಾಸಿಗೆ:
ಮದುವೆಯ ನೆನಪು, ಇಲ್ಲವೇ ಇನ್ನಾವುದೇ ಕಾರಣದಿಂದಾಗಿ ಕೆಲವರು ಹಾಸಿಗೆಯನ್ನು ಹಲವು ವರ್ಷಗಳವರೆಗೆ ಸುರಕ್ಷಿತವಾಗಿ ಇಡುತ್ತಾರೆ. ಆದರೆ, ಅವುಗಳನ್ನು ಬಳಸುವುದಿಲ್ಲ. ಬಳಸದೆ ಹಾಗೆಯೇ ಮೂಟೆ ಕಟ್ಟಿಟ್ಟ ಹಾಸಿಗೆಯಲ್ಲಿ ಕಾಲಾನಂತರದಲ್ಲಿ ಕೀಟಗಳು ಉತ್ಪತ್ತಿಯಾಗಿ ಸೋಂಕಿಗೂ ಕಾರಣವಾಗಬಹುದು. ಇದು ಮನೆಯಲ್ಲಿ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಬುಧ ಗ್ರಹ ದೋಷಕ್ಕೂ ಕಾರಣವಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News