ಬೆಳ್ಳಿ ಪಾದದ ಮೇಲೆ ಶನಿಯ ನಡೆ : ಎರಡೂವರೆ ವರ್ಷ ಮೂರು ರಾಶಿಯವರಿಗೆ ಅದೃಷ್ಟ ಕರುಣಿಸಲಿದ್ದಾನೆ ಛಾಯಾ ಪುತ್ರ

ಕುಂಭ ರಾಶಿಯಲ್ಲಿರುವ ಶನಿ ಮೂರು ರಾಶಿಗಳಲ್ಲಿ ಬೆಳ್ಳಿಯ ಪಾದದ ಮೇಲೆ ನಡೆಯುತ್ತಾನೆ. ಇದರಿಂದ ಈ ರಾಶಿಯವರಿಗೆ ಅಪಾರ ಸಂಪತ್ತು ಮತ್ತು ಪ್ರಗತಿ ಪ್ರಾಪ್ತಿಯಾಗುತ್ತದೆ

Written by - Ranjitha R K | Last Updated : Jan 23, 2023, 11:03 AM IST
  • ಶನಿಯು ತನ್ನ ಮೂಲ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದೆ.
  • ಶನಿಯ ರಾಶಿ ಬದಲಾವಣೆಯೊಂದಿಗೆ ಶನಿಯ ಪಾದವೂ ಬದಲಾಗಿದೆ.
  • ಶನಿಯು ಮೂರು ರಾಶಿಯವರಿಗೆ ಕರುಣಿಸಲಿದ್ದಾನೆ ಅದೃಷ್ಟ
ಬೆಳ್ಳಿ ಪಾದದ ಮೇಲೆ ಶನಿಯ ನಡೆ : ಎರಡೂವರೆ ವರ್ಷ ಮೂರು ರಾಶಿಯವರಿಗೆ ಅದೃಷ್ಟ ಕರುಣಿಸಲಿದ್ದಾನೆ ಛಾಯಾ ಪುತ್ರ  title=

ಬೆಂಗಳೂರು : ಇತ್ತೀಚೆಗೆ, ಶನಿಯು ತನ್ನ ಮೂಲ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದೆ. ಇಲ್ಲಿ ಶನಿಯ ರಾಶಿ ಬದಲಾವಣೆಯಾದದ್ದು ಮಾತ್ರವಲ್ಲ. ಶನಿಯ ಪಾದವೂ ಬದಲಾಗಿದೆ. ಶನಿಯು ಚಿನ್ನ, ಬೆಳ್ಳಿ, ತಾಮ್ರ ಮತ್ತು ಕಬ್ಬಿಣದ ಪಾದಗಳ ಮೇಲೆ ನಡೆಯುತ್ತಾನೆ. ಕುಂಭ ರಾಶಿಯಲ್ಲಿರುವ ಶನಿ ಮೂರು ರಾಶಿಗಳಲ್ಲಿ ಬೆಳ್ಳಿಯ ಪಾದದ ಮೇಲೆ ನಡೆಯುತ್ತಾನೆ. ಇದರಿಂದ ಈ ರಾಶಿಯವರಿಗೆ ಅಪಾರ ಸಂಪತ್ತು ಮತ್ತು ಪ್ರಗತಿ ಪ್ರಾಪ್ತಿಯಾಗುತ್ತದೆ. ಶನಿಯ ಬೆಳ್ಳಿಯ ಪಾದಗಳು ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ  ನೋಡೋಣ. 

ತುಲಾ ರಾಶಿ: ಶನಿಯು ತನ್ನ ರಾಶಿಯನ್ನು ಬದಲಾಯಿಸಿದ ತಕ್ಷಣ, ತುಲಾ ರಾಶಿಯವರ ಜಾತಕದಲ್ಲಿಎರಡೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಕ್ಕಿದೆ.  ಇದರೊಂದಿಗೆ ತುಲಾ ರಾಶಿಯಲ್ಲಿ ಬೆಳ್ಳಿಯ ಪಾದದಲ್ಲಿ ಶನಿದೇವನ ಸಂಚಾರವಾಗುವುದು. ಈ ಕಾರಣದಿಂದ ಶನಿಯು ತುಲಾ ರಾಶಿಯವರಿಗೆ ಅಪಾರ ಲಾಭವನ್ನು ನೀಡುತ್ತಾನೆ. ಮುಂದಿನ ಎರಡೂವರೆ ವರ್ಷಗಳಲ್ಲಿ ಈ ರಾಶಿಯವರು ದೊಡ್ಡ ಪ್ರಗತಿಯನ್ನು ಸಾಧಿಸುತ್ತಾರೆ. ಯಾವುದೇ ದೊಡ್ಡ ಪರೀಕ್ಷೆ, ಸಂದರ್ಶನದಲ್ಲಿ ಯಶಸ್ಸು ಸಿಗಲಿದೆ. 

ಇದನ್ನೂ ಓದಿ : ಕುಂಭ ರಾಶಿಯಲ್ಲಿ ಶನಿಯ ಗೋಚರ, ಈ ರಾಶಿಯ ಜನರ ಸಾಡೆಸಾತಿ ಆರಂಭ

ಮಿಥುನ ರಾಶಿ : ಶನಿಯ ಸಂಕ್ರಮಣ ಮತ್ತು ಶನಿಯ ಬೆಳ್ಳಿ ಪಾದವು ಮಿಥುನ ರಾಶಿಯವರಿಗೆ ಕೂಡಾ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರು ಮಾಡುವ ಕೆಲಸದಲ್ಲಿ ಸ್ವಲ್ಪ ಶ್ರಮ ಹಾಕಿದರೂ ಆ ಕೆಲಸ ಯಶಸ್ಸಾಗುವಂತೆ  ಶನಿದೇವ ಆಶೀರ್ವದಿಸುತ್ತಾನೆ. ಶನಿ ಮಹಾತ್ಮನ ಆಶೀರ್ವಾದದಿಂದ ಈ ರಾಶಿಯವರು ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದು.  ವೃತ್ತಿ ಜೀವನಕ್ಕೆ ಅನುಕೂಲವಾಗಲಿದೆ. ಗೌರವ ಹೆಚ್ಚಾಗಲಿದೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಜನರು ವಿಶೇಷ ಲಾಭವನ್ನು ಪಡೆಯಬಹುದು. 

ಮಕರ ರಾಶಿ : ಶನಿಯ ಸಂಕ್ರಮಣ ಮತ್ತು ಬೆಳ್ಳಿಯ ಪಾದಗಳ ಮೇಲಿನ ಶನಿಯ ಸಂಚಾರವು ಮಕರ ರಾಶಿಯವರಿಗೆ ಬಲವಾದ ಲಾಭವನ್ನು ನೀಡುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ರೋಗದಿಂದ ಮುಕ್ತಿ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಆದಾಯ ಹೆಚ್ಚಲಿದೆ. ನೀವು ದೊಡ್ಡ ಹುದ್ದೆಯನ್ನು ಪಡೆಯಬಹುದು. 

ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸ ಮಾಡಿ, ದೂರವಾಗುತ್ತೆ ಆರ್ಥಿಕ ಬಿಕ್ಕಟ್ಟು

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News