ಬೆಂಗಳೂರು : Shani Vakri 2023 Dates: ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯು ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ ಫಲವನ್ನು ನೀಡುತ್ತಾನೆ. 2023 ರಲ್ಲಿ, ಶನಿಯು 30 ವರ್ಷಗಳ ನಂತರ ತನ್ನದೇ ರಾಶಿಯಾದ ಕುಂಭವನ್ನು ಪ್ರವೇಶಿಸಿದ್ದ. ಇದೀಗ ಜೂನ್ 17 ರಿಂದ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಶನಿಯ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ತನ್ನ ನಡೆ ಬದಲಾಯಿಸುವ ಮೂಲಕ ಕೆಲವರನ್ನು ಅತಿಯಾಗಿ ಕಾಡಿದರೆ ಇನ್ನು ಕೆಲವರು ರಾಜರಂತೆ ಬದುಕುವಂತೆ ಮಾಡುತ್ತಾನೆ ಶನಿದೇವ. ಶನಿಯ ಹಿಮ್ಮುಖ ಚಲನೆಯು ಕೆಲವು ರಾಶಿಯವರಿಗೆ ಅಪಾರ ಸಂಪತ್ತು, ಉನ್ನತ ಸ್ಥಾನ, ಖ್ಯಾತಿ ಮತ್ತು ಗೌರವವನ್ನು ತಂದು ಕೊಡುತ್ತದೆ. ಶನಿದೇವನು ತನ್ನ ಚಲನೆ ಬದಲಾಯಿಸುವ ಮೂಲಕ ಯಾವ ರಾಶಿಯ ಜನರ ಭವಿಷ್ಯ ಬೆಳಗುತ್ತಾನೆ ನೋಡೋಣ.
ಶನಿಯ ಹಿಮ್ಮುಖ ಚಲನೆಯ ಪರಿಣಾಮಗಳು :
ಮೇಷ ರಾಶಿ : ಶನಿಯ ಹಿಮ್ಮುಖ ಚಲನೆಯು ಮೇಷ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಹಣಕಾಸಿನ ಪ್ರಯೋಜನವಾಗಲಿದೆ. ಆದಾಯ ಹೆಚ್ಚಲಿದೆ. ಹೊಸ ಮೂಲಗಳಿಂದ ಹಣ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ನೀವು ಮಾಡುವ ಕೆಲಸ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.
ಇದನ್ನೂ ಓದಿ : ಸಂಕಷ್ಟಿಯ ದಿನ ಮಾಡುವ ಈ ತಪ್ಪುಗಳು ವಿಘ್ನ ವಿನಾಶಕನ ಮುನಿಸಿಗೆ ಕಾರಣವಾಗಬಹುದು, ಎಚ್ಚರ!
ವೃಷಭ ರಾಶಿ : ಶನಿಯ ಹಿಮ್ಮುಖ ಚಲನೆಯು ವೃಷಭ ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದೆ. ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಏಳಿಗೆ ಕಾಣಬಹುದು. ವ್ಯಾಪಾರ ವಹಿವಾಟುಗಳಿಗೆ ಈ ಸಮಯವು ಅನುಕೂಲಕರವಾಗಿರಲಿದೆ. ಸಾಲದಿಂದ ಮುಕ್ತರಾಗುವ ಕಾಲವಿದು. ಹೂಡಿಕೆಯಿಂದ ಲಾಭವಾಗಲಿದೆ. ಉದ್ಯೋಗ-ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತದೆ.
ಮಿಥುನ ರಾಶಿ : ಹಿಮ್ಮುಖ ಶನಿಯು ಮಿಥುನ ರಾಶಿಯವರನ್ನು ಆರ್ಥಿಕ ಸಮಸ್ಯೆಗಳಿಂದ ಮುಕ್ತ ಮಾಡುತ್ತಾನೆ. ಆದಾಯ ಹೆಚ್ಚಲಿದೆ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿಯ ದಾರಿ ತೆರೆಯಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ.
ಇದನ್ನೂ ಓದಿ : Mangal Gochar 2023: ಮೇ 10ರಿಂದ ಈ 4 ರಾಶಿಯವರಿಗೆ ಪ್ರಗತಿಯ ಜೊತೆಗೆ ಧನಲಾಭವಾಗಲಿದೆ!
ಧನು ರಾಶಿ : ಶನಿಯ ಹಿಮ್ಮುಖ ಚಲನೆಯಿಂದ ಧನು ರಾಶಿಯವರ ಭವಿಷ್ಯವೂ ಬದಲಾಗುವುದು. ಇಲ್ಲಿಯವರೆಗೆ ಮಲಗಿದ್ದ ಅದೃಷ್ಟ ಎದ್ದು ನಿಲ್ಲುತ್ತದೆ. ನಿಂತು ಹೋಗಿದ್ದ ಕೆಲಸ ಪೂರ್ಣಗೊಳ್ಳುವುದು. ಆದಾಯ ಹೆಚ್ಚಲಿದೆ. ಸ್ಥಾನ - ಮಾನ, ಹಣ, ಗೌರವವನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಹೂಡಿಕೆ ಮಾಡಲು ಬಯಸುವುದಾದರೆ ಇದು ಉತ್ತಮ ಸಮಯ ಆಗಿರಲಿದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.