Solar Eclipse 2024: ಏಪ್ರಿಲ್‌ 8ರಂದು 1000 ವರ್ಷಕ್ಕೊಮ್ಮೆ ಸಂಭವಿಸುವ ಅಪರೂಪದ ಸೂರ್ಯಗ್ರಹಣ

Solar Eclipse 2024: 2024ರ ಏಪ್ರಿಲ್ 8ರಂದು ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳಲಿದ್ದಾನೆ. ಈ ಮೂಲಕ ಇದರ ನೆರಳು ಭೂಮಿಯ ಮೇಲೆ ಬೀಳಲಿದ್ದು, ಹಲವು ಅಪರೂಪದ ಘಟನೆಗಳು ಸಂಭವಿಸಲಿವೆ

Written by - Puttaraj K Alur | Last Updated : Mar 21, 2024, 12:01 AM IST
  • 1000 ವರ್ಷಕ್ಕೊಮ್ಮೆ ಸಂಭವಿಸುವ ಅಪರೂಪದ ಸಂಪೂರ್ಣ ಸೂರ್ಯಗ್ರಹಣ
  • ಏಪ್ರಿಲ್‌ 8ರಂದು ಸಂಭವಿಸುತ್ತಿರುವ ಸೂರ್ಯಗ್ರಹಣ ಕಣ್ತುಂಬಿಕೊಳ್ಳಲು ಕಾತುರ
  • ಸಂಪೂರ್ಣ ಸೂರ್ಯಗ್ರಹಣ ಸಂಭವಿಸುವುದು 400-1000 ವರ್ಷಗಳಿಗೆ ಒಮ್ಮೆ ಮಾತ್ರ
Solar Eclipse 2024: ಏಪ್ರಿಲ್‌ 8ರಂದು 1000 ವರ್ಷಕ್ಕೊಮ್ಮೆ ಸಂಭವಿಸುವ ಅಪರೂಪದ ಸೂರ್ಯಗ್ರಹಣ title=
ಸಂಪೂರ್ಣ ಸೂರ್ಯಗ್ರಹಣ 2024

Solar Eclipse 2024: 1000 ವರ್ಷಕ್ಕೊಮ್ಮೆ ಸಂಭವಿಸುವ ಅಪರೂಪದ ಸಂಪೂರ್ಣ ಸೂರ್ಯಗ್ರಹಣವು ಏಪ್ರಿಲ್ 8ರಂದು ಸಂಭವಿಸಲಿದೆ. ಈ ಅಪರೂಪದ ಗ್ರಹಣ ವೀಕ್ಷಣೆಗೆ ಜಗತ್ತಿನ ಹಲವು ದೇಶಗಳ ಜನರು ಕಾತುರದಿಂದ ಕಾಯುತ್ತಿದ್ದಾರೆ.  

2024ರ ಏಪ್ರಿಲ್ 8ರಂದು ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳಲಿದ್ದಾನೆ. ಈ ಮೂಲಕ ಇದರ ನೆರಳು ಭೂಮಿಯ ಮೇಲೆ ಬೀಳಲಿದ್ದು, ಹಲವು ಅಪರೂಪದ ಘಟನೆಗಳು ಸಂಭವಿಸಲಿವೆ ಅಂತಾ ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Health Benefits Of Sleeping On Floor: ಕುರ್ಚಿ, ಬೆಡ್ ಬೀಟ್ಹಾಕಿ ನೆಲದ ಮೇಲೆಯೇ ಇದೆ ಸ್ವರ್ಗ ಸುಖ, ನಂಬಿಕೆ ಇಲ್ಲಾ ಅಂದ್ರೆ ಈ ಲೇಖನ ಒಮ್ಮೆ ಓದಿ!

ಈ ರೀತಿಯ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುವುದು 400ರಿಂದ 1000 ವರ್ಷಗಳಿಗೆ ಒಮ್ಮೆ ಮಾತ್ರ. ಇದು ಮೆಕ್ಸಿಕೊದಿಂದ ಅಮೆರಿಕದ ಮತ್ತೊಂದು ತುದಿಯಾದ ಕೆನಡಾವರೆಗೆ ಸಂಪೂರ್ಣ ಗೋಚರವಾಗಲಿದೆ. ಅಂದು ಆ ಭೂಪ್ರದೇಶದ ಮೇಲೆ ಸಂಪೂರ್ಣ ಕತ್ತಲು ಆವರಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಇಂತಹ ಅಪರೂಪದ ಸೂರ್ಯಗ್ರಹಣವನ್ನು ಮತ್ತೊಮ್ಮೆ ವೀಕ್ಷಿಸಲು ನೀವು 2045ರವರೆಗೆ ಕಾಯಬೇಕಾಗುತ್ತದೆ. ಈ ಹಿಂದೆ 2003ರಲ್ಲಿ ಸಂಭವಿಸಿದ್ದಾಗ ಅಲಸ್ಕಾದಲ್ಲಿ ಕಂಡು ಬಂದಿತ್ತು.  

ಇದನ್ನೂ ಓದಿ: Premature Grey Hair Treatment: ಅಕಾಲಿಕ ಬಿಳಿ ಕೂದಲನ್ನು ಬುಡದಿಂದಲೂ ಕಪ್ಪಾಗಿಸುತ್ತೆ ಈ ಗಿಡಮೂಲಿಕೆಗಳು

ಸಂಪೂರ್ಣ ಸೂರ್ಯಗ್ರಹಣ ಮಾತ್ರವಲ್ಲದೆ ಈ ಗ್ರಹಣದ ಅವಧಿಯೂ ಹೆಚ್ಚು ಕಾಲ ಇರಲಿದೆ. ಜನರ ಅನುಭವಕ್ಕೆ ಬರುವುದರಿಂದ ಇದು ಅಪರೂಪದ ಗ್ರಹಣವಾಗಿದೆ ಅಂತಾ ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News