Swapna Shastra: ನಿಮ್ಮ ಕನಸಿನಲ್ಲಿ ಭಗವಾನ್ ಶ್ರೀರಾಮ ಬಂದರೆ ಏನರ್ಥ ಗೊತ್ತಾ..?

ಕನಸಿನ ಅರ್ಥ: ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಕೆಲವು ವಿಷಯಗಳನ್ನು ನೋಡುವುದು ಜೀವನದಲ್ಲಿ ನಡೆಯುವ ಮಂಗಳಕರ ಸಂಗತಿಗಳನ್ನು ಸೂಚಿಸುತ್ತದೆ. ಅದೇ ರೀತಿ ನೀವು ನಿಮ್ಮ ಕನಸಿನಲ್ಲಿ ಭಗವಾನ್ ಶ್ರೀರಾಮನನ್ನು ಕಾಣುತ್ತಿದ್ದರೆ, ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿವೆ ಎಂದು ಅರ್ಥಮಾಡಿಕೊಳ್ಳಿ. 

Written by - Puttaraj K Alur | Last Updated : Jan 27, 2024, 04:05 PM IST
  • ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ಕಾಣುವುದು ಜೀವನದಲ್ಲಿ ಅಪಾರ ಯಶಸ್ಸನ್ನು ತರುತ್ತದೆ
  • ನಿಮ್ಮ ಕನಸಿನಲ್ಲಿ ಭಗವಾನ್ ಶ್ರೀರಾಮನನ್ನು ಕಂಡರೆ ಅದು ನಿಮಗೆ ತುಂಬಾ ಮಂಗಳಕರ ಫಲಿತಾಂಶ
  • ಶ್ರೀರಾಮ ಮತ್ತು ಹನುಮಂತನನ್ನು ಒಟ್ಟಿಗೆ ಕಾಣುವುದು ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ
Swapna Shastra: ನಿಮ್ಮ ಕನಸಿನಲ್ಲಿ ಭಗವಾನ್ ಶ್ರೀರಾಮ ಬಂದರೆ ಏನರ್ಥ ಗೊತ್ತಾ..?  title=
ಕನಸಿನಲ್ಲಿ ಭಗವಾನ್ ರಾಮ

ಕನಸಿನಲ್ಲಿ ಭಗವಾನ್ ರಾಮ: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯ ನಂತರ, ಇಡೀ ದೇಶವೇ ರಾಮನ ಜಪ ಮಾಡುತ್ತಿದೆ. ಕೋಟ್ಯಂತರ ಭಾರತೀಯರ ಕನಸು ನನಸಾಗಿದ್ದು, ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಅಯೋಧ್ಯಗೆ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಇದೀಗ ಎಲ್ಲೆಲ್ಲೂ ಜನರು ರಾಮನ ಭಕ್ತಿಯಲ್ಲಿ ಮಗ್ನರಾಗಿರುವುದು ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಭಕ್ತರ ಕನಸಿನಲ್ಲಿ ಭಗವಾನ್ ಶ್ರೀರಾಮ ಕಾಣಿಸಿಕೊಂಡಿದ್ದಾನಂತೆ. ಕನಸಿನ ವಿಜ್ಞಾನದ ಪ್ರಕಾರ, ಭವಿಷ್ಯದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳ ಬಗ್ಗೆ ಕನಸುಗಳು ನಮಗೆ ಮುನ್ಸೂಚನೆ ನೀಡುತ್ತವೆ. ಕೆಲವು ಶುಭ ಸೂಚನೆ ನೀಡಿದ್ರೆ ಇನ್ನೂ ಕೆಲವು ಅಶುಭ ಸೂಚನೆ ನೀಡುತ್ತವೆ. ಸ್ವಪ್ನಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಕನಸುಗಳ ಅರ್ಥಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ದೇವ-ದೇವತೆಗಳನ್ನು ಅಥವಾ ಭಗವಾನ್ ಶ್ರೀರಾಮನನ್ನು ನೋಡುವುದು ಜೀವನದಲ್ಲಿ ಕೆಲವು ವಿಶೇಷ ಸೂಚನೆಗಳನ್ನು ನೀಡುತ್ತವಂತೆ. ಭಗವಾನ್ ಶ್ರೀರಾಮನು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ, ಅದು ನಿಮಗೆ ಒಳ್ಳೆಯ ಸಂಕೇತವಾಗಿರಬಹುದು. ಕನಸಿನಲ್ಲಿ ಭಗವಾನ್ ಶ್ರೀರಾಮ ಅಥವಾ ರಾಮ ಭಕ್ತ ಹನುಮಂತನನ್ನು ನೋಡುವುದರ ಅರ್ಥವೇನು ಎಂದು ತಿಳಿದುಕೊಳ್ಳಿರಿ.

