Shani Mangal Yog- ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆ ಹಲವು ಶುಭ ಹಾಗೂ ಅಶುಭ ಯೋಗಗಳ ನಿರ್ಮಾಣಕ್ಕೆ ಕಾರಣವಾಗುತ್ತವೆ. ಶೀಘ್ರದಲ್ಲಿಯೇ ಮಂಗಳ ಸಿಂಹ ರಾಶಿಯಲ್ಲಿ ಗೋಚರಿಸಲಿದೆ. ಅಂಗಾರಕನ ಈ ಗೋಚರ ಒಟ್ಟು 48 ದಿನಗಳವರೆಗೆ ಇರಲಿದೆ. ಇನ್ನೊಂದೆಡೆ ಮಂಗಳನ ಈ ಗೋಚರದ ಸಮಯದಲ್ಲಿ ಶನಿ ಮಹಾರಾಜ ಕುಂಭ ರಾಶಿಯಲ್ಲಿ ವಕ್ರನಾಗಿ ಮಂಗಳನ ನೇರ ಮುಂದೆ 7ನೇ ಭಾವದಲ್ಲಿ ಬಂದು 'ಸಮಸಪ್ತಕ ಯೋಗ' ನಿರ್ಮಾಣಕ್ಕೆ ಕಾರಣವಾಗಲಿದ್ದಾನೆ. ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಈ ಯೋಗವನ್ನು ಅಷ್ಟೊಂದು ಉತ್ತಮ ಎಂದು ಭಾವಿಸಲಾಗುವುದಿಲ್ಲ. ಹೀಗಾಗಿ ಈ ಯೋಗ ನಿರ್ಮಾಣದಿಂದ ದೇಶ-ವಿದೇಶಗಳಲ್ಲಿ ಹಲವು ಘಟನೆಗಳು ಸಂಭವಿಸಲಿವೆ ಹಾಗೂ ಇದು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ತನ್ನ ಪ್ರಭಾವವನ್ನು ಬೀರಲಿದೆ.
ಅತಿವೃಷ್ಟಿಯ ಕಾಲ ಬರಲಿದೆ
ಸಮಸಪ್ತಕ ಯೋಗ ನಿರ್ಮಾಣದಿಂದ ದೇಶದ ಕೆಲ ಭಾಗಗಳಲ್ಲಿ ಅತಿವೃಷ್ಟಿಯ ಸಾಧ್ಯತೆ ಇದೆ. ದೆಹಲಿ, ಪಂಜಾಬ್ ಹಾಗೂ ಹರಿಯಾಣಗಳಲ್ಲಿ ಮಳೆ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ. ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗುವ ಸಾಧ್ಯತೆ ಇದೆ.
ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ಮಂಗಳನ ಗೋಚರದ ಅವಧಿಯಲ್ಲಿ ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಕೆಂಪು ಬಣ್ಣದ ವಸ್ತುಗಳು ದುಬಾರಿಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಕೆಲ ವಸ್ತುಗಳ ಬೆಲೆ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-Gujrat Roits 2002: ತೀಸ್ತಾ ಸೆಟಲ್ವಾಡ್ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್, ತಕ್ಷಣ ಶರಣಾಗತಿಗೆ ಆದೇಶ
ದ್ವಾದಶ ರಾಶಿಗಳ ಮೇಲೆ ಸಮಸಪ್ತಕ ಯೋಗದ ಪ್ರಭಾವ ಏನು?
ಶನಿ ಹಾಗೂ ಮಂಗಳರ ಮುಖಾಮುಖಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ಯೋಗ ವೃಷಭ, ಮಿಥುನ, ಸಿಂಹ, ತುಲಾ ಹಾಗೂ ಧನು ರಾಶಿಗಳ ಜನರಿಗೆ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಉತ್ತಮ ಲಾಭ ನಿಮ್ಮದಾಗಲಿದೆ. ಆಕಸ್ಮಿಕ ಧನಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನೌಕರ ವರ್ಗದ ಜನರಿಗೆ ಪ್ರಮೋಷನ್-ಇಂಕ್ರಿಮೆಂಟ್ ಭಾಗ್ಯ ಒದಗಿ ಬರಲಿದೆ. ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಸಂತಾನಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವಾಹನ ಹಾಗೂ ಆಸ್ತಿ-ಪಾಸ್ತಿ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ರಿಯಲ್ ಇಸ್ಟೇಟ್, ಭೂಮಿ-ನಿವೇಶನಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾದವರಿಗೆ ಈ ಸಮಯ ಅದ್ಭುತವಾಗಿದೆ.
ಇದನ್ನೂ ಓದಿ-Tomato Rate: ಗಗನ ಮುಖಿಯಾಗಿರುವ ಟೋಮ್ಯಾಟೊ ಧಾರಣೆ ಯಾವಾಗ ಇಳಿಕೆಯಾಗಲಿದೆ? ಸರ್ಕಾರ ನೀಡಿದೆ ಈ ಮಾಹಿತಿ
ಇನ್ನೊಂದೆಡೆ ಈ ಎರಡೂ ಗ್ರಹಗಳ ಮುಖಾಮುಖಿಯಿಂದ ಮೇಷ, ಕರ್ಕ, ಕನ್ಯಾ, ಮಕರ, ಕುಂಭ ಹಾಗೂ ಮೀನ ರಾಶಿಗಳ ಜಾತಕದವರ ಪಾಲಿಗೆ ಕಷ್ಟದಾಯಕ ಸಾಬೀತಾಗಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆವಹಿಸಿ. ದುರ್ಘಟನೆ ಸಂಭವಿಸುವ ಸಾಧ್ಯತೆ ಇದೆ. ಹಣ ಸಾಲ ನೀಡುವುದರಿಂದ ಬಚಾವಾಗಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.