Surya Gochar 2022: ಈ ನಾಲ್ಕು ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾರೆ ಶನಿ-ಸೂರ್ಯ

Surya Gochar 2022:  16 ಜುಲೈ 2022 ರಂದು, ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿ  ಕರ್ಕ ರಾಶಿಯನ್ನು ಪ್ರವೇಶಿಸಿದನು.   ಅದೇ ಸಮಯದಲ್ಲಿ, ಈ ಮೊದಲು, ಶನಿಯು ತನ್ನ ರಾಶಿಯನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿ-ಸೂರ್ಯನ ಸ್ಥಾನದಲ್ಲಿನ ಈ ಬದಲಾವಣೆಗಳು ಪ್ರಮುಖ ಸಂಸಪ್ತಕ ಯೋಗಗಳನ್ನು ರೂಪಿಸುತ್ತಿವೆ.

Written by - Yashaswini V | Last Updated : Jul 18, 2022, 08:49 AM IST
  • ಶನಿಯು ತನ್ನ ರಾಶಿಯನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ
  • ಸೂರ್ಯನೂ ಈಗ ಕರ್ಕಾಟಕ ರಾಶಿಯಲ್ಲಿದ್ದಾನೆ
  • ಈ ಸ್ಥಾನವು ಸಂಸಪ್ತಕ ಯೋಗವನ್ನು ಉಂಟು ಮಾಡುತ್ತಿದೆ
Surya Gochar 2022: ಈ ನಾಲ್ಕು ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾರೆ ಶನಿ-ಸೂರ್ಯ  title=
Surya Rashi Parivartan 2022

ಸಂಸಪ್ತಕ ಯೋಗ : ಜುಲೈ ತಿಂಗಳಲ್ಲಿ ಎರಡು ಪ್ರಮುಖ ಗ್ರಹಗಳಾದ ಶನಿ ಮತ್ತು ಸೂರ್ಯ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಿದ್ದಾರೆ.  ಕೇವಲ 5 ದಿನಗಳಲ್ಲಿ ಶನಿ ಮತ್ತು ಸೂರ್ಯ ಗ್ರಹಗಳ ಸಂಕ್ರಮಣ ನಡೆದಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ  ಈ ಎರಡೂ ಗ್ರಹಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಗ್ರಹಗಳ ಸ್ಥಾನದಲ್ಲಿ ಸಣ್ಣ ಬದಲಾವಣೆ ಕೂಡ ದೊಡ್ಡ ಪರಿಣಾಮ ಬೀರುತ್ತದೆ. ಶನಿಯು ತನ್ನ ರಾಶಿಯನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸಿದ್ದು ಸೂರ್ಯನೂ ಈಗ ಕರ್ಕಾಟಕ ರಾಶಿಯಲ್ಲಿದ್ದಾನೆ. ಈ ಸ್ಥಾನವು ಸಂಸಪ್ತಕ ಯೋಗವನ್ನು ಉಂಟು ಮಾಡುತ್ತಿದೆ. 

ವಾಸ್ತವವಾಗಿ, ಶನಿ ಮತ್ತು ಸೂರ್ಯ ಎರಡೂ ಗ್ರಹಗಳು ಪರಸ್ಪರರ ಏಳನೇ ಮನೆಯಲ್ಲಿ ಕುಳಿತಿವೆ. ಈ ಗ್ರಹಗಳ ಬದಲಾವಣೆಯಿಂದ ರೂಪುಗೊಂಡಿರುವ ಸಂಸಪ್ತಕ ಯೋಗವು ನಾಲ್ಕು ರಾಶಿಯ ಜನರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...

ಸಂಸಪ್ತ ಯೋಗವು 4 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ:
ಮಿಥುನ ರಾಶಿ:
ಸಂಸಪ್ತಕ   ಯೋಗವು ಮಿಥುನ ರಾಶಿಯವರಿಗೆ ತುಂಬಾ ಒಳ್ಳೆಯದು. ಅವರಿಗೆ ಆರ್ಥಿಕ ಲಾಭ ದೊರೆಯಲಿದೆ. ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರಿಗಳ ಲಾಭ ಹೆಚ್ಚಾಗಲಿದೆ. ಹೂಡಿಕೆ ಮಾಡುವವರಿಗೂ ಲಾಭವಾಗಲಿದೆ. ಹಣ ಉಳಿಸಲು ಇದು ಉತ್ತಮ ಸಮಯ. 

ಇದನ್ನೂ ಓದಿ- ದೇವಸ್ಥಾನದಲ್ಲಿ ಈ ದಿನ ಚಪ್ಪಲಿ ಕಳೆದುಹೋದರೆ ತುಂಬಾ ಶುಭ

ಕರ್ಕಾಟಕ ರಾಶಿ: ಸಂಸಪ್ತಕ ಯೋಗವು ಕರ್ಕ ರಾಶಿಯವರಿಗೆ ಆದಾಯವನ್ನು ಹೆಚ್ಚಿಸುತ್ತದೆ . ವಿಶೇಷವಾಗಿ ಸರ್ಕಾರಿ ಕೆಲಸ ಮಾಡುವವರಿಗೆ ಇದು ಉತ್ತಮ ಸಮಯ. ಅದೇ ಸಮಯದಲ್ಲಿ, ಉದ್ಯೋಗಗಳನ್ನು ಹುಡುಕುತ್ತಿರುವ ಜನರು ತಮ್ಮ ನೆಚ್ಚಿನ ಕೆಲಸವನ್ನು ಪಡೆಯಬಹುದು. 

ತುಲಾ ರಾಶಿ:  ಈ ರಾಶಿಯವರಿಗೆ ಹೊಸ ಕೆಲಸ ಸಿಗಲಿದೆ. ನೀವು ಕೆಲಸದಲ್ಲಿ ಯಶಸ್ಸು ಮತ್ತು ಗೌರವವನ್ನು ಪಡೆಯುತ್ತೀರಿ. ಆದಾಯ ಹೆಚ್ಚಲಿದೆ. ಈ ಸಮಯವು ವೃತ್ತಿಜೀವನಕ್ಕೆ ತುಂಬಾ ಒಳ್ಳೆಯದು. ಉದ್ಯಮಿಗಳಿಗೂ ಸಾಕಷ್ಟು ಲಾಭವಾಗಲಿದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನಿಮಗೆ ಹಣದ ಹೊಳೆಯೇ ಹರಿಯಲಿದೆ.

ಇದನ್ನೂ ಓದಿ- Guru Gochar 2022: ಮೀನ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ! ಈ ರಾಶಿಗಳ ಜನರಿಗೆ ಸಮಯ ಕಠಿಣವಾಗಿರಲಿದೆ

ಮೀನ ರಾಶಿ: ಶನಿ ಮತ್ತು ಸೂರ್ಯನ ಸ್ಥಾನದಿಂದ ರೂಪುಗೊಂಡ ಸಂಸಪ್ತಕ ಯೋಗವು ಮೀನ ರಾಶಿಯವರಿಗೆ ಸಹ ಫಲಪ್ರದವಾಗಲಿದೆ. ಅವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಯುವಕರಿಗೆ ಉದ್ಯೋಗ ದೊರೆಯಲಿದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಕಾಣಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News