ಮನೆಯಲ್ಲಿ ಜೇಡರ ಬಲೆ ಇದ್ದರೆ ಶುಭವೋ... ಅಶುಭವೋ..? ವಾಸ್ತು ಶಾಸ್ತ್ರ ಏನ್‌ ಹೇಳುತ್ತೆ ಗೊತ್ತೆ?

Spider web in house meaning : ಮನೆಯಲ್ಲಿ ಪಕ್ಷಿಗಳು ಗೂಡನ್ನು ಕಟ್ಟುತ್ತವೆ. ಕೆಲವೊಂದಿಷ್ಟು ಜನ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲವೊಂದಿಷ್ಟು ಪಕ್ಷಿಗಳು ಮನೆಯಲ್ಲಿ ವಾಸಿದರೆ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಜೇಡರ ಹುಳು ಮನೆಯಲ್ಲಿ ಬಲೆ ಕಟ್ಟಿದರೆ ಅದು ಒಳ್ಳೆಯದಾ ಅಥವಾ ಕೆಟ್ಟದ್ದಾ..? ಎನ್ನುವ ಸಂಶಗಳು ಸಹ ಹಲವರ ತಲೆಯಲ್ಲಿವೆ..

Written by - Krishna N K | Last Updated : Apr 25, 2024, 10:39 PM IST
    • ಮನೆಯಲ್ಲಿ ಜೇಡನ ಬಲೆ ಇದ್ದರೆ ತೆಗೆದುಹಾಕಬೇಕು.
    • ಜೇಡರ ಬಲೆಗಳನ್ನು ಹೆಚ್ಚು ದಿನಗಳವರೆಗೆ ಇರಲು ಬಿಡಬಾರದು.
    • ಮನೆಯಲ್ಲಿ ಅಶಾಂತಿ, ಕುಟುಂಬದಲ್ಲಿ ಕಲಹಗಳು ಉಂಟುಮಾಡಬಹುದು.
ಮನೆಯಲ್ಲಿ ಜೇಡರ ಬಲೆ ಇದ್ದರೆ ಶುಭವೋ... ಅಶುಭವೋ..? ವಾಸ್ತು ಶಾಸ್ತ್ರ ಏನ್‌ ಹೇಳುತ್ತೆ ಗೊತ್ತೆ? title=

Vastu tips in Kannada : ನೀವು ಯಾವಾಗಲೂ ಮನೆಯಲ್ಲಿ ಜೇಡನ ಬಲೆ ಇದ್ದರೆ ತೆಗೆದುಹಾಕಬೇಕು. ಮನೆಯ ಮೇಲ್ಛಾವಣಿಯ ಮೂಲೆಗಳಲ್ಲಿ ಜೇಡರ ಬಲೆಗಳನ್ನು ಹೆಚ್ಚು ದಿನಗಳವರೆಗೆ ಇರಲು ಬಿಡಬಾರದು. ಇದರಿಂದ ಸಮಯಕ್ಕೆ ಸರಿಯಾಗಿ ಹಣ ಬರುವುದಿಲ್ಲ. ಇದಲ್ಲದೆ, ಮನೆಯಲ್ಲಿ ಅಶಾಂತಿ, ಕುಟುಂಬದಲ್ಲಿ ಕಲಹಗಳು ಉಂಟುಮಾಡಬಹುದು.

ಇದಲ್ಲದೆ, ಮನೆಯಲ್ಲಿ ಜೇಡರ ಬಲೆ ಇದ್ದರೆ ನೀವು ಹಣದ ಕೊರತೆಯನ್ನು ಎದುರಿಸಬೇಕಾಗಬಹುದು. ಕೆಲಸದಲ್ಲಿ ಅಡೆತಡೆಗಳು ಉಂಟಾಗಲಿವೆ. ಕುಟುಂಬ ಸದಸ್ಯರೊಂದಿಗೆ ಹತಾಶೆ ಮತ್ತು ನಕಾರಾತ್ಮಕತೆ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ಮನೆಯಲ್ಲಿರುವ ಜೇಡರ ಬಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. 

ಇದನ್ನೂ ಓದಿ:ಈ 5 ರಾಶಿಗಳಿಗೆ ಅಕ್ಷಯ ತೃತೀಯ ತರಲಿದೆ ಪರಮಾದೃಷ್ಟ: ಹಗಲಿರುಳೆನ್ನದೆ ಸುರಿಯಲಿದೆ ಧನಕನಕದ ಮಳೆ!

ವಾಸ್ತು ನಿಯಮಗಳ ಪ್ರಕಾರ, ಮಲಗುವ ಕೋಣೆಯಲ್ಲಿ ಜೇಡನ ಬಲೆ ಇದ್ದರೆ, ಕುಟುಂಬದಲ್ಲಿ ಅಶಾಂತಿ ಉಂಟಾಗುತ್ತದೆ. ಪತಿ ಪತ್ನಿಯರ ನಡುವೆ ಕಲಹಗಳು ಉದ್ಬವಿಸಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಮನೆಯ ಮೂಲೆಗಳಲ್ಲಿ ಜೇಡರ ಬಲೆ ಇದ್ರೆ, ಕುಟುಂಬ ಸದಸ್ಯರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತವೆ. 

ಪೂಜಾ ಕೊಠಡಿಯಲ್ಲಿ ಜೇಡರ ಬಲೆ ಇದ್ದರೆ ಇದು, ಹಲವು ಅವಘಡಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ದೇವರ ಕೋಣೆಯನ್ನು ಸದಾ ಸ್ವಚ್ಛವಾಗಿಡಲು ಪ್ರಯತ್ನಿಸಿ. ಇಲ್ಲದಿದ್ದರೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಇದಲ್ಲದೆ, ಇವುಗಳು ವೈಯಕ್ತಿಕ ದುರದೃಷ್ಟವನ್ನು ತರುತ್ತವೆ.

ಇದನ್ನೂ ಓದಿ:ವೃಷಭದಲ್ಲಿ ಗುರು ಅಸ್ತ.. ಈ 3 ರಾಶಿಗಳ ಗೋಲ್ಡನ್‌ ಟೈಮ್ ಶುರು, ಸಂಪತ್ತಿನ ಸುರಿಮಳೆ.. ಲಕ್ ಜೊತೆ ಲೈಫೂ ಚೇಂಜ್..‌ ಸೋಲೆಂಬುದೇ ಇಲ್ಲ!

ಅಡುಗೆಮನೆಯಲ್ಲಿ ಜೇಡರ ಬಲೆ ಇದ್ದರೆ, ಅವುಗಳು ದುರದೃಷ್ಟಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಇದರಿಂದ ಕುಟುಂಬಸ್ಥರು ಅನಾರೋಗ್ಯ ಎದುರಿಸಬೇಕಾಗುತ್ತದೆ. ಅಡುಗೆಮನೆಯಲ್ಲಿ ಗ್ಯಾಸ್ ಮತ್ತು ಸಿಂಕ್ ಅಡಿಯಲ್ಲಿ ಬಲೆ ಇಲ್ಲದಂತೆ ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News