ಇದನ್ನೂ ಓದಿ: Lotus cultivation: ರೂ. 25 ಸಾವಿರ ಹೂಡಿಕೆ.. ಐದು ತಿಂಗಳಲ್ಲಿ ರೂ. 2 ಲಕ್ಷ ಆದಾಯ..!

ಕನಸಿನಲ್ಲಿ ರಾಮನನ್ನು ನೋಡುವುದರ ಅರ್ಥ: ಕನಸಿನ ವಿಜ್ಞಾನದ ಪ್ರಕಾರ, ನೀವು ಇತ್ತೀಚೆಗೆ ನಿಮ್ಮ ಕನಸಿನಲ್ಲಿ ಭಗವಾನ್ ಶ್ರೀರಾಮನನ್ನು ಕಂಡಿದ್ದರೆ, ಅದು ನಿಮಗೆ ತುಂಬಾ ಮಂಗಳಕರ ಕನಸಾಗಿರಬಹುದು. ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ನೋಡುವುದು ಜೀವನದಲ್ಲಿ ಅಪಾರ ಯಶಸ್ಸನ್ನು ತರುತ್ತದೆ. ಕನಸಿನಲ್ಲಿ ಭಗವಾನ್ ಶ್ರೀರಾಮನನ್ನು ನೋಡುವುದು ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸೇರಿದಂತೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ.  

ಕನಸಿನಲ್ಲಿ ರಾಮಮಂದಿರವನ್ನು ನೋಡುವುದರ ಅರ್ಥ: ಯಾವುದೇ ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ರಾಮಮಂದಿರವನ್ನು ನೋಡಿದರೆ, ಈ ಕನಸು ಅವನಿಗೆ ಮಂಗಳಕರವೆಂದು ಸಾಬೀತುಪಡಿಸಬಹುದು. ಇಂತಹ ಕನಸು ಬಿದ್ದರೆ ಶೀಘ್ರದಲ್ಲೇ ನಿಮ್ಮ ಎಲ್ಲಾ ಬಾಕಿ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ನಿಗದಿತ ಗುರಿಯನ್ನು ಸಾಧಿಸುತ್ತೀರಿ ಎಂದರ್ಥ

ಕನಸಿನಲ್ಲಿ ಶ್ರೀರಾಮ ಮತ್ತು ಹನುಮಂತನನ್ನು ನೋಡುವುದರ ಅರ್ಥ: ಯಾವುದೇ ರಾಮಭಕ್ತನು ತನ್ನ ಕನಸಿನಲ್ಲಿ ಭಗವಾನ್ ಶ್ರೀರಾಮ ಮತ್ತು ಹನುಮಂತನನ್ನು ಒಟ್ಟಿಗೆ ನೋಡಿದರೆ, ಈ ಕನಸು ಆ ವ್ಯಕ್ತಿಗೆ ಬಹಳ ಮಂಗಳಕರವಾಗಿರುತ್ತದೆ. ಈ ಕನಸು ವ್ಯಕ್ತಿಯ ಭವಿಷ್ಯಕ್ಕೆ ಮಂಗಳಕರವಾಗಿದೆ. ಶ್ರೀರಾಮ ಮತ್ತು ಹನುಮಂತನನ್ನು ಒಟ್ಟಿಗೆ ನೋಡುವುದು ಜೀವನದ ಎಲ್ಲಾ ತೊಂದರೆಗಳನ್ನು ತೊಡೆದುಹಾಕುವ ಸಂಕೇತವಾಗಿದೆ. 

ಇದನ್ನೂ ಓದಿ: ನಮ್ಮ ದೇಶದಲ್ಲಿ ಮಾತ್ರ ಕಂಡುಬರುವ ಪ್ರಾಣಿಗಳು ಯಾವುವು ಗೊತ್ತಾ?

ಕನಸಿನಲ್ಲಿ ಹನುಮಂತನ ದರ್ಶನ: ನೀವು ಕನಸಿನಲ್ಲಿ ಬಜರಂಗಬಲಿಯನ್ನು ಕಂಡರೆ ಅಥವಾ ಹನುಮಾನ್ ದೇವಸ್ಥಾನ, ವಿಗ್ರಹ ಇತ್ಯಾದಿಗಳನ್ನು ನಿಮ್ಮ ಕನಸಿನಲ್ಲಿ ನೋಡಿದರೆ, ಈ ಕನಸು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಕನಸಿನ ಅರ್ಥವೇನೆಂದರೆ, ಶೀಘ್ರದಲ್ಲೇ ನೀವು ಹನುಮಂತನಿಂದ ಆಶೀರ್ವದಿಸಲ್ಪಡುತ್ತೀರಿ ಮತ್ತು ಎಲ್ಲಾ ಶತ್ರುಗಳಿಂದ ನೀವು ಗೆಲುವು ಪಡೆಯುತ್ತೀರಿ ಎಂದರ್ಥ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News