ಬೆಂಗಳೂರು : ಕೆಲವರು ಪ್ರತಿಭೆಯ ಆಗರ ಎಂದು ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಪ್ರತಿಭೆ ಎನ್ನುವುದು ಅವರಲ್ಲಿ ತುಂಬಿ ತುಳುಕುತ್ತಿರುತ್ತದೆ. ಅವರ ಕಠಿಣ ಪರಿಶ್ರಮ ಮತ್ತು ಹೊಸ ವಿಷಯಗಳನ್ನು ಕಲಿಯುವ ಸಾಮರ್ಥ್ಯವೇ ಇದರ ಹಿಂದಿರುವ ಕಾರಣ. ಆದರೆ, ಜ್ಯೋತಿಷ್ಯದ ಪ್ರಕಾರ, ರಾಶಿ ಮತ್ತು ಜಾತಕದ ಗ್ರಹಗಳು ಕೂಡಾ ಇದಕ್ಕೆ ಕಾರಣವಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ಹುಟ್ಟುತ್ತಲೇ ಪ್ರತಿಭಾವಂತರಾಗಿರುತ್ತಾರೆ. ತಮ್ಮ ಪ್ರತಿಭೆಯ ಕಾರಣದಿಂದಲೇ ಅವರು ಜೀವನದಲ್ಲಿ ಅತ್ಯಂತ ವೇಗವಾಗಿ ಯಶಸ್ವಿಯಾಗುತ್ತಾರೆ, ಹಣ ಸಂಪಾದಿಸುತ್ತಾರೆ.
ಈ ರಾಶಿಯವರು ಬಹಳ ಪ್ರತಿಭಾವಂತರು :
ಮಿಥುನ ರಾಶಿ : ಮಿಥುನ ರಾಶಿಯವರು ಹುಟ್ಟಿನಿಂದಲೇ ಪ್ರತಿಭಾವಂತರಾಗಿರುತ್ತಾರೆ. ಈ ರಾಶಿಯ ಅಧಿಪತಿ ಬುಧ. ಈ ಕಾರಣದಿಂದಲೇ ಅವರ ಬುದ್ಧಿ ಉಳಿದವರಿಗಿಂತ ಚುರುಕಾಗಿರುತ್ತದೆ. ಅಲ್ಲದೆ ಮೀನ ರಾಶಿಯವರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಕಲಾ ಕ್ಷೇತ್ರದಲ್ಲಿ ಇವರಿಗೆ ಉತ್ತಮ ಹಿಡಿತವಿರುತ್ತದೆ. ಬರವಣಿಗೆಯ ಕ್ಷೇತ್ರದಲ್ಲಿದ್ದರೂ ತಮ್ಮ ಸಾಮರ್ಥ್ಯದಿಂದ ಯಶಸ್ಸು ಹೊಂದುತ್ತಾರೆ.
ಇದನ್ನೂ ಓದಿ : Guru Uday 2023: ಗುರು ಗ್ರಹದ ಉದಯದಿಂದ ಈ ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ
ಸಿಂಹ ರಾಶಿ : ಸಿಂಹ ರಾಶಿಯ ಜನರು ಪ್ರಚಂಡ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಅವರು ಅದ್ಭುತವಾದ ಆತ್ಮವಿಶ್ವಾಸ ಮತ್ತು ಪ್ರತಿಭೆಯುಳ್ಳವರಾಗಿರುತ್ತಾರೆ. ಇವರ ಈ ಗುಣಗಳಿಂದಾಗಿಯೇ, ಅವರು ಹೆಚ್ಚು ಜನಪ್ರಿಯವಾಗುತ್ತಾರೆ. ಏಕಕಾಲದಲ್ಲಿ ಅನೇಕ ಉದ್ಯೋಗಗಳು ಅಥವಾ ವ್ಯವಹಾರಗಳನ್ನು ಮಾಡುತ್ತಾರೆ. ಈ ರಾಶಿಯವರ ಈ ಗುಣಗಳಿಂದಾಗಿ ಬಹಳ ಬೇಗನೆ ಹೆಸರು ಮಾಡುತ್ತಾರೆ. ಹಣವನ್ನೂ ಸಂಪಾದಿಸುತ್ತಾರೆ.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಶ್ರಮಜೀವಿಗಳು. ಈ ರಾಶಿಯವರು ತಮ್ಮ ಕೆಲಸವನ್ನು ಇತರರಿಂದ ಮಾಡಿಸುವ ಅದ್ಭುತ ಗುಣವನ್ನು ಹೊಂದಿರುತ್ತಾರೆ. ತಮ್ಮ ಕೆಲಸವನ್ನು ಜಾಣತನದಿಂದ ಯಾರಿಂದಲಾದರೂ ಮಾಡಿಸಿ ಮುಗಿಸುತ್ತಾರೆ. ಇದಲ್ಲದೆ, ಅವರು ತುಂಬಾ ಪ್ರತಿಭಾವಂತರಾಗಿರುತ್ತಾರೆ. ಈ ಕಾರಣದಿಂದಾಗಿ, ತಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ.
ಇದನ್ನೂ ಓದಿ : ಭೂಮಿ, ವಾಹನ ಇತ್ಯಾದಿಗಳ ಖರೀದಿಗೆ ಅತ್ಯಂತ ಶುಭ ಯೋಗ ಇದು, ಕೇವಲ 7 ದಿನ ನಿರೀಕ್ಷಿಸಿ
ಮೀನ ರಾಶಿ : ಮೀನ ರಾಶಿಯವರು ಬುದ್ಧಿವಂತರು. ಅವರು ತಮ್ಮ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಆಧಾರದ ಮೇಲೆಯೇ ತಾವು ಕಂಡ ಕನಸುಗಳನ್ನು ಪೂರೈಸುತ್ತಾರೆ. ಅಲ್ಲದೆ ಜೀವನದಲ್ಲಿ ಸಾಕಷ್ಟು ಹೆಸರು ಮಾಡಿ ಹಣವನ್ನು ಗಳಿಸುತ್ತಾರೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.