Benefits Of Wearing Rudraksha: ಶ್ರೀಮದ್ ದೇವಿ ಭಗವತ್ ಪುರಾಣದ ಪ್ರಕಾರ, ಹತ್ತು ಮುಖಿ ರುದ್ರಾಕ್ಷಿಯು ವಿಷ್ಣುವಿನಿಂದ ಆಶೀರ್ವದಿಸಲ್ಪಟ್ಟಿದೆ. ಇದನ್ನು ಧರಿಸಿದವರ ಮೇಲೆ ವಾಮಾಚಾರದ ಪ್ರಭಾವ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಆದರೆ ಇದನ್ನು ಧರಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು. (Spiritual News In Kannada)
ಅಶಾಂತ ಗ್ರಹಗಳ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ವಾಸ್ತು ದೋಷಗಳನ್ನು ತೊಡೆದುಹಾಕಲು 10 ಮುಖಿ ರುದ್ರಾಕ್ಷಿಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಇದು ಎಲ್ಲಾ ನವಗ್ರಹಗಳನ್ನು ಶಾಂತಗೊಳಿಸುವ ಸಾಮರ್ಥ್ಯ ಹೊಂದಿದೆ.(1 to 21 Mukhi Rudraksha benefits)
ಯಾರ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿ ವಿರಾಜಮಾನನಾಗಿರುತ್ತಾನೆಯೋ ಅಥವಾ ವ್ಯಕ್ತಿ ಸಾಡೆಸಾತಿ ಮತ್ತು ಶನಿಯ ಎರಡೂವರೆ ವರ್ಷಗಳ ಕಾಟ ಎದುರಿಸುತ್ತಿರುತ್ತಾನೋ, ಆ ವ್ಯಕ್ತಿ ಹತ್ತು ಮುಖಿ ರುದ್ರಾಕ್ಷವನ್ನು ಧರಿಸಬೇಕು ಎಂದು ಹೇಳಲಾಗುತ್ತದೆ. ಇದರಿಂದ ಶನಿಯ ಶುಭಫಲ ಪ್ರಾಪ್ತಿಯಾಗುತ್ತದೆ. ನೆನಪಿನಲ್ಲಿಡಿ, ಧರಿಸುವ ಮೊದಲು ನಿಯಮಗಳನ್ನು ತಿಳಿದುಕೊಳ್ಳಿ.(Rudraksha faces and benefits)
ದೀರ್ಘಕಾಲದಿಂದ ನ್ಯಾಯಾಲಯದ ಯಾವುದೇ ಒಂದು ಖಟ್ಲೆಯಲ್ಲಿ ನೀವು ಸಿಲುಕಿಕೊಂಡಿದ್ದರೆ, ಅಥವಾ ಆಸ್ತಿ ವಿಷಯಗಳ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನೀವು ಹತ್ತು ಮುಖಿ ರುದ್ರಾಕ್ಷವನ್ನು ಬಳಸಬಹುದು. ಇದು ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಸಹಾಯಕ ಎಂದು ಸಾಬೀತುಪಡಿಸುತ್ತದೆ.
ಶಾಸ್ತ್ರಗಳ ಪ್ರಕಾರ, ಹತ್ತು ಮುಖಿ ರುದ್ರಾಕ್ಷವನ್ನು ಬಳಸುವುದರಿಂದ ಹತ್ತು ದಿಕ್ಕುಗಳ ಮತ್ತು ಹತ್ತು ಮಹಾವಿದ್ಯೆಗಳ ಅಧಿಪತಿಯ ಆಶೀರ್ವಾದವನ್ನು ಲಭಿಸುತ್ತದೆ ಎನ್ನಲಾಗುತ್ತದೆ.
ಶಾಸ್ತ್ರಗಳ ಪ್ರಕಾರ, ಮನೆಯಿಂದ ವಾಸ್ತು ದೋಷಗಳನ್ನು ತೊಡೆದುಹಾಕಲು, ಹರಳಿನ ಮಣಿಗಳಿಂದ ಹತ್ತು ಮುಖದ ರುದ್ರಾಕ್ಷದ ಮಾಲೆಯನ್ನು ಮಾಡಿ ಮತ್ತು ಅದನ್ನು ಸ್ವಲ್ಪ ಖಾಲಿ ಜಾಗವಿರುವಂತಹ ಸ್ಥಳದಲ್ಲಿ ಮನೆ ಅಥವಾ ಕೆಲಸದ ಸ್ಥಳದಲ್ಲಿ ನೇತುಹಾಕಿ. ಇದು ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಮನೆಯ ವಾತಾವರಣವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ-Bay Leaves Remedy: ರಾತ್ರೋರಾತ್ರಿ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ ತಮಾಲಪತ್ರದ ಈ ಉಪಾಯಗಳು!
ಒಂಟಿತನದ ಭಯವನ್ನು ತೊಡೆದುಹಾಕಲು ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಹತ್ತು ಮುಖಿ ರುದ್ರಾಕ್ಷವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ (Rudraksha for health problems).
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI