Saturn Set 2024 : ನವಗ್ರಹಗಳ ಪೈಕಿ ಜನರಿಗೆ ಶನಿ ಗ್ರಹವೆಂದರೆ ತುಸು ಹೆಚ್ಚೇ ಭಯ. ಶನಿ ದೇವ ನಮ್ಮ ಕಾರ್ಯಕ್ಕೆ ಅನುಸಾರವಾಗಿ ಫಲವನ್ನು ನೀಡುತ್ತಾನೆ. ನಮ್ಮ ಪ್ರತಿಯೊಂದು ಕಾರ್ಯದ ಲೆಕ್ಕವೂ ಶನಿ ದೇವನ ಬಳಿ ಇರುತ್ತದೆಯಂತೆ. ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ ಕಷ್ಟ ನಷ್ಟ ನೋವು ನಲಿವುಗಳನ್ನು ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ. ಶನಿಯು 11 ಫೆಬ್ರವರಿ 2024 ರಂದು ಸಂಜೆ 06:56 ಕ್ಕೆ ಕುಂಭ ರಾಶಿಯಲ್ಲಿ ಅಸ್ತಮಿಸುತ್ತಾನೆ. ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಮೇಷ ರಾಶಿ : ಶನಿಯು ಮೇಷ ರಾಶಿಯವರ ಹತ್ತನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಈ ಬಾರಿ ಶನಿ ಗ್ರಹ ಹನ್ನೊಂದನೇ ಮನೆಯಲ್ಲಿ ಅಸ್ತಮಿಸುತ್ತಿದ್ದಾನೆ. ಈ ಕಾರಣದಿಂದಾಗಿ,ಸಾಧನೆಯಲ್ಲಿ ವಿಳಂಬ ಉಂಟಾಗಬಹುದು.ವೃತ್ತಿಯ ದೃಷ್ಟಿಯಿಂದ ಇದು ಲಾಭದಾಯಕ ಸಮಯವಾಗಿರಲಿದೆ. ಜೀವನಶೈಲಿಯು ಪ್ರತಿಕೂಲ ಪರಿಣಾಮ ಬೀರುತ್ತದೆ.
ವೃಷಭ ರಾಶಿ : ಷಭ ರಾಶಿಯವರ ಒಂಬತ್ತು ಮತ್ತು ಹತ್ತನೇ ಮನೆಯ ಅಧಿಪತಿ ಶನಿ. ಈ ರಾಶಿಯ ಹತ್ತನೇ ಮನೆಯಲ್ಲಿ ಅಸ್ತಮಿಸುತ್ತಿದ್ದಾನೆ.ಇದರಿಂದಾಗಿ ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ಮಾಡುವ ಕೆಲಸಗಳಲ್ಲಿ ಪೂರ್ಣ ವಿಶ್ವಾಸ ಇರುತ್ತದೆ.
ಇದನ್ನೂ ಓದಿ : Astro Tips: ಹೊಸ ಕಾರಿನ ಕೆಳಗೆ ನಿಂಬೆ ಹಣ್ಣನ್ನು ಏಕೆ ಇಡಲಾಗುತ್ತದೆ..? ಹಿಂದಿನ ಸತ್ಯ ತಿಳಿಯಿರಿ..
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಶನಿಯು ಎಂಟು ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದ್ದಾನೆ. ಈ ರಾಶಿಯ ಒಂಬತ್ತನೇ ಮನೆಯಲ್ಲಿ ಶನಿಯು ಅಸ್ತಮಿಸುತ್ತಿದ್ದಾನೆ. ಹೀಗಾಗಿ ಅದೃಷ್ಟ ಕೈ ಹಿಡಿಯಲಿದೆ. ಮಾತನಾಡುವಾಗ ಸಮತೋಲನವನ್ನು ಕಾಪಾಡಿಕೊಳ್ಳಿ.ಉದ್ಯೋಗಸ್ಥರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಕರ್ಕಾಟಕ: ಶನಿದೇವ ಕರ್ಕಾಟಕ ರಾಶಿಯವರ ಏಳನೇ ಮತ್ತು ಎಂಟನೇ ಮನೆಯ ಅಧಿಪತಿ. ಕರ್ನಾಕಟ ರಾಶಿಯವರು ಅನಿರೀಕ್ಷಿತ ಮೂಲಗಳಿಂದ ಹಣವನ್ನು ಪಡೆಯಬಹುದು. ಕುಟುಂಬದಲ್ಲಿ ವಿವಾದ ಏಳುವ ಸಾಧ್ಯತೆ ಇದೆ. ಆದ್ದರಿಂದ ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
ಸಿಂಹ ರಾಶಿ : ಸಿಂಹ ರಾಶಿಯವರಿಗೆ ಶನಿಯು ಆರು ಮತ್ತು ಏಳನೇ ಮನೆಯ ಅಧಿಪತಿ. ಮನಸ್ಸು ವಿಚಲಿತವಾಗಬಹುದು. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ತೆರಳುವ ಅವಕಾಶವಿದೆ.ಮಕ್ಕಳ ಬಗ್ಗೆ ಆತಂಕ ಹೆಚ್ಚಾಗಬಹುದು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಇದನ್ನೂ ಓದಿ : Rahu-Shukra Yuti 2024: 12 ವರ್ಷಗಳ ಬಳಿಕ ಮಹಾ ಯುತಿ, ಈ ರಾಶಿಯವರ ಮನೆ ಪ್ರವೇಶಿಸಲಿದ್ದಾಳೆ ಭಾಗ್ಯ ಲಕ್ಷ್ಮಿ
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಶನಿಯು ಐದು ಮತ್ತು ಆರನೇ ಮನೆಯ ಅಧಿಪತಿಯಾಗಿದ್ದು, ಆರನೇ ಮನೆಯಲ್ಲಿ ಅಸ್ತಮಿಸುತ್ತಿದ್ದಾನೆ. ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರವೃತ್ತಿಗಳು ಹೆಚ್ಚಾಗುತ್ತವೆ. ಸಂಸಾರದಲ್ಲಿ ನೆಮ್ಮದಿ, ಹೆಚ್ಚಲಿದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ನಷ್ಟವಾಗುವ ಸಂಭವವಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು.
