Solar Eclipse 2022: ಈ ನಾಲ್ಕು ರಾಶಿಯವರ ಅದೃಷ್ಟ ಬೆಳಗಲಿದೆ ಇಂದಿನ ಸೂರ್ಯ ಗ್ರಹಣ

Solar Eclipse 2022 effects on Zodiac Signs: ಇಂದಿನ ಸೂರ್ಯಗ್ರಹಣವು ಈ 4 ರಾಶಿಚಕ್ರ ಚಿಹ್ನೆಗಳಿಗೆ ದೊಡ್ಡ ಅವಕಾಶವನ್ನು ತಂದಿದೆ. ವರ್ಷದ ಕೊನೆಯ ಸೂರ್ಯಗ್ರಹನವರು ಕೆಲವು ರಾಶಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು, ಅವರ ಜೀವನವು ಸುಖ ಸಂತೋಷದಿಂದ ತುಂಬಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.  

Written by - Yashaswini V | Last Updated : Oct 25, 2022, 07:18 AM IST
  • ಇಂದು 25 ಅಕ್ಟೋಬರ್ 2022, ಮಂಗಳವಾರದಂದು ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ.
  • ಇಂದು ಸಂಭವಿಸಲಿರುವ ವರ್ಷದ ಕೊನೆಯ ಸೂರ್ಯಗ್ರಹಣ ಯಾವ ರಾಶಿಯವರಿಗೆ ಅದೃಷ್ಟವನ್ನು ತರಲಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ಮತ್ತು ಅವರು ಗ್ರಹಣದಿಂದ ಯಾವ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂಬುದನ್ನು ತಿಳಿಯೋಣ...
Solar Eclipse 2022: ಈ ನಾಲ್ಕು ರಾಶಿಯವರ ಅದೃಷ್ಟ ಬೆಳಗಲಿದೆ ಇಂದಿನ ಸೂರ್ಯ ಗ್ರಹಣ  title=
Surya Grahan Effect

Solar Eclipse 2022 effects on Zodiac Signs: ಇಂದು 25 ಅಕ್ಟೋಬರ್ 2022, ಮಂಗಳವಾರದಂದು ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣದ ಪರಿಣಾಮವು ಎಲ್ಲಾ 12 ರಾಶಿಚಕ್ರಗಳ ಮೇಲೆ ವಿಭಿನ್ನವಾಗಿರುತ್ತದೆ. ಇಂದು ಸಂಭವಿಸಲಿರುವ ವರ್ಷದ ಕೊನೆಯ ಸೂರ್ಯಗ್ರಹಣದಿಂದಾಗಿ ಕೆಲವು ರಾಶಿಯವರಿಗೆ ತೊಂದರೆಗಳು ಹೆಚ್ಚಾಗಲಿವೆ. ಅದೇ ಸಮಯದಲ್ಲಿ, ನಾಲ್ಕು ರಾಶಿಯವರಿಗೆ ಈ ಸೂರ್ಯಗ್ರಹಣ ಭಾರೀ ಸಂತೋಷವನ್ನು ತರಲಿದ್ದು, ಅವರ ಅದೃಷ್ಟ ಹೊಳೆಯಲಿದೆ ಎಂದು ಹೇಳಲಾಗುತ್ತಿದೆ. 

ಇಂದು ಸಂಭವಿಸಲಿರುವ ವರ್ಷದ ಕೊನೆಯ ಸೂರ್ಯಗ್ರಹಣ ಯಾವ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಮತ್ತು ಅವರು ಗ್ರಹಣದಿಂದ ಯಾವ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂಬುದನ್ನು ತಿಳಿಯೋಣ...

ಇಂದು ವರ್ಷದ ಕೊನೆಯ ಸೂರ್ಯಗ್ರಹಣ, ಈ 4 ರಾಶಿಯವರಿಗೆ ಭಾರೀ ಅದೃಷ್ಟ 
ಮಿಥುನ ರಾಶಿ: 

ವರ್ಷದ ಕೊನೆಯ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಕುಟುಂಬದಲ್ಲಿ ಸಂತಸದ ವಾತಾವರಣವನ್ನು ತರಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ನೀವು ಹಣ ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಹೂಡಿಕೆಯಲ್ಲಿ ಲಾಭವಾಗಬಹುದು. ಹಳೆಯ ಪ್ರಕರಣವೊಂದು ನಿಮ್ಮ ಪರವಾಗಿ ಇತ್ಯರ್ಥವಾಗಬಹುದು. ನೀವು ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಲು ನಿರ್ಧರಿಸಬಹುದು.

