ಮಹಾಶಿವರಾತ್ರಿಯಂದು ರೂಪುಗೊಳ್ಳುವ ತ್ರಿಗ್ರಾಹಿ ಯೋಗ ಧನಿಕರನ್ನಾಗಿಸುವುದು ಈ ರಾಶಿಯವರನ್ನು

ಈ ದಿನ ಶಿವನೊಂದಿಗೆ ಪಾರ್ವತಿ ದೇವಿಯನ್ನು ಕೂಡಾ ಪೂಜಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿಯಂದು ಅದ್ಭುತ ತ್ರಿಗ್ರಾಹಿ ಯೋಗ ನಿರ್ಮಾಣವಾಗುತ್ತಿದೆ. 

Written by - Ranjitha R K | Last Updated : Feb 8, 2023, 12:40 PM IST
  • ಈ ದಿನ ಶಿವನೊಂದಿಗೆ ಪಾರ್ವತಿ ದೇವಿಯನ್ನು ಕೂಡಾ ಪೂಜಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿಯಂದು ಅದ್ಭುತ ತ್ರಿಗ್ರಾಹಿ ಯೋಗ ನಿರ್ಮಾಣವಾಗುತ್ತಿದೆ.
ಮಹಾಶಿವರಾತ್ರಿಯಂದು ರೂಪುಗೊಳ್ಳುವ ತ್ರಿಗ್ರಾಹಿ ಯೋಗ ಧನಿಕರನ್ನಾಗಿಸುವುದು ಈ ರಾಶಿಯವರನ್ನು  title=

ಬೆಂಗಳೂರು : ಹಿಂದೂ ಧರ್ಮದಲ್ಲಿ ಶಿವನಿಗೆ ಲಕ್ಷಾಂತರ ಭಕ್ತರಿದ್ದಾರೆ.    ಶಿವನ ಆಶೀರ್ವಾದಕ್ಕಾಗಿ ಸಾಕಷ್ಟು ಪೂಜೆ  ಪುನಸ್ಕಾರಗಳನ್ನು ಮಾಡುತ್ತಾ ಇರುತ್ತಾರೆ. ಮಹಾಶಿವರಾತ್ರಿ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿ ಫೆಬ್ರವರಿ 18 ರಂದು ಬರುತ್ತದೆ. ಈ ದಿನದಂದು ಶಿವ ಪಾರ್ವತಿಯ ವಿವಾಹ  ನೆರವೇರಿತ್ತು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನ ಶಿವನೊಂದಿಗೆ ಪಾರ್ವತಿ ದೇವಿಯನ್ನು ಕೂಡಾ ಪೂಜಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿಯಂದು ಅದ್ಭುತ ತ್ರಿಗ್ರಾಹಿ ಯೋಗ ನಿರ್ಮಾಣವಾಗುತ್ತಿದೆ. 

ತ್ರಿಗ್ರಾಹಿ ಯೋಗವು ಹೇಗೆ ರೂಪುಗೊಳ್ಳುತ್ತದೆ? :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 17 ರಂದು ಶನಿಯು ತನ್ನ ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಫೆಬ್ರವರಿ 13 ರಂದು ಗ್ರಹಗಳ ರಾಜನಾದ ಸೂರ್ಯನೂ ಕುಂಭ ರಾಶಿಯಲ್ಲಿಯೇ ಇರಲಿದ್ದಾನೆ. ಮಹಾಶಿವರಾತ್ರಿಯ ದಿನದಂದು, ಅಂದರೆ ಫೆಬ್ರವರಿ 18 ರಂದು, ಚಂದ್ರ ಕೂಡಾ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಈ ವಿಶೇಷ ದಿನದಂದು ತ್ರಿಗ್ರಾಹಿ ಯೋಗವು ರೂಪುಗೊಳ್ಳಲಿದೆ. ಕುಂಭ ರಾಶಿಯಲ್ಲಿ ಶನಿ, ಸೂರ್ಯ ಮತ್ತು ಚಂದ್ರರ ಉಪಸ್ಥಿತಿಯು ಅನೇಕ ರಾಶಿಯವರ ಜೀವನವನ್ನು ಬೆಳಗಲಿದೆ. 

