Sun Transit: 2022ರ ಅಂತ್ಯದವರೆಗೆ ಈ ಜನರಿಗೆ ದಯೆ ತೋರುತ್ತಾನೆ ಸೂರ್ಯ ದೇವ

Sun Transit 2022: ನವೆಂಬರ್ 2022 ರಲ್ಲಿ, ಸೂರ್ಯನು ವೃಶ್ಚಿಕ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದರ ನಂತರ, ಈ ವರ್ಷದ ಕೊನೆಯ ಸೂರ್ಯನ ಸಂಕ್ರಮವು ಡಿಸೆಂಬರ್‌ನಲ್ಲಿ ಧನು ರಾಶಿಯಲ್ಲಿ ನಡೆಯಲಿದೆ. ಈ ಎರಡೂ ಸಾಗಣೆಗಳು ಕೆಲವು ರಾಶಿಚಕ್ರದ ಚಿಹ್ನೆಗಳಿಗೆ ಬಹಳ ಅದೃಷ್ಟವನ್ನು ತರಲಿವೆ. ಈ ಸಮಯದಲ್ಲಿ ಅವರು  ಉನ್ನತ ಸ್ಥಾನದ ಜೊತೆ ಕೈ ತುಂಬಾ ಹಣವನ್ನು ಗಳಿಸಲಿದ್ದಾರೆ. 

Written by - Yashaswini V | Last Updated : Nov 10, 2022, 08:07 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸಂಭವಿಸುವ ಈ ಸೂರ್ಯ ಸಂಕ್ರಮಣವು ಕೆಲವು ರಾಶಿಯವರಿಗೆ ಬಹಳ ಮಂಗಳಕರ ಫಲಿತಾಂಶಗಳನ್ನು ಹೊತ್ತು ತರಲಿದೆ.
  • 16 ನವೆಂಬರ್ 2022 ರಂದು, ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಬಳಿಕ, 16 ಡಿಸೆಂಬರ್ 2022 ರಂದು, ಸೂರ್ಯನು ಧನು ರಾಶಿಯಲ್ಲಿ ಸಂಚರಿಸಲಿದ್ದಾನೆ.
Sun Transit: 2022ರ ಅಂತ್ಯದವರೆಗೆ ಈ ಜನರಿಗೆ ದಯೆ ತೋರುತ್ತಾನೆ ಸೂರ್ಯ ದೇವ  title=
Sun Transit Effect

Sun Transit Effect on Zodiacs: 2022ರ ವರ್ಷವು ಕೊನೆಗೊಳ್ಳಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಸಮಯದಲ್ಲಿ ಗ್ರಹಗಳ ರಾಜ ಸೂರ್ಯ ದೇವನು ಎರಡು ಬಾರಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸಂಭವಿಸುವ ಈ ಸೂರ್ಯ ಸಂಕ್ರಮಣವು ಕೆಲವು ರಾಶಿಯವರಿಗೆ ಬಹಳ ಮಂಗಳಕರ ಫಲಿತಾಂಶಗಳನ್ನು ಹೊತ್ತು ತರಲಿದೆ. 16 ನವೆಂಬರ್ 2022 ರಂದು, ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬಳಿಕ, 16 ಡಿಸೆಂಬರ್ 2022 ರಂದು, ಸೂರ್ಯನು ಧನು ರಾಶಿಯಲ್ಲಿ ಸಂಚರಿಸಲಿದ್ದಾನೆ. ಸೂರ್ಯನ ಈ ಎರಡು ರಾಶಿಯ ಬದಲಾವಣೆಗಳು 3 ರಾಶಿಯ ಜನರಿಗೆ ವೃತ್ತಿ, ಹೊಸ ಉದ್ಯೋಗ ಮತ್ತು ಆರ್ಥಿಕ ಪ್ರಗತಿಯನ್ನು ನೀಡುತ್ತದೆ. ಇದರ ಪರಿಣಾಮವಾಗಿ ವರ್ಷಾಂತ್ಯದವರೆಗೆ ಈ ರಾಶಿಯವರಿಗೆ ಉನ್ನತ ಸ್ಥಾನದ ಜೊತೆ ಕೈ ತುಂಬಾ ಹಣ ಪ್ರಾಪ್ತಿಯಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