ಇದನ್ನೂ ಓದಿ- Solar Eclipse 2022: ವರ್ಷದ ಕೊನೆಯ ಖಂಡಗ್ರಾಸ ಸೂರ್ಯಗ್ರಹಣದ ಸಮಯ, ಪೂಜಾ ವಿಧಾನ ಮತ್ತು ನಿಯಮಗಳು ಹೀಗಿವೆ

ಸಿಂಹ ರಾಶಿ: 
ಅಕ್ಟೋಬರ್‌ನಲ್ಲಿ ಸಂಭವಿಸುತ್ತಿರುವ ಈ ವರ್ಷದ ಕೊನೆಯ  ಸೂರ್ಯಗ್ರಹಣದಿಂದ ಸಿಂಹ ರಾಶಿಯವರಿಗೆ ಆರ್ಥಿಕ ಪ್ರಯೋಜನಗಳಿಗಾಗಿ ಅನೇಕ ಅವಕಾಶಗಳು ಹೊರಹೊಮ್ಮುತ್ತವೆ. ಹೂಡಿಕೆಯ ಅವಕಾಶಗಳು ಲಭ್ಯವಿರುತ್ತವೆ ಮತ್ತು ಸ್ಥಗಿತಗೊಂಡ ಕೆಲಸವು ವೇಗವಾಗಿ ಮುಂದುವರಿಯುತ್ತದೆ. ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿನ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ಕಛೇರಿಯಲ್ಲಿ ಅನೇಕ ಹೊಸ ಜವಾಬ್ದಾರಿಗಳನ್ನು ಕಾಣಬಹುದು. ವ್ಯಾಪಾರ ಪ್ರವಾಸಕ್ಕೆ ಹೋಗುವ ಅವಕಾಶವಿರಬಹುದು. ಇದೂ ಸಹ ಲಾಭದಾಯಕವೆಂದು ಸಾಬೀತುಪಡಿಸಲಿದೆ. 

ವೃಶ್ಚಿಕ ರಾಶಿ: 
ಸೂರ್ಯಗ್ರಹಣದ ಪ್ರಭಾವದಿಂದಾಗಿ ವೃಶ್ಚಿಕ ರಾಶಿಯ ಜನರು ತಮ್ಮ ಅನುಕೂಲಕ್ಕಾಗಿ ಅನೇಕ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ವ್ಯವಹಾರದಲ್ಲಿ ಎದುರಾಗುವ ತೊಂದರೆಗಳು ಸಹೋದ್ಯೋಗಿಗಳ ಸಹಾಯದಿಂದ ಸುಲಭವಾಗಿ ಬಗೆಹರಿಯಲಿವೆ. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ವಿಷಯಗಳು ನಿಮ್ಮ ಪರವಾಗಿರುತ್ತವೆ. ನೀವು ಕೆಲವು ಹೊಸ ವಲಯಗಳಲ್ಲಿ ಹೂಡಿಕೆ ಮಾಡಬಹುದು. ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಮೊದಲು, ಕಾಗದ ಪತ್ರಗಳನ್ನು ಸರಿಯಾಗಿ ಓದಿದ ನಂತರವಷ್ಟೇ ಸಹಿ ಹಾಕಿ. 

ಇದನ್ನೂ ಓದಿ- Monthly Horoscope: ನವೆಂಬರ್ ನಲ್ಲಿ ಬದಲಾಗಲಿದೆ ಈ ರಾಶಿಯ ಅದೃಷ್ಟ: ಕಲ್ಪನೆಗೂ ಮೀರಿ ಧನಲಾಭವಾಗಲಿದೆ

ಮೀನ ರಾಶಿ:
ಸೂರ್ಯಗ್ರಹಣದ ಈ ಸಮಯದಲ್ಲಿ ಮೀನ ರಾಶಿಯವರು . ಆಸ್ತಿ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಲಾಭದ ಪರಿಸ್ಥಿತಿ ಇರುತ್ತದೆ ಮತ್ತು ನೀವು ಅನೇಕ ದೊಡ್ಡ ವ್ಯವಹಾರಗಳನ್ನು ಪಡೆಯಬಹುದು. ಉದ್ಯೋಗದಲ್ಲಿ ಬಡ್ತಿ ಅಥವಾ ಹೆಚ್ಚಳದ ಸಾಧ್ಯತೆಗಳಿವೆ. ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗಲು ಅಥವಾ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶವಿರಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News