ಇದನ್ನೂ ಓದಿ : Guru Gochar 2023: 12 ವರ್ಷಗಳ ನಂತರ, ಮಂಗಳನ ರಾಶಿಯಲ್ಲಿ ಗುರು ಗೋಚರ! ಗುರುಬಲದಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ

ಮೇಷ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇಷ ರಾಶಿಯವರ ಮೇಲೆ ಶಿವನ ಆಶೀರ್ವಾದ ಸ್ವಲ್ಪ ಹೆಚ್ಚೇ ಇರುತ್ತದೆ. ಇದು ಶಿವನ ನೆಚ್ಚಿನ ರಾಶಿಗಳಲ್ಲಿ ಒಂದು. ಮಹಾಶಿವರಾತ್ರಿಯಂದು ರೂಪುಗೊಂಡ ತ್ರಿಗ್ರಾಹಿ ಯೋಗವು ಮೇಷ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಇವರ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ. ಇಷ್ಟೇ ಅಲ್ಲ, ಈ ಮಂಗಳಕರ ದಿನದಂದು ಶಿವನ ಆರಾಧನೆ ಮತ್ತು ಜಲಾಭಿಷೇಕ ಮಾಡಿದರೆ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗಲಿದೆ.  

ವೃಶ್ಚಿಕ ರಾಶಿ : 
ಮೇಷ ರಾಶಿಯವರಂತೆ ವೃಶ್ಚಿಕ ರಾಶಿಯವರ ಮೇಲೆ ಕೂಡಾ ಈಶ್ವರನ    ವಿಶೇಷ ಅನುಗ್ರಹವಿರುತ್ತದೆ. ಈ ರಾಶಿಯವರ ಅಧಿಪತಿ ಗ್ರಹ ಮಂಗಳ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಶಿವರಾತ್ರಿ ದಿನ ಶಿವಲಿಂಗಕ್ಕೆ ನೀರನ್ನು ಅರ್ಪಿಸುವುದರಿಂದ ಈ ರಾಶಿಯ ಜನರ ಅದೃಷ್ಟ ಬದಲಾಗಲಿದೆ.  ಮತ್ತೊಂದೆಡೆ, ಶಿವರಾತ್ರಿಯಂದು ಮಹಾದೇವನನ್ನು ಪೂಜಿಸುವುದರಿಂದ,  ಆವರಿಸಿರುವ ಎಲ್ಲಾ ರೀತಿಯ ಭಯವು ಕೊನೆಗೊಳ್ಳುತ್ತದೆ. ನಮ್ಮೊಳಗೇ ಹೊಸ ಶಕ್ತಿಯನ್ನು ಹುಟ್ಟಿ ಹಾಕುತ್ತದೆ.  

ಮಕರ ರಾಶಿ : 
ಶನಿ ದೇವನನ್ನು ಮಕರ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ.  ಶನಿ ದೇವನು ಶಿವನ ಪರಮ ಭಕ್ತ ಎಂದು ಕೂಡಾ ಪುರಾಣದಲ್ಲಿ ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಾಶಿವರಾತ್ರಿಯಂದು ಶನಿ, ಸೂರ್ಯ ಮತ್ತು ಚಂದ್ರರ ಸಂಯೋಜನೆಯು ಮಕರ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಹಣಡ ಹರಿವು ಚೆನ್ನಾಗಿರುತ್ತದೆ. ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.  ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು.

ಇದನ್ನೂ ಓದಿ : Morning Tips: ಬೆಳಗ್ಗೆ ಎದ್ದ ಕೂಡಲೇ ಅಪ್ಪಿತಪ್ಪಿಯೂ ಕನ್ನಡಿ ನೋಡಬೇಡಿ.!

ಕುಂಭ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿ ದೇವ ಮಕರ ರಾಶಿಯಂತೆ ಕುಂಭ ರಾಶಿಯ ಅಧಿಪತಿ ಕೂಡಾ ಹೌದು. ಕುಂಭ ರಾಶಿಯಲ್ಲೂ ತ್ರಿಗ್ರಾಹಿ ಯೋಗ  ನಿರ್ಮಾಣವಾಗಲಿದೆ. ಈ ರಾಶಿಯವರಿಗೆ ಈ ಯೋಗವು ತುಂಬಾ ಮಂಗಳಕರವಾಗಿರುತ್ತದೆ. ಈ ದಿನ ಶಿವನ ಜಲಾಭಿಷೇಕದ ಜೊತೆಗೆ ದಾನ ಮಾಡುವುದರಿಂದ ವಿಶೇಷ ಲಾಭಗಳಾಗುತ್ತವೆ. ಇದರೊಂದಿಗೆ, ವ್ಯಕ್ತಿಯು  ತಾನು ಅಂದುಕೊಂಡ ಕೆಲಸವನ್ನು ಸಾಧಿಸುವುದು ಸಾಧ್ಯವಾಗುತ್ತದೆ.  ವೃತ್ತಿ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕವಾಗಿ ಶುಭ ಫಲಿತಾಂಶಗಳು ಕಂಡುಬರುತ್ತವೆ. 

 

(ಸೂಚನೆಇಲ್ಲಿ ನೀಡಲಾದ ಲೇಖನವು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News