ತುಲಾ ರಾಶಿ : ತುಲಾ ರಾಶಿಯವರಿಗೆ ಶನಿಯು ನಾಲ್ಕು ಮತ್ತು ಐದನೇ ಮನೆಯ ಅಧಿಪತಿಯಾಗಿದ್ದು ಐದನೇ ಮನೆಯಲ್ಲಿ ಅಸ್ತಮಿಸಲಿದ್ದಾನೆ. ಮಕ್ಕಳ ಬೆಳವಣಿಗೆಯ ಬಗ್ಗೆ ಚಿಂತೆ ಕಾಡಬಹುದು. ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಾಯಿಯ ಕಡೆಯಿಂದ ಹಣ ಬರುವ ಸಾಧ್ಯತೆಗಳಿವೆ.
ವೃಶ್ಚಿಕ ರಾಶಿ : ಶನಿಯು ಮೂರು ಮತ್ತು ನಾಲ್ಕನೇ ಮನೆಗಳಿಗೆ ಅಧಿಪತಿಯಾಗಿದ್ದು, ನಾಲ್ಕನೇ ಮನೆಯಲ್ಲಿ ಅಸ್ತಮಿಸುತ್ತಿದ್ದಾನೆ. ಇದರಿಂದಾಗಿ ನಿಮ್ಮ ಸೌಕರ್ಯಗಳು ಕಡಿಮೆಯಾಗಬಹುದು. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು.ಬೆನ್ನು ನೋವು ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.
ಧನು: ಶನಿಯು ಎರಡು ಮತ್ತು ಮೂರನೇ ಮನೆಯ ಅಧಿಪತಿಯಾಗಿದ್ದು ಮೂರನೇ ಮನೆಯಲ್ಲಿ ಅಸ್ತಮಿಸುತ್ತಿದ್ದಾನೆ. ಹಲ್ಲು ಮತ್ತು ಕಾಲುಗಳಲ್ಲಿ ನೋವಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಉದ್ಯೋಗದಲ್ಲಿ ಅಡೆತಡೆಗಳು ಉಂಟಾಗಬಹುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿವೆ.ಕಠಿಣ ಪರಿಶ್ರಮದ ಅಗತ್ಯವಿರುತ್ತದೆ.
ಇದನ್ನೂ ಓದಿ : Laxmi Narayan Yog: ಫೆಬ್ರವರಿ ತಿಂಗಳಿನಲ್ಲಿ ವಿಶೇಷ ಲಕ್ಷ್ಮೀ ನಾರಾಯಣ ಯೋಗ, 5 ರಾಶಿಯವರಿಗೆ ಸಿರಿವಂತರಾಗುವ ಯೋಗ
ಮಕರ ರಾಶಿ :ಮಕರ ರಾಶಿಯವರಿಗೆ ಶನಿಯು ಮೊದಲ ಮತ್ತು ಎರಡನೆಯ ಮನೆಯ ಅಧಿಪತಿಯಾಗಿದ್ದು, ಎರಡನೇ ಮನೆಯಲ್ಲಿ ಅಸ್ತಮಿಸಲಿದ್ದಾನೆ. ಈ ಕಾರಣದಿಂದಾಗಿ ಕುಟುಂಬ, ಸ್ನೇಹಿತರು ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ.ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಕಾಣುವಿರಿ. ಮಕ್ಕಳ ಸಂತಸದಲ್ಲಿ ಹೆಚ್ಚಳವಾಗಲಿದೆ.
ಕುಂಭ ರಾಶಿ : ಶನಿಯು ಮೊದಲ ಮತ್ತು ಹನ್ನೆರಡನೆಯ ಮನೆಯ ಅಧಿಪತಿಯಾಗಿದ್ದು ಅದು ಮೊದಲನೆಯ ಮನೆಯಲ್ಲಿ ಅಸ್ತಮಿಸುತ್ತಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವಿಶೇಷವಾಗಿ ನೀವು ಹಲ್ಲುನೋವು ಮತ್ತು ಕಣ್ಣಿನ ಸೋಂಕನ್ನು ಎದುರಿಸಬೇಕಾಗಬಹುದು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಿರಿ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುತ್ತದೆ.
ಮೀನ ರಾಶಿ : ಶನಿಯು ಹನ್ನೊಂದು ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿದ್ದು ಹನ್ನೆರಡನೇ ಮನೆಯಲ್ಲಿ ಅಸ್ತಮಿಸಲಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ.ಆದರೆ ಭವಿಷ್ಯದ ಚಿಂಟೆ ಕಾಡುವುದು. ಮಾನಸಿಕ ಶಾಂತಿಗಾಗಿ ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡಿಕೊಳ್ಳಿ. ವ್ಯಾಪಾರದಲ್ಲಿ ಲಾಭವಿದ್ದರೂ ಅದು ನಿಮ್ಮ ಕೈ ಸೇರುವುದು ವಿಳಂಬವಾಗುವ ಸಾಧ್ಯತೆ ಇದೆ. ಕಾಲುಗಳಲ್ಲಿ ನೋವು ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ವಿವಾದಗಳು ಉಂಟಾಗಬಹುದು. ಮಾತಿನ ಮೇಲೆ ನಿಯಂತ್ರಣವಿರಲಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.