2022ರ ಅಂತ್ಯದವರೆಗೆ ಈ ಜನರಿಗೆ ದಯೆ ತೋರುತ್ತಾನೆ ಸೂರ್ಯ ದೇವ:-
ವೃಷಭ ರಾಶಿ:
ನವೆಂಬರ್ 2022 ಮತ್ತು ಡಿಸೆಂಬರ್ 2022 ರ ಸೂರ್ಯನ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತದೆ. ವಿಶೇಷವಾಗಿ ಉದ್ಯಮಿಗಳಿಗೆ ನವೆಂಬರ್‌ನಲ್ಲಿ ಲಾಭವಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಮುಂದುವರಿಯಲು ಹೊಸ ಅವಕಾಶಗಳು ಕಂಡುಬರುತ್ತವೆ. ಆದಾಯ ಹೆಚ್ಚಾಗಲಿದ್ದು, ಆರ್ಥಿಕ ತೊಂದರೆಗಳು ನಿವಾರಣೆ ಆಗಲಿವೆ. ಅದೇ ಸಮಯದಲ್ಲಿ, ಡಿಸೆಂಬರ್‌ನಲ್ಲಿ ಹಣದ ಲಾಭವೂ ಇರುತ್ತದೆ. ಇದರೊಂದಿಗೆ, ನೀವು ಉಳಿತಾಯದಲ್ಲಿಯೂ ಯಶಸ್ವಿಯಾಗುತ್ತೀರಿ. ಒಟ್ಟಾರೆಯಾಗಿ, ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ ಮತ್ತು ನೀವು ವೃತ್ತಿಜೀವನದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಬಹುದು. 

ಇದನ್ನೂ ಓದಿ- Budhaditya Yog: ಸೂರ್ಯ-ಬುಧ ಯುತಿ, ನವೆಂಬರ್ 16ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ

ಕರ್ಕಾಟಕ ರಾಶಿ:  ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರವು ಕರ್ಕಾಟಕ ರಾಶಿಯವರಿಗೆ ಪರೀಕ್ಷೆ-ಸಂದರ್ಶನದಲ್ಲಿ ಯಶಸ್ಸನ್ನು ತರುತ್ತದೆ. ಸ್ಪರ್ಧೆಯಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಸಿಗಲಿದೆ. ಮತ್ತೊಂದೆಡೆ, ಡಿಸೆಂಬರ್ ಮಾಸದಲ್ಲಿ ಧನು ರಾಶಿಯಲ್ಲಿ ಸೂರ್ಯನ ಸಂಚಾರದಿಂದಾಗಿ ನಿಮ್ಮ ಅದೃಷ್ಟವು ಸೂರ್ಯನಂತೆ ಹೊಳೆಯಲಿದೆ.  ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕಠಿಣ ಪರಿಶ್ರಮಕ್ಕೆ ಪೂರ್ಣ ಫಲ ಸಿಗಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. 

ಇದನ್ನೂ ಓದಿ- ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದ್ದಾನೆ ಶುಕ್ರ

ಕನ್ಯಾ ರಾಶಿ: ವೃಶ್ಚಿಕ ರಾಶಿಯಲ್ಲಿ ಸೂರ್ಯನ ಪ್ರವೇಶವು ಈ ರಾಶಿಯವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವೃತ್ತಿಯಲ್ಲಿ ದೊಡ್ಡ ಪ್ರಗತಿಯನ್ನು ನೀಡಬಹುದು. ಉದ್ಯೋಗಾಕಾಂಕ್ಷಿಗಳು ಉತ್ತಮ ಸಾಧನೆಗಳನ್ನು ಪಡೆಯಬಹುದು. ಆದಾಯ ಹೆಚ್ಚಾಗಬಹುದು. ಅದೇ ಸಮಯದಲ್ಲಿ, ಡಿಸೆಂಬರ್‌ನಲ್ಲಿ ಧನು ರಾಶಿಯಲ್ಲಿ ಸೂರ್ಯ ದೇವರ ಸಂಕ್ರಮಣವು ಕನ್ಯಾ ರಾಶಿಯವರಿಗೆ ಬಹಳ ಫಲಪ್ರದವಾಗಿರುತ್ತದೆ. ಈ ಸಮಯದಲ್ಲಿ ನೀವು ಕೈ ತುಂಬಾ ಹಣ ಗಳಿಸುತ್ತೀರಿ. ತೀರ್ಥಯಾತ್ರೆ ಹೋಗುವ ಅವಕಾಶವೂ ಇದೆ. ತಂದೆಯ ನೆರವಿನಿಂದ ದೊಡ್ಡ ಕೆಲಸವೊಂದು ಪೂರ್ಣಗೊಳ್ಳಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News